ಟ್ವಿಟರ್ ಸುದ್ದಿ | ಸೆಲೆಬ್ರಿಟಿ, ರಾಜಕಾರಣಿಗಳ ಬ್ಲೂ ಟಿಕ್ ಮಾಯ!

Date:

Advertisements
  • ವಿರಾಟ್‌ ಕೊಹ್ಲಿಯ ಬ್ಲೂ ಟಿಕ್‌ ಕಿತ್ತುಕೊಂಡ ಟ್ವಿಟರ್
  • ಬ್ಲೂ ಟಿಕ್ ಪಡೆಯಲು ಶುಲ್ಕ ಪಾವತಿಸಿ ಚಂದದಾರರಾಗಬೇಕು

ಸದಾ ಸುದ್ದಿಯಲ್ಲಿರುವ ಟ್ವಿಟರ್‌ ಕಂಪನಿ ಇದೀಗ ಸೆಲೆಬ್ರೆಟಿಗಳಿಗೆ ಮತ್ತು ರಾಜಕಾರಣಿಗಳಿಗೆ ಬಿಗ್‌ ಶಾಕ್‌ ನೀಡಿದ್ದು, ಬಹುತೇಕರ ಟ್ವಿಟರ್‌ ಖಾತೆಗಳಿಗಿದ್ದ ‘ಬ್ಲೂ ಟಿಕ್‌’ ಅನ್ನು ಕಿತ್ತುಕೊಂಡಿದೆ.

ಹಲವು ಮಾನದಂಡಗಳನ್ನು ಅನುಸರಿಸಿ ಈ ಹಿಂದೆ ಟ್ವಿಟರ್ ಕಂಪನಿಯು ಪರಿಶೀಲಿಸಿದ ಟ್ವಿಟರ್‌ ಖಾತೆಗಳಿಗೆ ಮಾತ್ರ ‘ಬ್ಲೂಟಿಕ್‌’ ನೀಡಲಾಗುತ್ತಿತ್ತು. ರಾಜಕಾರಣಿಗಳು, ಸಿನಿಮಾ ನಟರು, ಸಾಮಾಜಿಕ ರಂಗದಲ್ಲಿರುವವರು, ಪ್ರತಿಷ್ಠಿತ ಸಂಸ್ಥೆಗಳು ಹಲವು ವರ್ಷಗಳಿಂದ ಉಚಿತವಾಗಿ ‘ಬ್ಲೂ ಟಿಕ್’ ಹೊಂದಿದ್ದರು. ಆದರೆ, ಈಗ ಬ್ಲೂ ಟಿಕ್‌ಅನ್ನು ಟ್ವಿಟರ್ ಹಿಂಪಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರ ‘ಬ್ಲೂ ಟಿಕ್‌’ ಮಾಯವಾಗಿದೆ. ರಾಜಕೀಯ ಪಕ್ಷಗಳ ಅಧಿಕೃತ ಟ್ವಿಟರ್‌ ಖಾತೆಗಳಿಂದಲೂ ಬ್ಲೂ ಟಿಕ್ ತೆಗೆಯಲಾಗಿದೆ.

Advertisements

ಏಪ್ರಿಲ್ 1ರಂದು ‘ಲೆಗಸಿ ಬ್ಲೂ ಟಿಕ್‌’ಗಳನ್ನು ತೆಗೆದುಹಾಕುವ ಯೋಜನೆಯನ್ನು ಟ್ವಿಟರ್‌ ಪ್ರಕಟಿಸಿತ್ತು. ಆದರೆ, ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ ಎಂದು ಹೇಳಿತ್ತು.

ಈ ಸುದ್ದಿ ಓದಿದ್ದೀರಾ? ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಫೋಟಗೊಂಡ ಇಲಾನ್ ಮಸ್ಕ್ ಒಡೆತನದ ರಾಕೆಟ್‌

ಇದೀಗ ಚಂದಾದಾರರಲ್ಲದ ಎಲ್ಲ ಖಾತೆಗಳಿಂದಲೂ ನೀಲಿ ಚಿಹ್ನೆಯನ್ನು ತೆಗೆಯುವ ನಿರ್ಧಾರ ಕೈಗೊಂಡಿದೆ. ಖಾತೆಯ ದೃಢೀಕರಣಕ್ಕಾಗಿ ನೀಲಿ ಚಿಹ್ನೆ ಅವಶ್ಯವಾಗಿದ್ದು, ಈ ನೀಲಿ ಚಿಹ್ನೆ ಪಡೆಯಲು ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಟ್ವಿಟರ್ ಹೇಳಿದೆ.

ಟ್ವಿಟರ್ ಬ್ಲೂ ಟಿಕ್‌ ಅನ್ನು ಯಾರು ಬೇಕಾದರೂ ಪಡೆಯಬಹುದಾಗಿದೆ. ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಬ್ಲೂ ಟಿಕ್‌ಮಾರ್ಕ್‌ಗಾಗಿ ಮಾಸಿಕ 900 ರೂ. ಪಾವತಿಸಿ ಚಂದಾದಾರರಾಗಬೇಕು. ವೆಬ್ ಬಳಕೆದಾರರಿಗೆ ಈ ಶುಲ್ಕ ರೂ. 650 ಇರಲಿದೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ ಸೇರಿದಂತೆ ಅನೇಕ ಕ್ರಿಕೆಟಿಗರ ಪ್ರೊಫೈಲ್‌ಗಳಿಂದಲೂ ಬ್ಲೂ ಟಿಕ್‌ ಅನ್ನು ಕಂಪನಿ ತೆಗೆದು ಹಾಕಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಸಲ್ಮಾನ್​ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಲಾಗಿದೆ. ಯಶ್, ಅಲ್ಲು ಅರ್ಜುನ್ ಹಾಗೂ ಟ್ವಿಟ್ಟರ್​ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುವ ಅಮಿತಾಭ್ ಬಚ್ಚನ್ ಸೇರಿ ಎಲ್ಲ ಸೆಲೆಬ್ರಿಟಿ ಟ್ವಿಟರ್ ಬಳಕೆದಾರರ ಬ್ಲೂ ಟಿಕ್ ಮಾಯವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X