ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.
ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ ಮೊದಲ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ. ಇವರು ಐಐಟಿ ಕಾನ್ಪುರ ಎಂಟೆಕ್ ಪಡೆದು ಚಿನ್ನದ ಪದಕ ವಿಜೇತರಾಗಿದ್ದರು. ಅನ್ಮೇಶ್ ಪ್ರಧಾನ್ ಎರಡನೇ ರ‍್ಯಾಂಕ್, ತೆಲಂಗಾಣದ ದೊನೂರು ಅನನ್ಯ ರೆಡ್ಡಿ ಮೂರು, ಕೇರಳದ ಪಿ ಕೆ ಸಿದ್ಧಾರ್ಥ ಕುಮಾರ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಒಬಿಸಿ 303, ಎಸ್‌ಸಿ 165, ಎಸ್‌ಟಿ 86 ಸೇರಿ ಒಟ್ಟು 1016 ಮಂದಿ ಉತ್ತೀರ್ಣರಾಗಿದ್ದಾರೆ. ತೇರ್ಗಡೆಯಾದವರಲ್ಲಿ 180 ಐಎಎಸ್, 37 ಐಎಫ್‌ಎಸ್ ಹಾಗೂ 200 ಮಂದಿ ಐಪಿಎಸ್‌ಗೆ ಆಯ್ಕೆಯಾಗಲಿದ್ದಾರೆ.
ಕರ್ನಾಟಕದಿಂದ ರಕ್ಷಿತ್ ಕೆ ಗೌಡ, ವಿನಯ್ ಸುನಿಲ್ ಪಾಟೀಲ್, ರಾಹುಲ್ ಜೆ, ನೇಹ ನಂದಕುಮಾರ್, ಲೋಕೇಶ್ ಮನೋಹರ್ ಸೇರಿದಂತೆ ಹಲವರು ತೇರ್ಗಡೆಯಾಗಿದ್ದಾರೆ.
ಲೋಕಸೇವಾ ಆಯೋಗದ ಫಲಿತಾಂಶ ನೋಡಲು ಈ ಲಿಂಕ್ ಕ್ಲಿಕ್ಕಿಸಿ: ನಾಗರಿಕ ಸೇವಾ ಆಯೋಗ
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?
