ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ಡಿಕೆ ಸುರೇಶ್‌ಗೆ ಮತ ನೀಡುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾವೇರಿ ನೀರು ಬೇಕೆಂದರೆ, ಸಿ.ಎ ನಿವೇಶನ ಮತ್ತು ಹಕ್ಕುಪತ್ರ ನೀಡಬೇಕೆಂದರೆ ಡಿ.ಕೆ ಸುರೇಶ್‌ಗೆ ಮತ ನೀಡಬೇಕು ಎಂದು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಡಿ.ಕೆ ಶಿವಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿದೆ.
ಈ ಹಿಂದೆ, ಇದೇ ಆರೋಪ ಸಂಬಂಧ ಬಿಜೆಪಿ ವಿಡಿಯೋವೊಂದನ್ನು ಪೋಸ್ಟ್ ಮಾಡಿತ್ತು. ವಿಡಿಯೋದಲ್ಲಿ ‘ನಿಮ್ಮ ಅಪಾರ್ಟ್‌ಮೆಂಟ್ ಸಮಸ್ಯೆ ಎಂದರೆ, ಹಕ್ಕುಪತ್ರ ಹಸ್ತಾಂತರವಾಗದೇ ಇರುವುದು ಮತ್ತು ಕಾವೇರಿ ನೀರು ಸಂಪರ್ಕ ದೊರೆಯದೇ ಇರುವುದು. ನೀವು ನಮಗೆ ಮತ ನೀಡಿದರೆ, 2-3 ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಕಂಡುಬಂದಿದೆ.
DK Shivkumar, Deputy CM of Karnataka, in brazen abuse of power, holds voters of a large housing society in his brother DK Suresh’s constituency, to ransom. Sounding every bit menacing, he wields a threat, couched in crass humour, that if the residents don’t vote for his brother,… pic.twitter.com/Kd08TRnSzA
— Amit Malviya (मोदी का परिवार) (@amitmalviya) April 17, 2024