ಇರಾನ್-ಇಸ್ರೇಲ್ ಉದ್ವಿಗ್ನತೆ | ಮಿತ್ರ ದೇಶಗಳು ಶತ್ರುಗಳಾಗಿದ್ದು ಹೇಗೆ?; ಸಂಕ್ಷಿಪ್ತ ಇತಿಹಾಸ

Date:

Advertisements
ಸಿರಿಯಾದಲ್ಲಿ ಇಸ್ರೇಲ್ ನಡೆಸಿದ ವಿಧ್ವಂಸಕ ಕೃತ್ಯವು ಅಂತಾರಾಷ್ಟ್ರೀಯ ಶಾಂತಿ ಕಾನೂನಿನ ಉಲ್ಲಂಘನೆಯಾಗಿದೆ. ದಾಳಿಗೊಳಗಾದ ರಾಷ್ಟ್ರವು ಪ್ರತೀದಾಳಿ ನಡೆಸುವ ಹಕ್ಕನ್ನೂ ಹೊಂದಿದೆ. ಇದೀಗ, ಇಸ್ರೇಲ್ ಮೇಲೆ ಇರಾನ್ ನಡೆಸಿರುವ ದಾಳಿಯ ಅರ್ಥವೂ ಇದೇ ಆಗಿದೆ.

ಇತ್ತೀಚೆಗೆ, ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಕಚೇರಿಯನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ, ಅಲ್ಲಿದ್ದ ಅಧಿಕಾರಿಗಳನ್ನು ಕೊಂದು ಹಾಕಿತು. ಈ ಘಟನೆಗೆ ಪ್ರತೀಕಾರವಾಗಿ ಇಸ್ರೇಲ್‌ ಮೇಲೆ ಇರಾನ್ ಪ್ರತಿದಾಳಿಗೆ ಮುಂದಾಗಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸುವ ಎಲ್ಲ ಸಾಧ್ಯತೆಗಳೂ ಇವೆ. ಇಸ್ರೇಲ್ ಪರ ಧೋರಣೆ ಹೊಂದಿರುವ ಅಮೆರಿಕಾ ತನ್ನ ಸೇನೆಯನ್ನು ಮಧ್ಯ ಪ್ರಾಚ್ಯದಲ್ಲಿ ನಿಯೋಜಿಸುತ್ತಿದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿನ್ನೆ (ಶನಿವಾರ) ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಶನಿವಾರ ತಡರಾತ್ರಿ ಇಸ್ರೇಲ್ ಮೇಲೆ ಇರಾನ್ ಮಾನವರಹಿತ ಡ್ರೋನ್‌ಗಳನ್ನು ಹಾರಿಸಿದೆ. ಡ್ರೋನ್ ಹಾರಾಟವನ್ನು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾದ ಬೆದರಿಕೆಯೆಂದು ಇಸ್ರೇಲ್ ಹೇಳಿಕೊಂಡಿದೆ. ಅಲ್ಲದೆ, ತನ್ನ ವಾಯುನೆಲೆಯನ್ನು ಅನ್ಯ ದೇಶಗಳಿಗೆ ಮುಚ್ಚಿದೆ.

ಸಿರಿಯಾದಲ್ಲಿ ಇಸ್ರೇಲ್ ನಡೆಸಿದ ವಿಧ್ವಂಸಕ ಕೃತ್ಯವು ಅಂತಾರಾಷ್ಟ್ರೀಯ ಶಾಂತಿ ಕಾನೂನಿನ ಉಲ್ಲಂಘನೆಯಾಗಿದೆ. ಹೀಗೆ ದಾಳಿಗೊಳಗಾದ ರಾಷ್ಟ್ರವು ಪ್ರತೀದಾಳಿ ನಡೆಸುವ ಹಕ್ಕನ್ನೂ ಹೊಂದಿದೆ. ಇದೀಗ, ಇಸ್ರೇಲ್ ಮೇಲೆ ಇರಾನ್ ನಡೆಸಿರುವ ದಾಳಿಯ ಅರ್ಥವೂ ಇದೇ ಆಗಿದೆ.

Advertisements

ಉಭಯ ರಾಷ್ಟ್ರಗಳ ನಡುವಿನ ಇಂತಹ ಉದ್ವಿಗ್ನತೆ ಇದೇ ಮೊದಲೇನೂ ಅಲ್ಲ. ಆದರೆ, ಡಮಾಸ್ಕಸ್‌ನಲ್ಲಿ ನಡೆದ ದಾಳಿಯು ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಾವಧಿಯ ವೈಷಮ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ. ತೀವ್ರಗೊಂಡಿರುವ ಈ ಉದ್ವಿಘ್ನತೆಯ ನಡುವೆಯೂ ಉಭಯ ರಾಷ್ಟ್ರಗಳ ನಡುವೆ ಯುದ್ಧ ಘೋಷಣೆ ಆಗಿಲ್ಲ. ಆದರೆ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಬೆಂಬಲ ಸಾರಿದ್ದಾರೆ. ಆ ದೇಶವನ್ನು ರಕ್ಷಿಸಲು ಪಣ ತೊಟ್ಟಿದ್ದಾರೆ. ಅಮೆರಿಕೆಯ ಪಡೆಯನ್ನು ಸಾವಿರಾರು ಸಂಖ್ಯೆಯಲ್ಲಿ ಮಧ್ಯ ಪ್ರಾಚ್ಯಕ್ಕೆ ಕಳಿಸುತ್ತಿದ್ದಾರೆ.

ಈ ಎರಡೂ ದೇಶಗಳು ಹತ್ತಾರು ವರ್ಷಗಳಿಂದ ಪರಸ್ಪರರ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಈ ಬಿಕ್ಕಟ್ಟಿನ ಸಂಕ್ಷಿಪ್ತ ಇತಿಹಾಸ ಇಲ್ಲಿದೆ;

ಸಂಘರ್ಷದ ಮೂಲ
1948ಕ್ಕೂ ಮೊದಲು ಇಸ್ರೇಲ್‌ನೊಂದಿಗೆ ಇರಾನ್ ಸೌಹಾರ್ದ ಸಂಬಂಧ ಹೊಂದಿತ್ತು. 1948ರಲ್ಲಿ ಇಸ್ರೇಲ್‌ಅನ್ನು ಸಾರ್ವಭೌಮ ರಾಷ್ಟ್ರವೆಂದು ಇರಾನ್ ಮಾನ್ಯ ಮಾಡಿತ್ತು.

ಇರಾನಿನ 1979ರ ಕ್ರಾಂತಿಯ ನಂತರ, ಇರಾನ್ ತನ್ನನ್ನು ಇಸ್ಲಾಮಿಕ್ ಗಣರಾಜ್ಯವಾಗಿ ಘೋಷಿಸಿಕೊಂಡಿತು. ಪರಿಣಾಮವಾಗಿ ಇಸ್ರೇಲಿ ಸರ್ಕಾರವು ಇರಾನ್ ವಿರುದ್ಧ ಆಕ್ರಮಣಕಾರಿ ನಿಲುವುಗಳನ್ನು ಅಳವಡಿಸಿಕೊಂಡಿತು. ಪ್ರತಿಕ್ರಿಯೆಯಾಗಿ, ಇಸ್ರೇಲ್‌ನೊಂದಿಗೆ ಇರಾನ್ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. 1979ರಲ್ಲಿ ಬಂದ ಇರಾನಿನ ಹೊಸ ನಾಯಕತ್ವವು ಇಸ್ರೇಲ್‌ನಿಂದ ದೂರ ಸರಿಯಿತು. ಪ್ಯಾಲೇಸ್ಟಿನಿಯನ್ ಲಿಬರೇಶನ್ ಆರ್ಗನೈಸೇಶನ್ ಸೇರಿದಂತೆ ಪ್ಯಾಲೇಸ್ಟಿನಿಯನ್ ವಿಮೋಚನಾ ಚಳುವಳಿಗಳಿಗೆ ಬೆಂಬಲವನ್ನೂ ನೀಡಿತು.

ಎರಡು ದೇಶಗಳ ನಡುವಿನ ವಿವಾದದ ಕೆಲವು ಅಂಶಗಳು
ಪರಮಾಣು ಶಸ್ತ್ರಾಸ್ತ್ರಗಳು: ರಹಸ್ಯ ಪರಮಾಣು ಶಸ್ತ್ರಾಸ್ತ್ರಗಳ ಯೋಜನೆಯನ್ನು ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಹೊಂದಿದ್ದಾರೆ. ತನ್ನ ಪರಮಾಣು ಯೋಜನೆಗಳನ್ನು ಸದ್ದಿಲ್ಲದೆ ನಿರ್ವಹಿಸುತ್ತಿದೆ. ಆದರೂ, ಪರಮಾಣು ಶಸ್ತ್ರಾಸ್ತಗಳನ್ನು ಹೊಂದಲು ಇರಾನ್ ತಡಕಾಟ ನಡೆಸುತ್ತಿದೆ ಎಂಬುದು ಇಸ್ರೇಲ್‌ ದೀರ್ಘಕಾಲದಿಂದ ಆರೋಪಿಸುತ್ತಿದೆ. ಏತನ್ಮಧ್ಯೆ, ಎನ್‌ಪಿಆರ್‌ ವರದಿಯ ಪ್ರಕಾರ, ಪರಮಾಣು ಯೋಜನೆಗಾಗಿ ಇರಾನ್‌ ಯುರೇನಿಯಂಅನ್ನು ಸಂಗ್ರಹಿಸುತ್ತಿರುವ ಮಾಹಿತಿ ಪಡೆಯಲು ಇಸ್ರೇಲ್ ಮತ್ತು ಅಮೆರಿಕ 2000ದ ದಶಕದ ಆರಂಭದಲ್ಲಿ ‘ಸ್ಟಕ್ಸ್‌ನೆಟ್ ಕಂಪ್ಯೂಟರ್ ವೈರಸ್’ಅನ್ನು ಅಭಿವೃದ್ಧಿ ಪಡಿಸಿದವು ಎಂದು ಇರಾನ್ ಹೇಳುತ್ತಿದೆ.

ಹಮಾಸ್, ಹಿಜ್ಬುಲ್ಲಾದಂತಹ ಸಂಘಟನೆಗಳಿಗೆ ಬೆಂಬಲ: ಇರಾನ್ ದೀರ್ಘಕಾಲದಿಂದ ಲೆಬನಾನ್‌ನ ಹಿಜ್ಬುಲ್ಲಾ ಮತ್ತು ಗಾಜಾದ ಹಮಾಸ್‌ನಂತಹ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ಇರಾನಿನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅರೆಸೈನಿಕ ಮತ್ತು ಗುಪ್ತಚರ ವಿಭಾಗ ‘ಕುಡ್ಸ್ ಫೋರ್ಸ್’ ಹಿಜ್ಬುಲ್ಲಾ ಮತ್ತು ಹಮಾಸ್‌ ಸಂಘಟನೆಗಳಿಗೆ ಧನಸಹಾಯ ಹಾಗೂ ಇತರೆ ನೆರವು ನೀಡುತ್ತಿರುವುದು ವಾಸ್ತವ. ಈ ಸಂಘಟನೆಗಳು ಪ್ಯಾಲೆಸ್ತೀನ್ ಮೇಲೆ ಆಕ್ರಮಣ ನಡೆಸುತ್ತಿರುವ ಇಸ್ರೇಲ್‌ನೊಂದಿಗೆ ಸಶಸ್ತ್ರ ಸಂಘರ್ಷದಲ್ಲಿ ತೊಡಗಿವೆ. ಅಲ್ಲದೆ, ಇತ್ತೀಚೆಗೆ, ಇಸ್ರೇಲ್‌ ದಾಳಿಯಿಂದಾಗಿ ಗಾಜಾದಲ್ಲಿ ಮಾನವ ಬಿಕ್ಕಟ್ಟು ಕೂಡ ಎದುರಾಗಿದೆ.

ಇತ್ತೀಚೆಗೆ, ಸಿರಿಯಾದಲ್ಲಿ ಇರಾನ್ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ ಇಸ್ರೇಲ್, ‘ಕುಡ್ಸ್ ಫೋರ್ಸ್‌’ನ ಇಬ್ಬರು ಜನರಲ್‌ಗಳು ಮತ್ತು ಐವರು ಇತರ ಅಧಿಕಾರಿಗಳನ್ನು ಕೊಂದಿತು. ಕುಡ್ಸ್ ಪೋರ್ಸ್‌’ ತನ್ನ ಇತಿಹಾಸದಲ್ಲಿಯೇ ಇಷ್ಟೊಂದು ಅಧಿಕಾರಿಗಳನ್ನು ಇಂತಹ ದಾಳಿಯಿಂದಾಗಿ ಕಳೆದುಕೊಂಡಿರಲಿಲ್ಲ. (2020ರ ಜನವರಿಯಲ್ಲಿ ‘ಕುಡ್ಸ್ ಫೋರ್ಸ್’ನ ಮಾಜಿ ಮುಖ್ಯಸ್ಥ ಖಾಸೆಮ್ ಸೊಲೈಮಾನಿ ವಿರುದ್ಧ ಅಮೆರಿಕ ಕೂಡ ದಾಳಿ ನಡೆಸಿತ್ತು. ಆಗಲೂ ಹೆಚ್ಚಿನ ಅಧಿಕಾರಿಗಳು ಸಾವನ್ನಪ್ಪಿರಲಿಲ್ಲ.)

ಏತನ್ಮಧ್ಯೆ, ಯುರೋಪ್ ಮೂಲದ ಸಂಘಟನೆ ಮೊಜಾಹೆದಿನ್-ಇ ಖಾಲ್ಕ್ (ಎಂಇಕೆ) ಸೇರಿದಂತೆ ‘ಭಯೋತ್ಪಾದಕ ಸಂಘಟನೆಗಳು’ ಎಂದು ಗುರುತಿಸಲಾಗಿರುವ ಹಲವು ಗುಂಪುಗಳನ್ನು ಇಸ್ರೇಲ್ ಬೆಂಬಲಿಸುತ್ತಿದೆ ಎಂದು ಇರಾನ್ ಆರೋಪಿಸಿದೆ.

ಇರಾನ್ ಮತ್ತು ಇಸ್ರೇಲ್‌ನ ಇತ್ತೀಚಿನ ‘ಪ್ರಾಕ್ಸಿ’ ಯುದ್ಧಗಳು
2024 ಜನವರಿ: ಪ್ಯಾಲೆಸ್ತೀನ್‌ ಮೇಲೆ ದಾಳಿ ನಡೆಸಿದ್ದ ಇಸ್ರೇಲ್‌, ಬಾಗ್ದಾದ್‌ನಲ್ಲಿ ಹಮಾಸ್ ನಾಯಕ ಸಲೇಹ್-ಅಲ್-ಅರೂರಿಯ ಅವರನ್ನು ಹತ್ಯೆ ಮಾಡಿತು. ಈ ಹತ್ಯೆಯ ಬಳಿಕ, ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್‌ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿತು. ಅರೂರಿ ಹತ್ಯೆಗೆ ಪ್ರತೀಕಾರವಾಗಿ ಉತ್ತರ ಇಸ್ರೇಲ್‌ನ ಸಫೇದ್‌ನಲ್ಲಿರುವ ಇಸ್ರೇಲಿ ಸೇನಾ ಪ್ರಧಾನ ಕಚೇರಿ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ ನಡೆಸಿತು. ಹಿಜ್ಬುಲ್ಲಾ ದಾಳಿಗೆ ಪ್ರತಿದಾಳಿ ಮಾಡಿದ ಇಸ್ರೇಲ್‌ ಸೇನೆಯು ಹಿಜ್ಬುಲ್ಲಾದ ವೈಮಾನಿಕ ಘಟಕದ ದಕ್ಷಿಣ ಲೆಬನಾನ್ ಕಮಾಂಡರ್ ಅನ್ನು ಕೊಂದಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

2023 ನವೆಂಬರ್: ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ಇಸ್ರೇಲಿ-ಸಂಬಂಧಿತ ಸರಕು ಹಡಗನ್ನು ಕೆಂಪು ಸಮುದ್ರದಲ್ಲಿ ವಶಪಡಿಸಿಕೊಂಡರು. ಹಡಗಿನ 25 ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಇದನ್ನು, ಇಸ್ರೇಲ್ ಪ್ರಧಾನಿ ನೆತನ್ಯಾಹು, ‘ಇರಾನಿನ ಭಯೋತ್ಪಾದಕ ಕೃತ್ಯ’ ಎಂದು ಕರೆದರು.

2022 ಮೇ: ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ – ಕರ್ನಲ್ ಸಯಾದ್ ಖೋಡಯೀ ಅವರನ್ನು ಇಸ್ರೇಲ್ ಹತ್ಯೆ ಮಾಡಿತು. ಖೋಡಾಯಿ ಅವರು ಸಿರಿಯಾ ಅಥವಾ ಇರಾಕ್‌ನಲ್ಲಿ ಇರಾನ್ ಪರವಾಗಿ ಕೆಲಸ ಮಾಡುತ್ತಿದ್ದ ‘ಅಭಯಾರಣ್ಯದ ರಕ್ಷಕ’ರಾಗಿದ್ದರು. ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಘೋಷಿಸಿತು.

2020 ನವೆಂಬರ್: ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಅವರನ್ನು ಇಸ್ರೇಲ್ ಕೊಲೆ ಮಾಡಿತು. ಮೊಹ್ಸೆನ್ ಅವರು ಇರಾನ್‌ನ ನಾಗರಿಕ ಯುರೇನಿಯಂ ತಯಾರಿಕಾ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಮೆರಿಕ ಬೆಂಬಲ ಹೊಂದಿರುವ ಇಸ್ರೇಲ್‌ ಆಗ್ಗಾಗ್ಗೆ ಇರಾನ್‌ ಮೇಲೆ ದಾಳಿ ನಡೆಸುತ್ತಲೇ ಇದೆ. ಕಳೆದ ನಾಲ್ಕೈದು ವರ್ಷಗಳಿಂದ ಇಸ್ರೇಲ್‌ ದಾಳಿಗೆ ಸೊಪ್ಪು ಹಾಕದಿದ್ದ ಇರಾನ್ ಇದೀಗ ಸಿಡಿದೆದ್ದಿದೆ. ಇಸ್ರೇಲ್ ವಿರುದ್ಧ ಮರುದಾಳಿ ಮಾಡುವುದಾಗಿ ಘೋಷಿಸಿದ್ದ ಇರಾನ್, ಶನಿವಾರ ಇಸ್ರೇಲ್ ವಾಯುನೆಲೆಯೊಳಗೆ ಇರಾನ್ ಡ್ರೋನ್‌ಗಳನ್ನು ಹಾರಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X