ರಾಯಚೂರು | ಬಿಸಿಲ ಝಳ ತಾಳದೇ ವೃದ್ಧ ಸಾವು

Date:

Advertisements

ಇಡೀ ರಾಜ್ಯದಲ್ಲಿ ಬಿಸಿಲಿನ ವಾತಾವರಣವಿದ್ದು, ಉತ್ತರ ಕರ್ನಾಟಕವಂತೂ ಕಾದ ಹಂಚಾಗಿದೆ. ರಾಯಚೂರಿನಲ್ಲಿ ಬಿಸಿಲ ಝಳ ತಾಳಲಾರದೇ ವೃದ್ದರೊಬ್ಬರು ಭಾನುವಾರ ಮೃತ ಬಿಟ್ಟಿದ್ದಾರೆ. ವಾರದ ಹಿಂದೆಯಷ್ಟೇ ರಾಯಚೂರು ಜಿಲ್ಲೆಯಲ್ಲಿಯೇ ವ್ಯಕ್ತಿಯೊಬ್ಬರು ಬಿಸಿಲಿನಿಂದ ಮೃತಪಟ್ಟಿದ್ದರು.

ತಿಂಗಳ ಅಂತರದೊಳಗೆ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ರಾಯಚೂರು ನಗರದ ನಿವಾಸಿ ರಾಮಣ್ಣ ಕಬ್ಬೇರ್‌ ಎಂಬುವವರು ಭಾನುವಾರ ಬಿಸಿಲಿನಿಂದ ಬಳಲಿ ಮೃತಪಟ್ಟಿದ್ದು, ಅವರಿಗೆ 70 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ರಾಯಚೂರಿನ ಗೋಶಾಲಾ ರಸ್ತೆಯಲ್ಲಿರುವ ಯಕ್ಲಾಸಪುರ ಬಡಾವಣೆ ನಿವಾಸಿಯಾದ ರಾಮಣ್ಣ ಅವರು ಭಾನುವಾರ ಬೆಳಿಗ್ಗೆ ಬಿಸಿಲಿನಲ್ಲಿ ನಡೆದು ಹೊರಟಿದ್ದರು. ನಿಶ್ಯಕ್ತಿಗೆ ಒಳಗಾಗಿ ತಲೆ ಸುತ್ತಿನಿಂದ ಏಕಾಏಕಿ ರಸ್ತೆ ಬದಿಯಲ್ಲಿ ಮಲಗಿದ್ದರು. ಕುಸಿದು ಬಿದ್ದವರು ಅಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಕುಟುಂಬದವರು ಆಗಮಿಸಿದರೂ, ಅಷ್ಟರಲ್ಲಾಗಲೇ ರಾಮಣ್ಣ ಮೃತಪಟ್ಟಿದ್ದರು.

Advertisements

ಮಹಜರು ಕಾರ್ಯ ನಡೆಸಿದ ರಾಯಚೂರು ನಗರ ಪೊಲೀಸರು, ನಂತರ ಕುಟುಂಬದವರಿಗೆ ರಾಮಣ್ಣ ದೇಹವನ್ನು ಹಸ್ತಾಂತರಿಸಿದ್ದಾರೆ. ರಾಯಚೂರು ನಗರದಲ್ಲಿ ಒಂದೂವರೆ ತಿಂಗಳಿನಿಂದ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಇದೆ. ಕೆಲದಿನಗಳಿಂದ ಬಿಸಿಲು ಇನ್ನೂ ಹೆಚ್ಚಿದ್ದು, ಬಿಸಿ ಗಾಳಿಯೂ ಬೀಸುತ್ತಿದೆ. ಇದರಿಂದ ಜನ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ.

ಬೆಳಗ್ಗೆ 11ರ ನಂತರ ಹೊರಗೆ ಬರಬೇಡಿ ಎಂದು ಜನರಿಗೆ ತಿಳವಳಿಕೆ ನೀಡಲಾಗುತ್ತಿದೆ. ಆದರೂ, ಸಣ್ಣಪುಟ್ಟ ಕೆಲಸದ ಕಾರಣಕ್ಕೆ ಹೊರಗೆ ಬರುವವರ ಸಂಖ್ಯೆ ಹೆಚ್ಚಿದೆ. ವಯಸ್ಸಾದವರು ಹೊರ ಬಂದು ಸಂಕಷ್ಟಕ್ಕೆ ಸಿಲುಕುವುದು ಹೆಚ್ಚಿದೆ.

ಕಳೆದವಾರ ಲಿಂಗಸುಗೂರಿನ ಬಸ್‌ ನಿಲ್ದಾಣದ ಆವರಣದಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಿಂದ ಮೃತಪಟ್ಟ ಘಟನೆ ನಡೆದಿತ್ತು. ಮಸ್ಕಿ ತಾಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ ಎಂಬಾತ ಬಿಸಿಲಿನಿಂದ ಬಳಲಿ ನಿಲ್ದಾಣದಲ್ಲಿ ಕುಳಿತಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ, ರಾಯಚೂರು, ಬಾಗಲಕೋಟೆ, ಬೀದರ್‌, ವಿಜಯಪುರ, ಬಳ್ಳಾರಿ, ಗದಗ, ಕೊಪ್ಪಳ ಸಹಿತ ಹಲವು ಜಿಲ್ಲೆಗಳಲ್ಲಿ ಬಿಸಿಲಿನಿಂದ ಬಳಲಿ ನಿರ್ಜಲೀಕರಣಕ್ಕೆ ಅಸ್ವಸ್ಥರಾಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇನ್ನೂ ಮೂರರಿಂದ-ನಾಲ್ಕು ದಿನಗಳ ಕಾಲ ಬಿಸಿ ಗಾಳಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಲಿದೆ ಎಂದು, ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಮುನ್ಸೂಚನೆ ನೀಡಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X