ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಗದಗ ಜಿಲ್ಲಾ ಸ್ವೀಪ್ ಸಮಿತಿಯಿಂದ ಮೇ 7ರಂದು ನಡೆಯುವ ಮತದಾನ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಗದಗನಗರದಲ್ಲಿ ವಿಕಲಚೇತನರು ಬೈಕ್ ರ್‍ಯಾಲಿ ನಡೆಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ-ಬೆಟಗೇರಿ ನಗರಸಭೆ ವತಿಯಿಂದ ಮತದಾನ ಜಾಗೃತಿ/ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿದ ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಮುಖ್ಯ ಕಾರ್ಯರ್ನಿಹಣಾಧಿಕಾರಿ ಭರತ್ .ಎಸ್ ಚಾಲನೆ ನೀಡಿದರು.
ಭೂಮರಡ್ಡಿ ಸರ್ಕಲ್‍ದಿಂದ ಗಾಂಧಿ ವೃತ್ತದವರೆಗೆ ಸಾಗಿದ ವಿಕಲಚೇತನರು ಯಂತ್ರಚಾಲಿತ ತ್ರಿಚಕ್ರ ವಾಹನದ ಬೈಕ್ ರ್‍ಯಾಲಿಯಲ್ಲಿ 18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು ತಮ್ಮ ಮತವನ್ನು ಚಲಾಯಿಸಲು ಹಾಗೂ ಅದರಲ್ಲಿಯೂ ವಿಶೇಷವಾಗಿ ವಿಕಲಚೇತನರು ಮತ ಚಲಾಯಿಸುವ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಸಿ.ಬಿ.ದೇವರಮನಿ, ಗದಗ-ಬೆಟಗೇರಿ ನಗರಸಭೆ ಆಯುಕ್ತ ಪ್ರಶಾಂತ ವರಗಪ್ಪನವರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಮಹಾಂತೇಶ, ಜಿಲ್ಲೆಯ ಎಲ್ಲಾ ತಾಲೂಕಿನ ಎಮ್.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಮತ್ತು ಯು.ಆರ್.ಡಬ್ಲ್ಯೂಗಳು ಹಾಗೂ ವಿಕಲಚೇತನರು ಪಾಲ್ಗೊಂಡಿದ್ದರು.
