ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ, ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಾನಾ ವೇಶಗಳನ್ನು ಧರಿಸಿ ಮತದಾರರನ್ನು ಒಲಿಸಲು ಅಭ್ಯರ್ಥಿಗಳು ಮುಂದಾಗಿದ್ದಾರೆ. ಹೂವಿನ ಹಾರ ಹಾಕಿಕೊಂಡು ಅಭ್ಯರ್ಥಿಗಳು ರಸ್ತೆಗಿಳಿದು ಮತದಾರರಿಗೆ ಕೈ ಮುಗಿದು ಮತ ಕೇಳುವುದು ಸರ್ವೇ ಸಾಮಾನ್ಯ. ಆದರೆ, ಸ್ವತಂತ್ರ ಪಕ್ಷದ ಅಭ್ಯರ್ಥಿಯೊಬ್ಬರು ಹೂವಿನ ಹಾರದ ಬದಲು ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸಿದ ಘಟನೆ ಉತ್ತರ ಪ್ರದೇಶದ ಅಲಿಘರ್‌ನಲ್ಲಿ ನಡೆದಿದೆ.
ಅಲಿಗಢದ ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್ ಅವರು ಚಪ್ಪಲಿ ಹಾರ ಹಾಕಿಕೊಂಡು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಹೂವಿನ ಹಾರದ ಬದಲು ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸಿದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಅಲಿಘರ್‌ನ ಪಂಡಿತ್ ಕೇಶವ್ ದೇವ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸ್ವತಃ ಕೇಶವ್ ದೇವ್ ಅವರೇ ಚಪ್ಪಲಿಯನ್ನು ಚುನಾವಣಾ ಚಿಹ್ನೆಗೆ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಅದರಂತೆ, ಚುನಾವಣಾ ಆಯೋಗವು ಅವರಿಗೆ ಚುನಾವಣಾ ಚಿಹ್ನೆಯಾಗಿ ಚಪ್ಪಲಿಯನ್ನು ನಿಗದಿಪಡಿಸಿದೆ. ಚಿಹ್ನೆ ದೊರೆತ ಬಳಿಕ ಕೊರಳಿಗೆ 7 ಚಪ್ಪಲಿಗಳನ್ನು ಹಾರ ಮಾಡಿ ಹಾಕಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಅಭ್ಯರ್ಥಿ
ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಉತ್ತರ ಪ್ರದೇಶವು 80 ಗರಿಷ್ಠ ಸಂಖ್ಯೆಯ ಸಂಸದರನ್ನು ಸಂಸತ್ತಿಗೆ ಕಳುಹಿಸುತ್ತದೆ. ಅಲಿಗಢ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.