ತರಕಾರಿ ವ್ಯಾಪಾರಿಯೋರ್ವನನ್ನು ಸಬ್ ಇನ್ಸ್‌ಪೆಕ್ಟರ್‌ನ ಮಗನೊಬ್ಬ ಮನಬಂದಂತೆ ಕ್ರಿಕೆಟ್ ಬ್ಯಾಟ್‌ನಿಂದ ಥಳಿಸಿ ಕೊಂದ ಅಘಾತಕಾರಿ ಘಟನೆ ರಾಜಸ್ಥಾನದ ಜೈಪುರದ ಕರಣಿ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಕೊಲೆಗೈದ ಯುವಕನನ್ನು 23 ವರ್ಷದ ಕ್ಷಿತಿಜ್ ಶರ್ಮಾ ಎಂದು ಗುರುತಿಸಲಾಗಿದ್ದು, ಮೋಹನ್ ಲಾಲ್ ಸಿಂಧಿ (35) ಕೊಲೆಗೀಡಾದ ತರಕಾರಿ ವ್ಯಾಪಾರಿಯಾಗಿದ್ದಾನೆ. ಕೊಲೆ ಆರೋಪಿ ಕ್ಷಿತಿಜ್, ರಾಜಸ್ಥಾನದ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಪ್ರಶಾಂತ್ ಶರ್ಮಾ ಎಂಬವರ ಮಗನಾಗಿದ್ದಾನೆ.
ಕರಣಿ ವಿಹಾರ್ ಪ್ರದೇಶದಲ್ಲಿನ ರಜನಿ ಬಿಹಾರ್ ಕಾಲೋನಿಯಲ್ಲಿರುವ ಆರೋಪಿಯ ಮನೆಯ ಹೊರಗೆ ಈ ಘಟನೆ ನಡೆದಿದ್ದು, ಆತನ ತಂದೆ ಪ್ರಶಾಂತ್ ಶರ್ಮಾ ಮನೆಯೊಳಗಿದ್ದಾಗ ಈ ಘಟನೆ ನಡೆದಿದೆ ಎಂದು ರಾಜಸ್ಥಾನ ಪೊಲೀಸರು ಮಾಹಿತಿ ನೀಡಿದ್ದಾರೆ. ಹಲ್ಲೆಗೈಯ್ಯುತ್ತಿರುವ ದೃಶ್ಯವು ಸ್ಥಳೀಯ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
राजस्थान : जयपुर में पुलिस इंस्पेक्टर के बेटे क्षितिज शर्मा ने सब्जी बेचने वाले मोहनलाल सिंधी की क्रिकेट बैट से पीट–पीटकर जान ले ली।
🚨 Sensitive Visual🚨 pic.twitter.com/rZx3Ah6zFM
— Sachin Gupta (@SachinGuptaUP) April 4, 2024
ಮಂಗಳವಾರ ರಾತ್ರಿ ಮನೆಯ ಹೊರಗೆ ಈ ಘಟನೆ ನಡೆದಿದ್ದು, ಆ ಪ್ರದೇಶವನ್ನು ದಾಟುತ್ತಿದ್ದ ಮೋಹನ್ ಲಾಲ್ ಸಿಂಧಿಯ ಜತೆ ಕ್ಷಿತಿಜ್ ವಾಗ್ವಾದಕ್ಕೆ ಇಳಿದಿದ್ದಾನೆ. ವಾದವು ಉಲ್ಬಣಗೊಳ್ಳುತ್ತಿದ್ದಂತೆ, ಕ್ಷಿತಿಜ್ ಬ್ಯಾಟ್ ತರಲು ಮನೆಯೊಳಗೆ ಹೋದರು ಮತ್ತು ಸಿಂಧಿಯ ತಲೆಗೆ ಪದೇ ಪದೇ ಹೊಡೆದರು. ಅದು ಅವನ ಸಾವಿಗೆ ಕಾರಣವಾಯಿತು ಎಂದು ಘಟನೆಯ ಸಿಸಿಟಿವಿ ವೀಡಿಯೊವನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
“ಆರೋಪಿ ಕ್ಷಿತಿಜ್‌ನ ತಂದೆ ಯಾವುದೋ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದು ನೋಡಿದಾಗ ಸಿಂಧಿಯ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು, ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯ ವೈದ್ಯರು ಪರಿಶೀಲನೆ ಮಾಡಿದ ಬಳಿಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಸದ್ಯ, ಆರೋಪಿ, ಸಬ್ ಇನ್ಸ್‌ಪೆಕ್ಟರ್ ಮಗ ಕ್ಷಿತಿಜ್ ಶರ್ಮಾನ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ವಿಚಾರಣೆ ನಡೆಸಲಾಗುತ್ತಿದೆ” ಎಂದು ಡಿಸಿಪಿ ಅಮಿತ್ ಬುಧಾನಿಯಾ ತಿಳಿಸಿದ್ದಾರೆ.
