ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳು ʼದೇಶ ಉಳಿಸಿ ಸಂಕಲ್ಪ ಯಾತ್ರೆʼಯ ಭಾಗವಾಗಿ ಸಮಾವೇಶ ಸಭೆ ನಡೆಸಿದವು.
ನಗರದ ಜನಚೈತನ್ಯ ಸೇವಾ ಟ್ರಸ್ಟ್, ವಿಶ್ವ ಮಾನವ ಜೋಡಿ ರಸ್ತೆ ಕುವೆಂಪುನಗರದಲ್ಲಿ ಸಂವಿಧಾನವನ್ನು ಕಾಪಾಡಿಕೊಳ್ಳಲು, ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳಲು ಸಂಘಟನೆಗಳು ಸಭೆ ನಡೆಸಿದ್ದು, ದಸಂಸ, ಕರ್ನಾಟಕ ರಾಜ್ಯ ರೈತ ಸಂಘ, ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರುಗಳ ಒಳಗೊಂಡ ಸಭೆ ನಡೆದು ಈ ಭಾರಿ ಸಂವಿಧಾನ ಉಳಿಸಿಕೊಳ್ಳಲು ಕೋಮುವಾದಿ ಶಕ್ತಿಗಳನ್ನು ಮಣಿಸುವ ನಿರ್ಧಾರ ತೆಗೆದುಕೊಂಡರು.
ಸಭೆಯಲ್ಲಿ ವಿಶ್ರಾಂತ ಉಪ ಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ಸಂವಿಧಾನ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈಗಾಗಲೇ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಈಗಿರುವ ಸರ್ವಾಧಿಕಾರಿ ಧೋರಣೆಯ ಕೇಂದ್ರ ಸರ್ಕಾರದ ಸಂಸದರು ಸಿಕ್ಕಸಿಕ್ಕಲ್ಲಿ ನಮಗೆ ಅಧಿಕಾರ ಕೊಡಿ ಸಂವಿಧಾನ ಬದಯಿಸುತ್ತೇವೆ ಎನ್ನುವ ದುಂಡಾವರ್ತನೆ ತೋರುತ್ತಿದ್ದಾರೆ. ನಮಗೆ ಸಂವಿಧಾನ ಬೇಕಾ! ಬಿಜೆಪಿ ಬೇಕಾ ಎನ್ನುವುದನ್ನು ಜನರೇ ತೀರ್ಮಾನಿಸಬೇಕು. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಲೂಟಿ, ಸುಲಿಗೆಯಲ್ಲಿ ನಿರತವಾಗಿದೆ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ನೀಡದೆ ಮಲತಾಯಿ ಧೋರಣೆ ಅನುಸರಿಸಿದೆ. ಅಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಇದುವರೆಗೆ ಬರ ಪರಿಹಾರ ಬಿಡಿಕಾಸು ನೀಡದೆ ಉದ್ಧಟತನ ಮೆರೆದಿದೆ. ನಾವು 25 ಜನ ಸಂಸದರ ಆಯ್ಕೆ ಮಾಡಿ ಕಳಿಸಿದ್ದು, ಆದರೆ ಬಿಜೆಪಿ ಸಂಸದರಲ್ಲಿ ಒಬ್ಬರು ಸಹ ಇದರ ಬಗ್ಗೆ ಮಾತಾಡಲಿಲ್ಲ. ಯಾವ ಪುರುಷಾರ್ಥಕ್ಕೇ ಇಂತವರನ್ನು ಗೆಲ್ಲಿಸಬೇಕು. ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬರುತ್ತಾರೆ ಇವರೆಲ್ಲ. ಮಾನ ಮರ್ಯಾದೆ ಇರದ ಬಿಜೆಪಿ ಪಕ್ಷದವರು ಜನರಿಗೆ ಅನ್ಯಾಯ ಮಾಡೋದು ಚುನಾವಣೆ ಸಮಯದಲ್ಲಿ ಮಾತ್ರ ಜನರ ಮುಂದೆ ಬರೋದು ಇಂತವರಿಗೆ ಈ ಭಾರಿ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಬುದ್ದಿ ಕಲಿಸುತ್ತೇವೆ ಎಂದು ಗುಡುಗಿದರು.
ಹಿರಿಯ ಸಾಹಿತಿಗಳಾದ ಮುಕುಂದರಾಜ್ ಎಂ.ಎನ್ ಮಾತನಾಡಿ, ಬಿಜೆಪಿ ಕೇವಲ 10ವರ್ಷದಿಂದ ಆಳ್ವಿಕೆ ಮಾಡ್ತಿದೆ ಅನ್ನುವುದು ತಪ್ಪು 2 ಸಾವಿರ ವರ್ಷಗಳ ಇತಿಹಾಸ ಗಮನಿಸಿದರೆ ತಿಳಿಯುತ್ತದೆ ಪುರೋಹಿತರ ಹಿಡಿತ ಆಗಿನಿಂದ ಹಿಡಿದು ಇಗಿನವರೆಗು ಇದೆ ಆದೆ ಮನುಸ್ಮೃತಿ ಎಂದರು.
ಉದಾಹರಣೆಗೆ ಮೈಸೂರಿನಲ್ಲಿ ಟಿಪ್ಪು ಹೈದರಾಲಿ ಕಾಲದಿಂದಲೂ ನೋಡಿ, ಮೈಸೂರು ಒಡೆಯರ ಅಧಿಕಾರದಲ್ಲಿ, ಬ್ರಿಟಿಷರ ಕಾಲದಲ್ಲಿ ಕೂಡ ಗಮನಿಸಿ ದಿವಾನ್ ಪೂರ್ಣಯ್ಯ ಅವ್ರೆ ಮಂತ್ರಿ. ರಾಜ ಬದಲಾದರು ಮಂತ್ರಿ ಬದಲಾಗಲಿಲ್ಲ ಎಲ್ಲರ ಕಾಲದಲ್ಲೂ ಅವರೇ ಇದ್ದರೂ ಅಂದ್ರೆ ಅದೆ ಬ್ರಾಹ್ಮಣ್ಯ ಎಂದರು.
ಯಾವುದೇ ದೇಶ, ರಾಜ್ಯ ಸುಭಿಕ್ಷವಾಗಿ ನೆಮ್ಮದಿಯಾಗಿ ಇರುವಂತಿಲ್ಲ, ನೆಮ್ಮದಿಯಾಗಿ ಇದ್ದಾಗಲೆಲ್ಲ ನಡೆದ ಯಾಗ, ಯಜ್ಞ, ಅಶ್ವಮೇಧ ಇದೆಲ್ಲವೂ ಪುರೋಹಿತರ ಕುತಂತ್ರ ಅದರಿಂದಲೇ ಘರ್ಷಣೆ ತಂದು ಹಾಕಿ ಅದರಲ್ಲಿ ತಮ್ಮ ಹಿಡಿತ ಸಾಧಿಸಿದವರು.ಈಗಲೂ ಅಷ್ಟೇ ಜನ ಸಾಮಾನ್ಯರ ಬದುಕಿನ ಜತೆ ಆಟವಾಡುತ್ತಾ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ ಬಿಜೆಪಿ, ಆರ್‌ಎಸ್‌ಎಸ್ ಎಂದು ವಿಷಾಧಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಉಗ್ರ ನರಸಿಂಹೆ ಗೌಡ, ಅಲಗೂಡು ಶಿವಕುಮಾರ್, ಭೂಮಿಗೌಡ, ಖಲೀಲ್ ಉರ್ ರೆಹಮಾನ್, ಡಾ.ರಮೇಶ್ ಚೆಲ್ಲಂಕೊಂಡ, ಅಖಿಲಾ ನಾಗಸಂದ್ರ, ಕೆ.ವಿ.ಭಟ್, ಆರ್. ನಾಗೇಶ್ ಅರಳಕುಪ್ಪೆ, ಸವಿತಾ ಪಾ ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
