ನಾನು ಡಿಕೆಶಿಗೆ ಸರಿಸಾಟಿ ಇದೀನಾ? ಇಲ್ಲವಾ? ಎಂಬುದು ಜನ ತೀರ್ಮಾನಿಸುತ್ತಾರೆ: ಕುಮಾರಸ್ವಾಮಿ

Date:

Advertisements

ನಾನು ಅವರಿಗೆ ಲೆಕ್ಕಕ್ಕೆ ಇದೀನಾ? ಸರಿಸಾಟಿ ಇದೀನಾ, ಇಲ್ಲವಾ? ಎಂಬುದನ್ನು ಜನರು ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ರಾಮನಾಥಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿ, “ಹೊಸ್ತೊಡಕು ದಿನ ನಮ್ಮ ತೋಟದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನಗೆ ಅಷ್ಟು ಜ್ಞಾನ ಇಲ್ಲವೇ? ಆದರೆ ಊಟವನ್ನೇ ದೊಡ್ಡ ವಿವಾದ ಮಾಡುತ್ತಿರುವ ಕಾಂಗ್ರೆಸ್ ನವರು ಅದೆಷ್ಟು ಹತಾಶರಾಗಿದ್ದಾರೆ ಎನ್ನುವುದು ಇದರಿಂದ ಅರ್ಥವಾಗುತ್ತದೆ” ಎಂದರು.

“ನಾನು ಜಾತಿ ಆಧಾರದಲ್ಲಿ ರಾಜಕಾರಣ ಮಾಡಿದವನಲ್ಲ. ಪಾಪ ನನ್ನ ಸ್ನೇಹಿತರಿಗೆ ಹಣದ ಮದ ನೆತ್ತಿಗೇರಿದೆ. ಕುಮಾರಸ್ವಾಮಿ ನನಗೆ ಡೋಂಟ್ ಕೇರ್ ಅಂದಿದ್ದಾರೆ, ನಾನೇನು ಲೆಕ್ಕಕ್ಕೆ ಇಟ್ಟುಕೊ ಎಂದು ಹೇಳಿದ್ದೀನಾ? ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಇವರ ಹಣ, ಅಧಿಕಾರ ಯಾವುದನ್ನೂ ತೀರ್ಮಾನ ಮಾಡಲ್ಲ” ಎಂದು ಹೇಳಿದರು.

Advertisements

“ಕೊತ್ವಾಲ್ ರಾಮಚಂದ್ರನ ಗರಡಿಯಲ್ಲಿ ಬಂದಿರುವವರು ನೀವು, ಸ್ಟ್ರೈಟ್ ಫೈಟರ್ ಆಗಿದ್ದರೆ ವಿಧಾನಸೌಧದಲ್ಲಿ ಫೈಟ್ ಮಾಡ್ತೀರಾ? ನೀವು ಬಂದಿರುವ ಹಿನ್ನೆಲೆ ಅಂತದ್ದೇ ಅಲ್ಲವೇ? ನಿಮ್ಮ‌ ಮದ ಇಳಿಸುವ ಕಾಲ ಸನಿಹಕ್ಕೆ ಬಂದಿದೆ” ಎಂದು ಕಿಡಿಕಾರಿದರು.

ಫೋನ್ ಟ್ಯಾಪಿಂಗ್

ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪಿಂಗ್ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಮಾಡಿರುವ ಆರೋಪದ ಬಗ್ಗೆ ಉತ್ತರಿಸಿ, “ನಾನು ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದರೆ ನನ್ನ ಸರಕಾರವನ್ನು ಯಾಕೆ ಬೀಳಿಸಿಕೊಳ್ಳುತ್ತಿದ್ದೆ? ಅವರು ತನಿಖೆ ಮಾಡಿಕೊಳ್ಳಲಿ, ಈವರೆಗೆ ತನಿಖೆ ಮಾಡಿದರಲ್ಲ, ಅದು ಏನಾಯಿತು?” ಎಂದು ತರಾಟೆಗೆ ತೆಗೆದುಕೊಂಡರು.

ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಮಠ ಮಾಡಿದರು ಎನ್ನುವ ಬಗ್ಗೆ ಉತ್ತರಿಸಿ, “ಬೇರೆ ಸಮುದಾಯಗಳಲ್ಲೂ ಎಷ್ಟು ಮಠಗಳಿಲ್ಲ? ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೇವೆ. ಅದರಲ್ಲಿ ಏನಿದೆ? ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕಾ” ಎಂದು ಪ್ರಶ್ನಿಸಿದರು.

“ಜೆಡಿಎಸ್ ಎಲ್ಲಿದೆ ಎನ್ನುವ ದುರಹಾಂಕರ ಮಾತುಗಳನ್ನು ಇವರು ಆಡುತ್ತಿದ್ದಾರೆ. ಅವರ ಸಹವಾಸ ಮಾಡಿದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟರಲ್ಲ, ಅದಕ್ಕೆ‌ ಮರು ಜೀವ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಕದಲ್ಲಿಯೇ ಕೂತು ಹಳ್ಳ ತೋಡಿದ್ರಲ್ಲ, ಎಲ್ಲಾ ನೆನಪಿದೆ ನನಗೆ” ಎಂದು ಆಕ್ರೋಶ ಹೊರಹಾಕಿದರು.

ಧರ್ಮಸ್ಥಳದಲ್ಲಿ ಸರಕಾರ ತೆಗೆಯಲು ಷಡ್ಯಂತ್ರ

“ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಮೈತ್ರಿ ಸರಕಾರ ತೆಗೆಯಲು ಗುಳಿಗೆ ಅರೆದಿದ್ದನ್ನು ನೀವೇ (ಮಾಧ್ಯಮಗಳು) ತೋರಿಸಿದರಲ್ಲ. ಅದಕ್ಕೆ ಹಾಸನಾಂಬೆಯ ಮುಂದೆ ಪ್ರಮಾಣ ಮಾಡಬೇಕಾ? ಧರ್ಮಸ್ಥಳದಲ್ಲಿ ಕುತಂತ್ರ ಮಾಡಿ ಬಂದರಲ್ಲ, ಈ ಸರಕಾರ ಒಂದೇ ವರ್ಷ ಎಂದು ಹೇಳಿದರಲ್ಲ. ಆ ಮೇಲೆ ಏನಾಯಿತು ಎನ್ನುವುದು ನಾಡಿನ ಜನರಿಗೆ ಗೊತ್ತಿದೆಯಲ್ಲ” ಎಂದರು.

ಮಾಜಿ ಶಾಸಕ ಪ್ರೀತಮ್ ಗೌಡ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, “ಪದೇ ಪದೆ ಯಾಕೆ ಅವರ ಹೆಸರು ಎಳೆದು ತರುತ್ತೀರಿ? ಅವರು ಎನ್‌ಡಿಎ ಪರ ಮತ ಕೇಳಿದ್ದಾರೆ. ಎನ್‌ಡಿಎ ಅಭ್ಯರ್ಥಿಗೆ ಮತ ಕೊಡಿ ಎಂದು ಹೇಳಿದ್ದಾರೆ. ಯಾವುದೇ ಗೊಂದಲ ಇಲ್ಲ” ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X