‘ಹಿಗ್ಸ್ ಬೋಸಾನ್’ ಕಂಡುಹಿಡಿದ ಭೌತಶಾಸ್ತ್ರಜ್ಞ ಪೀಟರ್ ಹಿಗ್ಸ್ ನಿಧನ

Date:

Advertisements

ಹಿಗ್ಸ್ ಬೋಸಾನ್ ಎಂದು ಕರೆಯಲ್ಪಡುವ ಸೃಷ್ಟಿಯ ಮೂಲ ಧಾತು (ಗಾಡ್ ಪಾರ್ಟಿಕಲ್ ಅಥವಾ ದೇವ ಕಣ) ಕಂಡುಹಿಡಿದ, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತಶಾಸ್ತ್ರಜ್ಞ ಪೀಟರ್ ಹಿಗ್ಸ್ ತನ್ನ 94 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಎಡಿನ್‌ಬರ್ಗ್ ವಿಶ್ವವಿದ್ಯಾಲಯ ಮಂಗಳವಾರ ಪ್ರಕಟಿಸಿದೆ.

ರಕ್ತ ಸಂಬಂಧಿತ ಸಮಸ್ಯೆಯನ್ನು ಹೊಂದಿದ್ದ ಅವರು ಸೋಮವಾರ ಏಪ್ರಿಲ್ 8 ರಂದು ಮನೆಯಲ್ಲಿ ನಿಧನರಾದರು ಎಂದು ಅವರು ಸುಮಾರು ಐದು ದಶಕಗಳ ಕಾಲ ಪ್ರಾಧ್ಯಾಪಕರಾಗಿದ್ದ ಎಡಿನ್‌ಬರ್ಗ್ ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಹಾಗೆಯೇ ಎಡಿನ್‌ಬರ್ಗ್ ವಿಶ್ವವಿದ್ಯಾಲಯವು ಪೀಟರ್ ಹಿಗ್ಸ್ ಅವರನ್ನು “ಯುವ ವಿಜ್ಞಾನಿಗಳ ಪೀಳಿಗೆಗೆ ಸ್ಫೂರ್ತಿ ನೀಡುವ ಶ್ರೇಷ್ಠ ಶಿಕ್ಷಕ ಮತ್ತು ಮಾರ್ಗದರ್ಶಕ” ಎಂದು ಕರೆದಿದೆ. ಹಾಗೆಯೇ ಈ ಸಮಯದಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರು ತಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಅವರ ಕುಟುಂಬವು ಮನವಿ ಮಾಡಿರುವುದಾಗಿ ತಿಳಿಸಿದೆ.

Advertisements

ಇದನ್ನು ಓದಿದ್ದೀರಾ?   ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ನಿಧನ

ಬಿಗ್‌ ಬ್ಯಾಂಗ್ ನಂತರ ಸೃಷ್ಟಿಯ ಮೂಲ ಎನ್ನಲಾದ ಹಿಂಗ್ಸ್ ಬೋಸನ್ ಅಸ್ತಿತ್ವವನ್ನು ಪತ್ತೆ ಮಾಡಿದ ಆರು ಭೌತವಿಜ್ಞಾನಿಗಳಲ್ಲಿ ಪೀಟರ್ ಹಿಗ್ಸ್ ಕೂಡಾ ಒಬ್ಬರಾಗಿದ್ದಾರೆ. 1964ರಲ್ಲಿ ಮೊದಲ ಬಾರಿ ಈ ಸಿದ್ಧಾಂತವನ್ನು ಈ ವಿಜ್ಞಾನಿಗಳು ನಿರೂಪಿಸಿದರು.

1980ರಲ್ಲಿ ಷಿಕಾಗೊದಲ್ಲಿ ಮೊದಲ ಬಾರಿಗೆ ಈ ಕಣದ ಇರುವಿಕೆಯನ್ನು ಸಾಬೀತುಪಡಿಸುವ ಯತ್ನವನ್ನು ಪ್ರಾಯೋಗಿಕವಾಗಿ ಮಾಡಲಾಗಿದೆ. 2008ರ ಬಳಿಕ ಈ ಪ್ರಯತ್ನವನ್ನು ಸಿಇಆರ್‌ಎನ್ ಪ್ರಯೋಗಾಲಯವು ಮುಂದುವರಿಸಿದೆ. ಇನ್ನು ಕಣಭೌತಶಾಸ್ತ್ರದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್‌ಸ್ಟೀನ್ ಅವರು ಈ ಹಿಂದೆ ಮಂಡಿಸಿದ್ದ ಸಿದ್ಧಾಂತ ಪೀಟರ್ ಹಿಗ್ಸ್ ಅವರಿಗೆ ಪ್ರೇರಣೆಯಾಗಿತ್ತು.

“ಪೀಟರ್ ಹಿಗ್ಸ್ ಒಬ್ಬ ನಿಜವಾದ ಪ್ರತಿಭಾನ್ವಿತ ವಿಜ್ಞಾನಿ. ಅವರ ದೃಷ್ಟಿ ಮತ್ತು ಕಲ್ಪನೆಯು ನಮ್ಮನ್ನು ಸುತ್ತುವರೆದಿರುವ ಪ್ರಪಂಚದ ನಮ್ಮ ಜ್ಞಾನವನ್ನು ಹೆಚ್ಚಿಸಿದೆ. ಅವರ ಕೆಲಸವು ಸಾವಿರಾರು ವಿಜ್ಞಾನಿಗಳನ್ನು ಪ್ರೇರೇಪಿಸಿದೆ, ಮುಂದಿನ ಪೀಳಿಗೆಯನ್ನೂ ಪ್ರೇರೆಪಿಸುತ್ತದೆ” ಎಂದು ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಉಪಕುಲಪತಿ ಪೀಟರ್ ಮ್ಯಾಥಿಸನ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X