ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆ ಮೇಲೆ ಭಾನುವಾರ ಗುಂಡಿನ ದಾಳಿ ನಡೆಸಿದ ಇಬ್ಬರು ಶೂಟರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ವಿಕ್ಕಿ ಸಾಹಬ್ ಗುಪ್ತಾ ಮತ್ತು ಸಾಗರ್ ಶ್ರೀಜೋಗೇಂದ್ರ ಪಾಲ್ ಅವರನ್ನು ಸೋಮವಾರ ಸಂಜೆ ಗುಜರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿದೆ.
ಭಾನುವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಟ ವಾಸವಿರುವ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಆರೋಪಿಗಳಿಬ್ಬರೂ ನಟನ ಮನೆಯ ಕಡೆಗೆ ಗುಂಡು ಹಾರಿಸುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
Bhuj police arrest two accused in Salman Khan’s house firing incident, hand them over to Mumbai Crime Branch
Read @ANI Story | https://t.co/QTRdnf3oO5#SalmankhanHouseFiring #bhuj #Mumbaipolice pic.twitter.com/biRTn5AluJ
— ANI Digital (@ani_digital) April 16, 2024
ಆರೋಪಿಗಳು ರಾಯಗಡ ಜಿಲ್ಲೆಯಿಂದ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿ ಬಳಿಕ ಖಾನ್ ಅವರ ನಿವಾಸದ ಬಳಿ ಬಂದು ಗುಂಡು ಹಾರಿಸಿದ್ದಾರೆ. ಕಳೆದ 22 ದಿನಗಳಿಂದ ವಾಸವಾಗಿದ್ದ ಪನ್ವೇಲ್‌ನಿಂದ ಆ ಬೈಕ್‌ನಲ್ಲಿ ಪ್ರಯಾಣಿಸಿ ಮುಂಬೈಗೆ ಆರೋಪಿಗಳು ಬಂದಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಮುಂಬೈ | ಬೆಳ್ಳಂಬೆಳಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಮುಂದೆ ಗುಂಡಿನ ದಾಳಿ; ಬಿಗಿ ಬಂದೋಬಸ್ತ್
ಈ ಹಿಂದೆಯೂ ನಟ ಸಲ್ಮಾನ್ ಖಾನ್‌ಗೆ ಹಲವು ಬಾರಿ ಕೊಲೆ ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು.
ಇನ್ನು ಪೊಲೀಸ್ ಮೂಲಗಳ ಪ್ರಕಾರ ಇಬ್ಬರೂ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಭಾಗವಾಗಿದ್ದಾರೆ. ಗಾಯಕ ಸಿಧು ಮೂಸ್ ವಾಲಾ ಮತ್ತು ರಜಪೂತ ನಾಯಕ ಮತ್ತು ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಸೇರಿದಂತೆ ಹಲವಾರು ಪ್ರಮುಖ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಿಷ್ಣೋಯ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ.
#WATCH | Mumbai, Maharashtra: Visuals from outside actor Salman Khan’s residence in Bandra where two unidentified men opened fire this morning.
Police and forensic team present on the spot. pic.twitter.com/5vMmoXbI22
— ANI (@ANI) April 14, 2024
ಖಾನ್ ನಿವಾಸದ ಹೊರಗೆ ಗುಂಡಿನ ದಾಳಿಯ ಘಟನೆಯ ನಂತರ, ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರು ಆನ್‌ಲೈನ್ ಪೋಸ್ಟ್‌ನಲ್ಲಿ ಈ ದಾಳಿಯ ಹೊಣೆ ಹೊತ್ತಿದ್ದಾರೆ. ಹಾಗೆಯೇ ಬಾಲಿವುಡ್ ನಟನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ
ಇನ್ನು ಆರೋಪಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್ ಅನ್ನು ಸಲ್ಮಾನ್ ಖಾನ್ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಮೌಂಟ್ ಮೇರಿ ಚರ್ಚ್ ಬಳಿ ಇರಿಸಿದ್ದು ಈ ಬೈಕ್ ಮುಂಬೈನ ಪನ್ವೆಲ್ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ವ್ಯಕ್ತಿ ಇತ್ತೀಚೆಗೆ ತನ್ನ ಬೈಕ್ ಅನ್ನು ಮಾರಾಟ ಮಾಡಿದ್ದ ಎಂದು ಸಹಾಯಕ ಪೊಲೀಸ್ ಆಯುಕ್ತ ಪನ್ವೇಲ್ ಅಶೋಕ್ ರಜಪೂತ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದು ಭದ್ರತೆಯ ಭರವಸೆ ನೀಡಿದ್ದಾರೆ. ಘಟನೆಯ ನಂತರ ಸಲ್ಮಾನ್ ಖಾನ್ ಅವರ ಭದ್ರತಾ ತಂಡದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹಾಗೆಯೇ ಸಲ್ಮಾನ್ ಖಾನ್ ಅವರು ಮನೆಯಿಂದ ಹೊರಬರುವ ಮೊದಲು ಮುಂಬೈ ಪೊಲೀಸರಿಗೆ ತಿಳಿಸುವಂತೆ, ಅತೀ ಅಗತ್ಯವಿಲ್ಲದೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.