17 ಭಾರತೀಯ ಸಿಬ್ಬಂದಿಗಳಿದ್ದ ಇಸ್ರೇಲ್‌ ಮೂಲದ ಸರಕು ಹಡಗು ವಶಪಡಿಸಿಕೊಂಡ ಇರಾನ್

Date:

Advertisements

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು ಸಾಗಣೆ ಹಡಗನ್ನು ಶನಿವಾರ ವಶಪಡಿಸಿಕೊಂಡಿದೆ.

ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ಸದಸ್ಯರು ಹೆಲಿಕಾಪ್ಟರ್‌ನಿಂದ ಇಳಿದು ಹಾರ್ಮುಜ್ ಜಲಸಂಧಿ ಬಳಿ ಎಂಎಸ್‌ಸಿ ಏರಿಸ್ ಹಗಡನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದ್ದು ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ತಿಂಗಳ ಆರಂಭದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಮಾಜಿ ಕಾನ್ಸುಲೇಟ್ ಮೇಲೆ ದಾಳಿ ನಡೆದ ಬಳಿಕ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ.

Advertisements

ಇದನ್ನು ಓದಿದ್ದೀರಾ?  ಇಸ್ರೇಲ್ ಕಡೆಗೆ ಹಲವು ಡ್ರೋನ್‌ಗಳನ್ನು ಹಾರಿಸಿದ ಇರಾನ್: ಯುದ್ಧದ ಭೀತಿ

ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿತ್ತು. ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಇಸ್ರೇಲ್ ಮೇಲೆ ಡ್ರೋನ್ ದಾಳಿಯನ್ನು ಆರಂಭಿಸಿದೆ. ಈಗ ಸರಕು ಸಾಗಣೆ ಹಡಗನ್ನು ವಶಕ್ಕೆ ಪಡೆದಿದೆ.

ಹಡಗು ಲಂಡನ್ ಮೂಲದ ಝೋಡಿಯಾಕ್ ಮ್ಯಾರಿಟೈಮ್‌ ಸಂಸ್ಥೆಗೆ ಸೇರಿದ್ದಾಗಿದೆ. ಝೋಡಿಯಾಕ್ ಮ್ಯಾರಿಟೈಮ್‌ ಇಸ್ರೇಲಿ ಬಿಲಿಯನೇರ್ ಇಯಾಲ್ ಆಫರ್‌ನ ಝೋಡಿಯಾ ಗ್ರೂಪ್‌ನ ಭಾಗವಾಗಿದೆ. ಹಗಡು ಇರಾನ್ ವಶದಲ್ಲಿರುವುದನ್ನು ಎಂಎಸ್‌ಸಿ ಒಪ್ಪಿಕೊಂಡಿದ್ದು ಈ ಹಡಗಲ್ಲಿ 25 ಸಿಬ್ಬಂದಿ ಹಡಗಿನಲ್ಲಿದ್ದರು ಎಂದು ಹೇಳಿದೆ.

ಇದನ್ನು ಓದಿದ್ದೀರಾ?   ಇಸ್ರೇಲ್ ಮೇಲೆ ಶೀಘ್ರ ಇರಾನ್ ದಾಳಿ ಸಾಧ್ಯತೆ: ಬೈಡನ್ ಎಚ್ಚರಿಕೆ

ವಿಮಾನದಲ್ಲಿ 17 ಭಾರತೀಯ ಪ್ರಜೆಗಳಿದ್ದಾರೆ ಮತ್ತು ಭಾರತೀಯರ ಭದ್ರತೆ ಮತ್ತು ಶೀಘ್ರ ಬಿಡುಗಡೆಗಾಗಿ ಅಧಿಕಾರಿಗಳು ಇರಾನ್‌ನೊಂದಿಗೆ ಮತ್ತು ಇರಾನ್‌ ರಾಯಭಾರಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನವದೆಹಲಿಯ ಮೂಲಗಳು ತಿಳಿಸಿವೆ. ಇರಾನ್ ಮತ್ತು ಇಸ್ರೇಲ್ ದೇಶಕ್ಕೆ ಪ್ರಯಾಣಿಸದಂತೆ ಭಾರತವು ಇತ್ತೀಚೆಗೆ ಸಲಹೆಯನ್ನು ನೀಡಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X