ಒಂದಲ್ಲ ಒಂದು ನೀತಿಗಳನ್ನು ಜಾರಿಗೊಳಿಸಿ ಕೇಂದ್ರ ಆಡಳಿತಾರೂಢ ಬಿಜೆಪಿಯು ಶಿಕ್ಷಣದ ಮೇಲೆ ಪ್ರಹಾರ ನಡೆಸುತ್ತಲೇ ಇದೆ. ಇದೀಗ ಅಪ್ರಜಾತಾಂತ್ರಿಕವಾಗಿ ಎನ್‌ಸಿಇಆರ್‌ಟಿಯ 12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಿಂದ ಬಾಬ್ರಿ ಮಸೀದಿ, ಹಿಂದುತ್ವ ರಾಜಕೀಯ, ಗುಜರಾತ್ ಗಲಭೆಗಳು ಸೇರಿದಂತೆ ಅನೇಕ ಅಂಶಗಳನ್ನು ತೆಗೆದುಹಾಕಲಾಗಿದೆ ಎಂದು ಎಐಡಿಎಸ್‌ಒ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಸಿದರು.
‘ಪ್ರಜಾತಾಂತ್ರಿಕ ಹಕ್ಕುಗಳು’ ಎಂಬ ಪಾಠದಿಂದ ಗುಜರಾತ್ ಗಲಭೆಗಳ ಅಂಶವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ‘ಭಾರತದ ರಾಜಕೀಯದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಎಂಬ ಪಾಠದಿಂದ ಬಾಬ್ರಿ ಮಸೀದಿ ಕುರಿತಾದ ಅಂಶಗಳನ್ನು ಕೈ ಬಿಟ್ಟು, ರಾಮ ಜನ್ಮಭೂಮಿ ಸುತ್ತುವರಿದಂತೆ ಹೆಚ್ಚಿನ ಗಮನ ನೀಡಲಾಗಿದೆ. ಇದಷ್ಟೇ ಅಲ್ಲದೆ ಪಠ್ಯದುದ್ದಕ್ಕೂ ಅಲ್ಪಸಂಖ್ಯಾತ ಸಮುದಾಯದ ಕುರಿತು ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ. ಇತಿಹಾಸ ಮತ್ತು ಸಮಾಜಶಾಸ್ತ್ರ ಪುಸ್ತಕಗಳಲ್ಲೂ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭೂ ಹಕ್ಕು ಕಲ್ಪಿಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ: ಸಚಿವ ಮಧು ಬಂಗಾರಪ್ಪ
ಅರ್ಕಾರದ ಇಂತಹ ನಡೆಯು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯ ಚಳವಳಿಯ ಹರಿಕಾರರು ಎತ್ತಿಹಿಡಿದ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಕೂಡಲೇ ಈ ತಿದ್ದುಪಡಿಗಳನ್ನು ಕೈಬಿಟ್ಟು ವಾಸ್ತವಾಂಶಗಳನ್ನು ಪಠ್ಯಕ್ಕೆ ಮರುಸೇರ್ಪಡೆ ಮಾಡಬೇಕು” ಎಂದು ಎಐಡಿಎಸ್‌ಒ ಆಗ್ರಹಿಸಿದೆ.
