ನೋಟಾ ಎಂದರೇನು?; ಚುನಾವಣಾ ಫಲಿತಾಂಶಗಳ ಮೇಲೆ ಅದರ ಪರಿಣಾಮವೇನು? ಡೀಟೇಲ್ಸ್‌

Date:

Advertisements

‘ಮೇಲಿನ ಯಾವುದೂ ಅಲ್ಲ’ ಎಂಬುದನ್ನು ಸಂಕ್ಷಿಪ್ತ ರೂಪದಲ್ಲಿ ನೋಟಾ (NOTA – None of the above) ಎನ್ನಲಾಗುತ್ತದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಕಂಡುಬರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ನೋಟಾ ಕೂಡ ಇರುತ್ತದೆ. ಇದು ಮತದಾರರು ತಮ್ಮ ಕ್ಷೇತ್ರದ ಯಾವುದೇ ಚುನಾವಣಾ ಅಭ್ಯರ್ಥಿಗೆ ಮತ ಚಲಾಯಿಸಲು ಬಯಸದಿದ್ದರೆ, ಅವರು ನೋಟಾಗೆ ಮತ ಚಲಾಯಿಸಬಹುದು. ಇದು ತಮ್ಮ ಮತವನ್ನು ಪರಿಗಣಿಸುತ್ತದೆ ಮತ್ತು ಅಭ್ಯರ್ಥಿಗಳ ವಿರುದ್ಧದ ತಮ್ಮ ವಿರೋಧವನ್ನೂ ಪ್ರತಿಬಿಂಬಿಸುತ್ತದೆ. ಆದರೂ, ನೋಟಾವನ್ನು ಭಾರತದಲ್ಲಿ ಪರಿಚಯಿಸಿದ ಸಮಯದಿಂದಲೂ ಚುನಾವಣಾ ಫಲಿತಾಂಶಗಳ ಮೇಲೆ ಅದರ ಪರಿಣಾಮವೇನು ಎಂಬುದರ ಬಗ್ಗೆ ರಾಜಕೀಯ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಈವರೆಗೆ ಚರ್ಚೆಗೆ ಉತ್ತರ ದೊರೆತಿಲ್ಲ.

ನೋಟಾ ಎಂದರೇನು?
ಚುನಾವಣೆಯ ಸಮಯದಲ್ಲಿ ತಮ್ಮ ಕ್ಷೇತ್ರದ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಚ್ಛಿಸದ ಮತದಾರರಿಗೆ ನೋಟಾ ಆಯ್ಕೆ ಲಭ್ಯವಿರುತ್ತದೆ. ಮತದಾರರು ಎಲ್ಲ ಅಭ್ಯರ್ಥಿಗಳನ್ನು ಅಧಿಕೃತವಾಗಿ ತಿರಸ್ಕರಿಸಿ, ತಮ್ಮ ಮತವನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ.

ನೋಟಾ ಮೊದಲ ಬಾರಿಗೆ ಬಳಸಿದ್ದ ಯಾವಾಗ?
ನೋಟಾ ಆಯ್ಕೆಯನ್ನು ಮೊದಲ ಬಾರಿಗೆ 2013ರಲ್ಲಿ ನಡೆದ ಐದು ರಾಜ್ಯಗಳ – ಛತ್ತೀಸ್‌ಗಢ, ಮಿಜೋರಾಂ, ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶ – ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇವಿಎಂಗಳಲ್ಲಿ ಅಳವಡಿಸಲಾಯಿತು. ಪಿಯುಸಿಎಲ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2013ರಲ್ಲಿ ನೀಡಿದ ತೀರ್ಪಿನ ಬಳಿಕ, ನೋಟಾವನ್ನು ಅಳವಡಿಸಲಾಗಿದೆ.

Advertisements

ನೋಟಾವನ್ನು ಯಾಕೆ ಪರಿಚಯಿಸಲಾಯಿತು?
ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಅಸಮಾಧಾನವಿದ್ದರೆ, ಅವರು ಮತದಾನದಿಂದಲೇ ದೂರ ಉಳಿಯುತ್ತಿದ್ದರು. ಹೀಗಾಗಿ, ಮತದಾರರು ತಮ್ಮ ಮತ ಚಲಾಯಿಸುವ ಹಕ್ಕನ್ನು ಅಸಮಾಧಾನದ ಕಾರಣಕ್ಕಾಗಿ ಚಲಾಯಿಸುತ್ತಿರಲಿಲ್ಲ. ನೋಟಾ ಅಳವಡಿಸಿದ ಬಳಿಕ, ಅಭ್ಯರ್ಥಿಗಳ ವಿರುದ್ಧದ ಅತೃಪ್ತಿಯನ್ನು ಮತದಾರರು ಅಧಿಕೃತವಾಗಿ ನೋಟಾ ಮೂಲಕ ದಾಖಲಿಸಬಹುದು ಮತ್ತು ಮತದಾನ ಪ್ರಕ್ರಿಯೆಯನ್ನು ಭಾಗವಹಿಸಲು ನೋಟಾ ಪ್ರೇರೇಪಿಸುತ್ತಿದೆ.

ಚುನಾವಣಾ ಫಲಿತಾಂಶದಲ್ಲಿ ನೋಟಾ ಪರಿಣಾಮವೇನು? 
ಅಂದಹಾಗೆ, 2013ರಲ್ಲಿ ನೋಟಾ ಆಯ್ಕೆಯ ಅಳವಡಿಕೆಗೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌, ‘ರಾಜಕೀಯ ಪಕ್ಷಗಳು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮಾಡಲು ನೋಟಾ ಪರಿಣಾಮ ಬೀರುತ್ತದೆ’ ಎಂದು ಹೇಳಿತ್ತು. ಆದರೆ, ಭಾರತದಲ್ಲಿ ನೋಟಾ ಮತವು ಶೂನ್ಯ ಪ್ರಾಮುಖ್ಯತೆಯನ್ನು ಹೊಂದಿದೆ. ಇದು, ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

ನೋಟಾ ಪರವಾಗಿ ಗರಿಷ್ಠ ಮತಗಳನ್ನು ನೀಡಿದ್ದರೂ ಸಹ, ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆಯುವ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ನೋಟಾ – ಕೇವಲ ಅತೃಪ್ತಿಯನ್ನು ಮಾತ್ರವೇ ಪ್ರತಿಬಿಂಬಿಸುತ್ತದೆ.

ಅದಾಗ್ಯೂ, ನೋಟಾ – ರಾಜಕೀಯ ಪಕ್ಷಗಳ ಮತಗಳನ್ನು ಕಡಿತಗೊಳಿಸುತ್ತದೆ. ಆದ್ದರಿಂದ ಗೆಲುವಿನ ಅಂತರದ ಮೇಲೆ ಕೊಂಚ ಪರಿಣಾಮ ಬೀರುತ್ತದೆ ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಾರೆ.

ಮುಖ್ಯವಿಚಾರ ಏನೆಂದರೆ, ಇಂಡೋನೇಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ನೋಟಾಗೆ ಬಂದಲ್ಲಿ, ಆ ಕ್ಷೇತ್ರದ ಅಭ್ಯರ್ಥಿಗಳನ್ನು ಬದಲಿಸಲಾಗುತ್ತದೆ. ಮತ್ತೊಮ್ಮೆ ಚುನಾವಣೆಯನ್ನು ನಡೆಸಲಾಗುತ್ತದೆ. ಆದರೆ, ಭಾರತದಲ್ಲಿ ಅಂತಹ ವ್ಯವಸ್ಥೆ ಇಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X