ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ಕಾಣಿಸಿಕೊಂಡಿದ್ದು ಮರುಭೂಮಿ ದೇಶದ ಸುತ್ತಲೂ ಪ್ರವಾಹ ಉಂಟು ಮಾಡಿದೆ. ಈ ಬೆನ್ನಲ್ಲೇ ಸಂಚಾರ ಅಸ್ತವ್ಯಸ್ತವಾಗಿದ್ದು 28 ಭಾರತದ ವಿಮಾನಗಳು ರದ್ದು ಮಾಡಲಾಗಿದೆ.
ದಾಖಲೆಯ ಮಳೆಯಿಂದಾಗಿ ವಿಮಾನಗಳ ವಿಳಂಬ ಅಥವಾ ಮಾರ್ಗ ಬದಲಾವಣೆ ಮಾಡಲಾಗಿದ್ದು ಕಾರುಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡಿವೆ. ದುಬೈ ವಿಮಾನ ನಿಲ್ದಾಣಕ್ಕೆ ತೀರಾ ಅಗತ್ಯವಿರದ ಹೊರತು ಬರದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.
🚨 BREAKING: Dubai is UNDERWATER as floods submerge the city pic.twitter.com/XN7hmkA4oJ
— Daily Mail Online (@MailOnline) April 17, 2024
“ವಿಮಾನಗಳು ವಿಳಂಬವಾಗುತ್ತಿವೆ ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ನಾವು ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆಯನ್ನು ಆರಂಭಿಸಲು ಶ್ರಮಿಸುತ್ತಿದ್ದೇವೆ” ಎಂದು ದುಬೈ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್‌ನಲ್ಲಿ 18 ಮಂದಿ ಸಾವು
ಹವಾಮಾನ ಇಲಾಖೆಯು ಇಂದು ಹೆಚ್ಚಿನ ಮಳೆ ಮತ್ತು ಚಂಡಮಾರುತ ಮುನ್ಸೂಚನೆಯನ್ನು ನೀಡಿದೆ. ಈ ನಿಟ್ಟಿನಲ್ಲಿ 500ಕ್ಕೂ ಹೆಚ್ಚು ದುಬೈಗೆ ಬರುವ ಮತ್ತು ದುಬೈನಿಂದ ಹೊರಹೋಗುವ ವಿಮಾನಗಳ ಮಾರ್ಗ ಬದಲಾವಣೆ, ವಿಳಂಬ ಅಥವಾ ರದ್ದು ಮಾಡಲಾಗಿದೆ. ದುಬೈಗೆ ತೆರಳುವ ಸುಮಾರು 15 ವಿಮಾನಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದು, ಭಾರತಕ್ಕೆ ಬರುವ 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ದುಬೈನ ಪ್ರಮುಖ ಎಮಿರೇಟ್ಸ್ ಏರ್‌ಲೈನ್ ದುಬೈನಲ್ಲಿ ಪ್ರಯಾಣಿಕರಿಗೆ ಎಲ್ಲಾ ಚೆಕ್-ಇನ್‌ಗಳನ್ನು ಒಂದು ದಿನಕ್ಕೆ ಸ್ಥಗಿತಗೊಳಿಸುವುದಾಗಿ ಹೇಳಿದೆ. “ನಮ್ಮ ನಿಗದಿತ ಕಾರ್ಯಾಚರಣೆಗಳನ್ನು ಪುನಃಸ್ಥಾಪಿಸಲು ಎಮಿರೇಟ್ಸ್ ಶ್ರಮಿಸುತ್ತಿದೆ ಮತ್ತು ನಮ್ಮ ತಂಡಗಳು ತೊಂದರೆಗೊಳಗಾದ ಗ್ರಾಹಕರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುತ್ತವೆ” ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
Dubai submerged in floods as UAE gets over a year’s worth of rain in hours.
This happens when you play with nature.#UAE #Dubai #dubairain #dubairains #DubaiStorm pic.twitter.com/qQAK2OxeiT
— Your Views Your News (@urviewsurnews) April 17, 2024
ಇನ್ನು ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಎರಡೂ ಪ್ರವಾಹದಲ್ಲಿ ಸಿಲುಕಿದ್ದು, ಮೆಟ್ರೋ ನಿಲ್ದಾಣಗಳು ಜಲಾವೃತವಾಗಿದೆ. “ರೆಡ್ ಮತ್ತು ಗ್ರೀನ್ ಲೈನ್‌ಗಳಲ್ಲಿನ ನಿಲ್ದಾಣಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಪ್ರಸ್ತುತ ನಿರ್ದಿಷ್ಟ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಚಂಡಮಾರುತದ ಪ್ರಭಾವ ದುಬೈನ ಆಚೆಗೂ ವಿಸ್ತರಿಸಿದ್ದು ಇಡೀ ಯುಎಇ ಮತ್ತು ನೆರೆಯ ಬಹ್ರೇನ್‌ನಲ್ಲಿ ಪ್ರವಾಹ ಉಂಟಾಗಿದೆ. ಶಾಲೆಗಳನ್ನು ಮುಚ್ಚಲಾಗಿದೆ. ಒಮಾನ್‌ನಲ್ಲಿ ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ.