ಕಲಬುರಗಿ | ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಬೆಂಬಲ: ದಸಂಸ

Date:

2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸುವುದಾಗಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ
ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, “ಸ್ವಾತಂತ್ರ್ಯ ಬಳಿಕ ಸಂವಿಧಾನದ ಜಾರಿಗೆ ಒತ್ತಾಯಿಸಿ ಅನೇಕ ಚಳವಳಿಗಳು ಹುಟ್ಟಿಕೊಂಡವು. ಅದರಲ್ಲಿ ಮುಖ್ಯವಾಗಿ ಆದಿವಾಸಿ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ, ಮಹಿಳಾ ಚಳವಳಿಗಳಿಂದ ಒಂದಷ್ಟು ಅವಕಾಶಗಳನ್ನು ದಕ್ಷಿಸಿಕೊಂಡು ಶೋಷಿತ ತಳಸಮುದಾಯಗಳು ಪ್ರಗತಿಯತ್ತ ಮುನ್ನಡೆಯತೊಡಗಿದವು. ಇದನ್ನು ಸಹಿಸದ ಆರ್‌ಎಸ್‌ಎಸ್‌, ಸಂಘ ಪರಿವಾರಗಳು ಈ ಚಳವಳಿಗಳ ವಿರುದ್ಧ ಷಡ್ಯಂತ್ರ ರೂಪಿಸಿದ್ದವು. ಹಿಂದುಗಳು ನಾವೆಲ್ಲರೂ ಒಂದೇ ಎಂದು ಹೇಳುತ್ತಾ ಅಲ್ಪಸಂಖ್ಯಾತ ಮುಸ್ಲಿಂ, ಕ್ರೈಸ್ತ ಸಮುದಾಯಗಳನ್ನು ಶತ್ರುಗಳಂತೆ ಬಿಂಬಿಸತೊಡಗಿದವು. ದೇವರು ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಹಾಗೂ ಕೋಮುಭಾವನೆಗಳನ್ನು ಕೆರಳಿಸಿ ಜಾತಿ ರಾಜಕಾರಣಕ್ಕೆ ಬಳಸಿಕೊಂಡು ಜನರ ನಡುವೆ ವಿಷದ ಬೀಜ ಬಿತ್ತುತ್ತಿರುವುದು ಖಂಡನೀಯ” ಎಂದರು.

“ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳಂತೆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಧರ್ಮದ ಆಚರಣೆಗಳನ್ನು ಆಚರಿಸಲು ಅವಕಾಶವಿದ್ದಾಗ ಆರ್‌ಎಸ್‌ಎಸ್‌ನವರು ಇವುಗಳನ್ನು ಆಚರಿಸದಂತೆ ಅವರನ್ನು ತಡೆಯುತ್ತಿರುವುದು ಹಾಗೂ ಸ್ವಾರ್ಥ ರಾಜಕಾರಣಕ್ಕೆ ಕೋಮುಭಾವನೆಗಳನ್ನು ಕೆರಳಿಸುವುದು ದೇಶದ ರಾಜಕಾರಣವನ್ನು ಪ್ರತಿಬಿಂಬಿಸುವುದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಜಾತಿಗಳ ನಡುವೆಯೇ ಜಗಳ ತಂದಿದ್ದು, ರಾಜಕೀಯ ಲಾಭ ಪಡೆಯುತ್ತಿವುದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕುತಂತ್ರವಾಗಿದೆ. ಇಡಬ್ಲ್ಯೂಎಸ್ ಹೆಸರಿನಲ್ಲಿ ಶೇ.3ರಷ್ಟಿರುವ ಮೇಲ್ವರ್ಗದವರೇ ಶೇ.10ರಷ್ಟು ಮಿಸಲಾತಿ ಗಿಟ್ಟಿಸಿಕೊಂಡರು. ಅಸ್ಪೃಶ್ಯ ಜಾತಿಗಳಿಗೆ ಹಾಗೂ ಉಪಜಾತಿಗಳಿಗೆ ಅದರ ಲಾಭ ಮಾತ್ರ ಶೂನ್ಯ” ಎಂದರು.

“ಹಿಂದೂ ಧರ್ಮದ ಹೆಸರಿನಲ್ಲಿ ಮನುಧರ್ಮ ಸ್ಥಾಪನೆಗೆ ಶೇ.3ರಷ್ಟಿರುವ ಸಮುದಾಯ ಈ ರಾಷ್ಟ್ರದ ಸಂವಿಧಾನವನ್ನು ಬದಲಾವಣೆ ಮಾಡಿ, ಮನು ಧರ್ಮವನ್ನು ಸ್ಥಾಪಿಸಲು ದೇಶದಲ್ಲಿ ಭಾರೀ ಕುತಂತ್ರ ನಡೆಸುತ್ತಿರುವುದು ಕಂಡುಬರುತ್ತಿದೆ. ದೇಶದಲ್ಲಿ ಬಿಜೆಪಿ ‌ಸರ್ಕಾರ ರಚನೆಯಾದಾಗಿನಿಂದಲೂ ಸಂವಿಧಾನ ಬದಲಾವಣೆಗೆ ಹಾಗೂ ಅದನ್ನು ಶಿಥಿಲಗೊಳಿಸುವಂತಹ ಹುನ್ನಾರಗಳು ಮೇಲಿಂದ ಮೇಲೆ ನಡೆಯುತ್ತಿದೆ. ಭಾರತ ಸರ್ಕಾರದ ಮಂತ್ರಿಗಳು ಆರ್‌ಎಸ್‌ಎಸ್‌ನ ಮುಖಂಡರುಗಳು ಹಿಂದೂ ಧರ್ಮದ ಹೆಸರಿನಲ್ಲಿ ಧರ್ಮ ಸಂಸ್ಕೃತಿ ಸ್ಥಾಪಿಸಿ ಮೇಲ್ಜಾತಿ ಹಿಡಿತವನ್ನು ಮರುಸ್ಥಾಪಿಸುವುದು ಅವರ ಗುರಿಯಾಗಿದೆ. ಮನುಧರ್ಮವನ್ನು ಸ್ಥಾಪಿಸುವುದು ಹಾಗೂ ಸಂವಿಧಾನ ಅಸ್ಥಿರಗೊಳಿಸುವುದು ಅವರ ರಾಜಕೀಯ ಅಜೆಂಡಾ ಆರುವುದು ಮೇಲ್ನೋಟಕ್ಕೆ ಗೊಚರಿಸುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಾರಿ ಬಿಜೆಪಿ, ಆರ್‌ಎಸ್‌ಎಸ್‌ನ ಕುತಂತ್ರದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಬೃಹತ್ ಮತಗಳೊಂದಿಗೆ 400 ಲೋಕಸಭಾ ಮತಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿದೆ. ಅದೇ ಕಾರಣಕ್ಕಾಗಿ ಅಪಾರವಾದ ಅಕ್ರಮ ಹಣವನ್ನು ಕೂಡಿಟ್ಟಿಕೊಂಡಿದ್ದಾರೆ. ದೇಶದ ಮಾಧ್ಯಮಗಳನ್ನು ತಮ್ಮ ರಾಜಕೀಯ ಹಾಗೂ ಧರ್ಮದ ಹೆಸರಿನಲ್ಲಿ ಖರೀದಿ ಮಾಡಿಕೊಂಡತಿದೆ” ಎಂದರು.

“ಈ ದೇಶದ ದುಡಿಯುವ ಜನ ದಮನಿತ ಹಾಗೂ ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು, ಪ್ರಜ್ಞಾವಂತರು ಒಂದಾಗಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ಷಡ್ಯಂತ್ರಗಳನ್ನು ವಿಫಲಗೊಳಿಸಲು ಒಗ್ಗೂಡಬೇಕಾಗಿದೆ. ಈ ದೇಶವು ಮತ್ತೊಂದು ಪ್ರತಿಕ್ರಾಂತಿಗೆ ಗುರಿಯಾಗದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.

“ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯವರು ಸುಮಾರು 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ದುಡಿಯುತ್ತ, ಕ್ಷೇತ್ರದ ಎಲ್ಲ ಜನರೊಂದಿಗೆ ಚಿರಪರಿಚಿತರಾಗಿದ್ದು, ಮಲ್ಲಿಕಾರ್ಜುನ ಖರ್ಗೆಜಿ ಅವರ ಅಭಿವೃದ್ಧಿ ಕಾಮಗಾರಿಗಳಾದ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ ಹಾಗೂ ಪಿಎಸ್‌ಐ ತರಬೇತಿ ಕೇಂದ್ರ ನಾಗನಹಳ್ಳಿ ಹಾಗೂ ಗುಲ್ಬರ್ಗಾ ಜಿಲ್ಲೆಗೆ ಅನೇಕ ರೈಲ್ವೆ ಹಳಿಗಳು ಮಂಜೂರಾತಿ ಹಾಗೂ ಹೊಸ ರೈಲುಗಳ ಓಡಾಟಕ್ಕೆ ಅನುಮೋದನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಹಾಗಾಗಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಲು ಕ್ಷೇತ್ರದ ಎಲ್ಲ ದಲಿತ ಸಂಘಟನೆಗಳು ಹಾಗೂ ಹಿಂದುಳಿದ ಅಲ್ಪಸಂಖ್ಯಾತರ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮೆರವಣಿಗೆ ವೇಳೆ ಎಲ್‌ಇಡಿ ಪರದೆ ಬಿದ್ದು ಒಬ್ಬರಿಗೆ ಗಾಯ; ಆಸ್ಪತ್ರೆಗೆ ಸಚಿವರ ಭೇಟಿ

ಈ ಸಂದರ್ಭದಲ್ಲಿ ವಿಭಾಗೀಯ ಸಂಚಾಲಕ ಶಿವಶರಣಪ್ಪ ಕುರನಳ್ಳಿ, ಜಿಲ್ಲಾ ಸಂಚಾಲಕರುಗಳಾದ ಸಂತೋಷ ತೇಗನೂರ, ದಸಂಸ ಸಂಚಾಲಕ ಮಹಾದೇವ ಕೊಳಕುರ, ಕಲಬುರಗಿ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ದಸಂಸ ಮುಖಂಡ ಮಲ್ಲಿಕಾರ್ಜುನ ಗೌಡ ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...

ಚಿಂತಾಮಣಿ | ಬೊಲೆರೋ ಟೆಂಪೋ ಬಸ್ ನಡುವೆ ಅಪಘಾತ; ಚಾಲಕ ಸಾವು

ಬೊಲೆರೋ ಟೆಂಪೊಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ...