ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯು ‘ಸಂಕಲ್ಪ ಪತ್ರ’ ಎಂಬ ಶೀರ್ಷಿಕೆಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಈ ಪ್ರಣಾಳಿಕೆಯನ್ನು ಟೀಕಿಸಿದ ವಿಪಕ್ಷಗಳು ‘ಗೋಲ್‌ಪೋಸ್ಟ್’ ಬದಲಿಸುತ್ತಿರುವವರು ಒಲಿಂಪಿಕ್ಸ್ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಪ್ರಣಾಳಿಕೆಯನ್ನು ಟೀಕೆ ಮಾಡಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕರಾದ ಪವನ್ ಖೇರಾ, ಸುಪ್ರಿಯಾ ಶ್ರೀನತೆ ಮತ್ತು ಅಮಿತಾಭ್ ದುಬೆ “ಬಿಜೆಪಿ ನಾಯಕರು ಈಗ ತುಂಬಾ ಸುಳ್ಳು ಹೇಳುತ್ತಾರೆ, ಯಾರೂ ನಂಬುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
नरेंद्र मोदी और BJP ने वादा किया था-
– मैन्युफैक्चरिंग में 10 करोड़ रोजगार पैदा करेंगे, लेकिन 2.5 करोड़ रोजगार कम हो गए।
– ‘स्किल इंडिया मिशन’ में 40 करोड़ देशवासियों को स्किल ट्रेनिंग दी जाएगी, लेकिन 1.4 करोड़ लोगों को ही ट्रेनिंग दी गई।
– शिक्षा के स्तर में सुधार किया… pic.twitter.com/KWysRyZOnj
— Congress (@INCIndia) April 14, 2024
“ಕಳೆದ ಕೆಲವು ವರ್ಷಗಳಿಂದ ದೇಶದ ಯುವಕರು ಮತ್ತು ರೈತರಿಗೆ ಅನುಕೂಲವಾಗುವ ಯಾವುದೇ ಕೆಲಸವನ್ನು ಬಿಜೆಪಿ ಮಾಡಿಲ್ಲ. ಯುವಕರು ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಹಣದುಬ್ಬರದಲ್ಲಿ ಏರಿಕೆ ಕಂಡುಬರುತ್ತಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಹಾಗಿರುವಾಗ ಪ್ರಣಾಳಿಕೆಯನ್ನು ನಂಬುವುದು ಸರಿಯಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಿಸಿದ್ದಾರೆ.
“ಹಿಂದಿನ ಯಾವುದೇ ಸರ್ಕಾರಗಳು ಬಿಜೆಪಿಯಂತೆ ಗೋಲ್‌ಪೋಸ್ಟ್‌ಗಳನ್ನು ಬದಲಾಯಿಸುವ ‘ರೋಗ’ವನ್ನು ಹೊಂದಿರಲಿಲ್ಲ. 2014ರಲ್ಲಿ ನೀವು ಏನು ಹೇಳಿದ್ದೀರೋ ಅದರ ಬಗ್ಗೆ 2019ರಲ್ಲಿ ಯಾವುದೇ ಮಾಹಿತಿ ನೀಡಿಲ್ಲ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ ಬಿಡುಗಡೆ
“2024ರಲ್ಲಿ 2047ರ ಬಗ್ಗೆ ಮಾತನಾಡುತ್ತಿದ್ದೀರಿ. ಅವರು (ಬಿಜೆಪಿ) 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವುದಾಗಿ ಪ್ರಣಾಳಿಕೆಯಲ್ಲಿ ಬರೆದಿದ್ದಾರೆ. ಆಗ ನೀವು ಎಲ್ಲಿರುತ್ತೀರಿ, ನಿಮ್ಮ ಸರ್ಕಾರ ಇರುತ್ತಾ? ನೀವು ಕಳೆದ 5 ವರ್ಷಗಳ ಬಗ್ಗೆ ಮೊದಲು ಮಾತನಾಡಿ ಬಳಿಕ ಮುಂಬರುವ ಐದು ವರ್ಷಗಳ ಬಗ್ಗೆ ಮಾತನಾಡಿ” ಎಂದು ಪವನ್ ಖೇರಾ ಹೇಳಿದರು.
ಪ್ರಣಾಳಿಕೆಯನ್ನು ‘ಕ್ಷಮಾಪತ್ರ’ ಮತ್ತು ‘ಜುಮ್ಲಾ ಪತ್ರ’ (ಪೊಳ್ಳು ಆಶ್ವಾಸನೆ) ಎಂದು ಕರೆದ ಪವನ್ ಖೇರಾ “ಬಿಜೆಪಿಯ ಸಂಕಲ್ಪ ಪತ್ರ ಎಂಬ ಹೆಸರಿನ ಬಗ್ಗೆ ನಮಗೆ ತೀವ್ರ ಆಕ್ಷೇಪವಿದೆ. ಅದನ್ನು ನಾವು ಕ್ಷಮಾಪತ್ರ ಎಂದು ಹೆಸರಿಸಬೇಕು. ಮೋದಿ ಅವರು ದೇಶದ ದಲಿತರು, ರೈತರು, ಯುವಕರು ಮತ್ತು ಬುಡಕಟ್ಟು ಜನರ ಕ್ಷಮೆ ಕೇಳಬೇಕಿತ್ತು” ಎಂದಿದ್ದಾರೆ.
“ಕಪ್ಪುಹಣದ ವಿರುದ್ಧದ ಕ್ರಮದಿಂದ ಹಿಡಿದು ರೈತರ ಸಂಕಷ್ಟದವರೆಗೆ, ವಿದೇಶಾಂಗ ನೀತಿಯವರೆಗೆ ಪ್ರಣಾಳಿಕೆಯಲ್ಲಿ ಮಾಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. 2022 ರ ವೇಳೆಗೆ ನಾವು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಬಿಜೆಪಿ ಹೇಳಿದೆ. ಆದರೆ ಇಂದು ರೈತರ ಆದಾಯ ಕಡಿಮೆಯಾಗಿದೆ, ಸಾಲ ದ್ವಿಗುಣವಾಗಿದೆ” ಎಂದು ಖೇರಾ ಟೀಮಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಪ್ರಣಾಳಿಕೆ ‘ಮುಸ್ಲಿಂ ಲೀಗ್’ ಗುರುತು ಹೊಂದಿದೆ ಎಂದ ಮೋದಿ; ಬಿಜೆಪಿ ಇತಿಹಾಸ ನೆನಪಿಸಿದ ಕಾಂಗ್ರೆಸ್
ಇರಾನ್ ಮತ್ತು ಇಸ್ರೇಲ್ ನಡುವಿನ ಇತ್ತೀಚಿನ ಉದ್ವಿಗ್ನತೆಯ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಖೇರಾ, ಮೋದಿ ಸರ್ಕಾರದ ವಿದೇಶಾಂಗ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಬ್ಬ ವ್ಯಕ್ತಿಯ ಸುಳ್ಳು ವೈಭವೀಕರಿಸಲ್ಪಟ್ಟಿದೆ. 10-12 ದಿನಗಳ ಹಿಂದೆ ಮೋದಿ ಸರ್ಕಾರ ಭಾರತೀಯ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಿದೆ. ಈಗ ಸರ್ಕಾರವು ಅವರನ್ನು ಮರಳಿ ಕರೆತರಲು ಯುದ್ಧವನ್ನು ನಿಲ್ಲಿಸುತ್ತದೆಯೇ” ಎಂದು ಪ್ರಶ್ನಿಸಿದರು.
ಆಮ್ ಆದ್ಮಿ ಪಕ್ಷವೂ ಸಹ ಪ್ರಣಾಳಿಕೆಯನ್ನು ಟೀಕಿಸಿದೆ. ಎಎಪಿ ನಾಯಕಿ ಅತಿಶಿ, “ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗಾಗಿ ಬಿಜೆಪಿಯ ಜುಮ್ಲಾ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರಣಾಳಿಕೆಯು ಅವರು ನೀಡಿದ ಮತ್ತು ಎಂದಿಗೂ ಈಡೇರಿಸದ ಭರವಸೆಗಳನ್ನು ಎತ್ತಿ ತೋರಿಸುತ್ತದೆ” ವ್ಯಂಗ್ಯ ಮಾಡಿದ್ದಾರೆ.
“ಮೋದಿ ಅವರು ಯುವಕರಿಗೆ ಉದ್ಯೋಗದ ಭರವಸೆ ನೀಡಿದ್ದರು. 2019 ರಲ್ಲಿ ಚುನಾವಣಾ ಭರವಸೆಗಳಲ್ಲಿ ಇದು ಕೂಡಾ ಒಂದಾಗಿತ್ತು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಅವರು ಯಾವುದೇ ಉದ್ಯೋಗವನ್ನು ಒದಗಿಸಿಲ್ಲ. ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಯುವಕರು ನಿರುದ್ಯೋಗಿಗಳಾಗಿದ್ದಾರೆ” ಎಂದು ಹೇಳಿದರು.