ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಎರಡು ದಿನಗಳ ಹಿಂದೆ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದ ಆರು ವರ್ಷದ ಬಾಲಕ ಮೃತಪಟ್ಟಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಬಾಲಕನನ್ನು ರಕ್ಷಿಸಲು ಹಲವು ಸಂಸ್ಥೆಗಳು ತೀವ್ರ ಪ್ರಯತ್ನ ಮಾಡಿದ್ದರೂ ಬಾಲಕನನ್ನು ಜೀವಂತವಾಗಿ ಹೊರತರಲು ಸಾಧ್ಯವಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್‌ಡಿಇಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ತಂಡಗಳು ಬಾಲಕನನ್ನು ಬೋರ್‌ವೆಲ್‌ನಿಂದ ಹೊರತರುವ ಕಾರ್ಯಾಚರಣೆ ಮಾಡಿದೆ.
#WATCH | Rewa, MP: A 6-year-old boy, who fell in an open borewell under the Janeh Police Station area, was taken out after a 45-hour long rescue operation. pic.twitter.com/5uVnBsdqNR
— ANI MP/CG/Rajasthan (@ANI_MP_CG_RJ) April 14, 2024
ಉತ್ತರ ಪ್ರದೇಶದ ಗಡಿಗೆ ಸಮೀಪವಿರುವ ಮಾಣಿಕಾ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬಾಲಕ ಆಟವಾಡುತ್ತಿದ್ದಾಗ ಬೋರ್‌ವೆಲ್‌ಗೆ ಬಿದ್ದಿದ್ದು ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ| ಬೋರ್‌ವೆಲ್‌ಗೆ ಬಿದ್ದ 6 ವರ್ಷದ ಬಾಲಕ, ರಕ್ಷಣಾ ಕಾರ್ಯ ಪ್ರಾರಂಭ
ಬಾಲಕ ತನ್ನ ಸ್ನೇಹಿತರೊಂದಿಗೆ ಕಟಾವು ಮಾಡಿದ ಗೋಧಿ ಹೊಲದಲ್ಲಿ ಆಟವಾಡುತ್ತಿದ್ದಾಗ ಬೋರ್‌ವೆಲ್‌ಗೆ ಬಿದಿದ್ದಾನೆ ಎನ್ನಲಾಗಿದೆ. ಇತರ ಮಕ್ಕಳು ಬಾಲಕನನ್ನು ಮೇಲೆತ್ತಲು ಪ್ರಯತ್ನಿಸಿದ್ದು ಸಾಧ್ಯವಾಗದಿದ್ದಾಗ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದರು ಎಂದು ಈ ಹಿಂದೆ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ತಂಡಗಳು 70 ಅಡಿ ಆಳದ ಬೋರ್‌ವೆಲ್‌ಗೆ ಆಕ್ಸಿಜನ್ ಅನ್ನು ಪೂರೈಸಿದೆ. ಹಾಗೆಯೇ ಬಾಲಕನ ರಕ್ಷಣೆಗಾಗಿ ಸಮಾನಾಂತರ ಹೊಂಡಗಳನ್ನು ಅಗೆದಿತ್ತು. “40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಗುವನ್ನು ಭಾನುವಾರ ಪತ್ತೆ ಮಾಡಲಾಗಿದೆ. ಆದರೆ ಮಗು ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ಕಲೆಕ್ಟರ್ ಪ್ರತಿಭಾ ಪಾಲ್ ತಿಳಿಸಿದರು.
#WATCH | Madhya Pradesh: Rescue of the 6-year-old child who fell in an open borewell, going on in Rewa. (12.04) pic.twitter.com/r4ylstwb5h
— ANI MP/CG/Rajasthan (@ANI_MP_CG_RJ) April 13, 2024
“ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಾಲಕ ಪತ್ತೆಯಾಗಿದ್ದಾರೆ. ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ ಆದರೆ ಬೋರ್‌ವೆಲ್ ತುಂಬಾ ಕಿರಿದಾಗಿರುವ ಕಾರಣ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ” ಎಂದರು.
ಇತ್ತೀಚೆಗೆ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು 18 ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ.