ರಾಜ್ಯದ ಜಿಲ್ಲೆಗಳಲ್ಲಿ ಭಾಗಗಳಲ್ಲಿ ಬಿಸಿಲು ಅಧಿಕವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚಿನ ತಾಪಮಾನ ದಾಖಲಾಗಿತ್ತು. ಬಿಸಿಲನಗರಿಗೆ ಸದ್ಯ ವರುಣನ ಕೃಪೆಯಾಗಿದೆ.
ಏ.11ರಂದು ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಕಲಬುರಗಿ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಲಬುರಗಿಯಲ್ಲಿ ಈ ವರ್ಷ ದಾಖಲಾದ ಗರಿಷ್ಠ ತಾಪಮಾನ 43.1 ಡಿಗ್ರಿ ಸೇಲ್ಸಿಯಸ್‌ಗೂ ಅಧಿಕ.
ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ತೆಳುವಾದ ಬಟ್ಟೆ ಧರಿಸಿ, ತಲೆಗೆ ಕ್ಯಾಪ್ ಧರಿಸಿ, ಅಧಿಕವಾಗಿ ನೀರನ್ನು ಸೇವಿಸಿ, ಎಳೆನೀರು, ತಂಪು ಪಾನೀಯ, ಸೇವಿಸಿ, ಬೆಳಿಗ್ಗೆ 11 ಗಂಟೆಯಾದರೆ ಸಾಕು ಬಿಸಿಲಿನ ತಾಪ ಆರಂಭ ಮಧ್ಯಾಹ್ನ 1 ಗಂಟೆಯಾದ್ರೆ ಯಾರು ರಸ್ತೆ ಮೇಲೆ ಅನಗತ್ಯವಾದ ಓಡಾಟ ಬೇಡಾ, ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಜನರಿಗೆ ಸಲಹೆ ನೀಡಿದ್ದಾರೆ.
ನೀರಿನ ಸಮಸ್ಯೆಯೂ ಉಲ್ಬಣ
ಜಿಲ್ಲೆಯಲ್ಲಿ ಒಂದೆಡೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ಮತ್ತೊಂದೆಡೆ ನೀರಿನ ಸಮಸ್ಯೆಯು ಸಹ ತಲೆದೂರಿದೆ. ಜನ ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲದ ಪರಿಸ್ಥಿತಿ ಉದ್ಭವವಾಗಿದ್ದು. ಹಲವೆಡೆ ನೀರಿಗಾಗಿ ಪ್ರತಿಭಟನೆ ಧರಣಿ ನಡೆಸಿರುವುದು ಕಾಣಬಹುದು.
ಮೊನ್ನೆ ಅಷ್ಟೆ ಅಫಜಲಪುರ ತಾಲೂಕಿನ ಗುಡ್ಡೆವಾಡಿ ಗ್ರಾಮದ ಬಂಡೆಪ್ಪಾ ಪೂಜಾರಿ ಎಂಬುವವರ ಗರ್ಭಿಣಿ ಹಸು, ನೀರು ಕುಡಿಯಲು ಸಿಗದೆ ಇರುವುದರಿಂದ ಉಸುಕಿನಲ್ಲಿ ಕಾಲು ತಿಕ್ಕಿ ಕೊನೆಉಸಿರೆಳೆದ ಘಟನೆ ನಡೆದಿದೆ.
ಜಿಲ್ಲೆಯ ಅನೇಕ ಹಳ್ಳಿ, ನಗರ ಗ್ರಾಮಗಳಲ್ಲಿ ಬಿಸಿಲಿನ ತಾಪಮಾನಕ್ಕೆ ಕೆರೆ, ನದಿ ಬೋರ್ವೆಲ್‌ಗಳು ಬತ್ತಿ ಹೋಗಿವೆ. ಕುಡಿಯಲು, ಬಳಸಲು ನೀರು ಇಲ್ಲದೇ ಕಂಗಲಾದ ಜನರು ಮನೆಗಳಿಗೆ ಟ್ಯಾಂಕರ್ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸದ್ಯ ಕಲಬುರಗಿಯಲ್ಲಿ ಮಳೆಯಾಗಿದ್ದು ನಗರದ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
