ಮತದಾನವು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಮತದಾನವು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರಂತೆ ಯಾರಿಗೂ ಕಡಿಮೆ ಇಲ್ಲದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಶೇಷಚೇತನರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾನಗಲ್ ತಾಲೂಕಿನ ಅಧ್ಯಕ್ಷ ಜಗದೀಶ್ ನಾಗಪ್ಪ ಹರಿಜನ ಹೇಳಿದರು.
ಈ ಕುರಿತು ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿರುತ್ತದೆ. 18 ವರ್ಷದಾಟಿದ ಎಲ್ಲರೂ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಾದ ಉತ್ತಮ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ತಿಳಿಸಿದ್ದಾರೆ.
ಮತದಾನ ಮಹಾತ್ವ ಪೂರ್ಣ ಕಾರ್ಯವಾಗಿದ್ದು ವಿಶೇಷ ಚೇತನರು ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯುವುದು ಸರಿಯಲ್ಲ. ಶೇ.100ರಷ್ಟು ಮತದಾನ ಪ್ರಮಾಣವನ್ನು ಹೆಚ್ಚಳ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನೀವು ಮತ ಚಲಾಯಿಸುವ ಜೊತೆಗೆ ಇತರೆ ಎಲ್ಲಾ ನಾಗರಿಕರಿಗೂ ಪಾಲಕ-ಪೋಷಕರಿಗೂ ನೆರೆ ಹೊರೆಯವರಿಗೂ ಜಾಗೃತಿ ಮೂಡಿಸಿ ಮತದಾನ ಮಾಡಿ ಚುನಾವಣೆಗಳಲ್ಲಿ ಮತದಾನವು ಪ್ರಮುಖ, ಪ್ರತಿಯೊಬ್ಬ ಭಾರತೀಯರು ಮತದಾನ ಮಾಡಬೇಕು ಅದು ಅವರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಉತ್ತಮ ಭಾರತಕ್ಕಾಗಿ ಮತ ಚಲಾಯಿಸುವ ಮೂಲಕ ನಮ್ಮ ದೇಶದ ಗೌರವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯೋಣ ಜನರಿಂದ ಜನರಿಗಾಗಿ ಮತದಾನವು ಸಂವಿಧಾನಿಕ ಹಕ್ಕು. ಅದನ್ನು ನಾವು ಚಲಾಯಿಸಬೇಕು. ಉತ್ತಮ ಆಯ್ಕೆ ನಿಮ್ಮದಾಗಿರಲಿ ಪ್ರತೀ ಮತವು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
