ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ ಎಸ್ ಈಶ್ವರಪ್ಪನವರ ಸ್ಪರ್ಧೆಯ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, “ಈಶ್ವರಪ್ಪನವರ ವಿಚಾರ ರಾಷ್ಟ್ರೀಯ ನಾಯಕರ ಗಮನದಲ್ಲಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅದರ ಪರಿಣಾಮ ಏನು ಕೂಡ ಆಗಲ್ಲ” ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಶಿವಮೊಗ್ಗದಲ್ಲಿ ರಾಘವೇಂದ್ರ ಜನಪ್ರಿಯ ಸಂಸದರು. ಮೋದಿಯ ಜನಪ್ರಿಯತೆ ಮತ್ತು ರಾಘವೇಂದ್ರ ಅಭಿವೃದ್ಧಿ ಕೆಲಸದಿಂದ ಎರಡು ಲಕ್ಷಕ್ಕೂ ಅಧಿಕ ಅಂತರದಲ್ಲಿ ಗೆಲ್ಲುತ್ತಾರೆ. ರಾಜ್ಯದಲ್ಲಿ ವಾತಾವರಣ ನಮಗೆ ಪೂರಕವಾಗಿದೆ. ಮೋದಿ ಪ್ರಧಾನಿ ಆಗಬೇಕೆನ್ನುವುದು ಸಹಜ ಅಭಿಪ್ರಾಯವಾಗಿದೆ” ಎಂದರು.
“ಕರಾವಳಿ ದೇಶಭಕ್ತರ ಸಂಕಲ್ಪ
ಮತ್ತೊಮ್ಮೆ ಮೋದಿ ಸರ್ಕಾರ”ಉಡುಪಿಯಲ್ಲಿಂದು ಬೃಹತ್ ರೋಡ್ ಶೋ ಮೂಲಕ ತೆರಳಿ ಯುವ ಮೋರ್ಚಾ ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಲಾಯಿತು. ದೇಶವೇ ನನ್ನ ಪರಿವಾರವೆಂದು ಭಾವಿಸಿ ಒಂದು ದಿನವೂ ವಿಶ್ರಾಂತಿ ಪಡೆಯದೇ ಭಾರತದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರನ್ನು… pic.twitter.com/dVUeLTyrtG
— Vijayendra Yediyurappa (Modi Ka Parivar) (@BYVijayendra) April 20, 2024
“ಕಾಂಗ್ರೆಸ್ ಪಕ್ಷದಲ್ಲಿ ಪ್ರತಿದಿನ ಉತ್ಸಾಹ ಕುಸಿಯುತ್ತಿದೆ. ಮೋದಿ ಜನಪ್ರಿಯ ಕಾರಣಕ್ಕೆ ರಾಜ್ಯದ ಯಾವುದೇ ಸಚಿವರು ಸ್ಪರ್ಧೆ ಮಾಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೇಹಾ ಹತ್ಯೆ ಪ್ರಕರಣ, ಚನ್ನಗಿರಿ, ಗದಗ ಪ್ರಕರಣವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ” ಎಂದು ವಿಜಯೇಂದ್ರ ದೂರಿದರು.
“ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವು ವೈಯಕ್ತಿಕ ಕಾರಣಕ್ಕೆ ಆಗಿದೆ ಎನ್ನುತ್ತಾರೆ. ಇದು ಅಲ್ಪಸಂಖ್ಯಾತರ ತುಷ್ಠೀಕರಣ ರಾಜಕಾರಣವಾಗಿದೆ. ರಾಜ್ಯದ ಜನತೆಯ ರಕ್ಷಣೆ ವಿಚಾರ ಇವರಿಗೆ ಬೇಕಾಗಿಲ್ಲ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಜನರು ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ” ಎಂದರು.
ಕಾಂಗ್ರೆಸ್‌ನ ‘ಚೊಂಬು’ ಜಾಹೀರಾತು ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ, “ಕಾಂಗ್ರೆಸ್‌ನವರು ಹತಾಶ ಭಾವನೆಯಿಂದ ಈ ರೀತಿ ನಡೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ವೈಫಲ್ಯತೆಯಿಂದ ಕಾಂಗ್ರೆಸ್ಸಿಗೆ ಜ್ಞಾನೋದಯವಾಗಿದೆ. ಗೆಲ್ಲುವುದಿಲ್ಲ ಎಂದು ಗ್ಯಾರಂಟಿಯಾದ ನಂತರ ಹತಾಶೆಯಿಂದ ಜಾಹೀರಾತು ನೀಡುತ್ತಿದ್ದಾರೆ. ಜನರೇ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ” ಎಂದು ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ
ಉಡುಪಿಯಲ್ಲಿ ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಅವರೊಂದಿಗೆ ಯುವ ಭಾರತ ಸಮಾವೇಶದಲ್ಲಿ ಭಾಗವಹಿಸಿದ ಕ್ಷಣ.@BYVijayendra#ಮತ್ತೊಮ್ಮೆಮೋದಿಸರ್ಕಾರ pic.twitter.com/Y5Hvttnsu2— Sunil Kumar Karkala (Modi Ka Parivar) (@karkalasunil) April 20, 2024
“ನೇಹಾ ಹತ್ಯೆ ಪ್ರಕರಣ ಪ್ರತಿಯೊಬ್ಬ ಮಹಿಳೆ ರಕ್ಷಣೆ ಇಲ್ಲ ಎಂದು ಯೋಚಿಸುತ್ತಿದ್ದಾರೆ. ಅತಿ ಶೀಘ್ರದಲ್ಲಿ ನೇಹಾ ಪ್ರಕರಣದ ಬಗ್ಗೆ ನಾವು ಹೋರಾಟ ಕೈಗೊಳ್ಳುತ್ತೇವೆ” ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಚುನಾವಣೆ ನಂತರ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಮುರಿದು ಬೀಳಲಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, “ಚುನಾವಣೆ ನಂತರ ಮೈತ್ರಿ ಹೇಗೆ ಹೋಗುತ್ತದೆ ಅನ್ನೋದನ್ನು ಅವರೇ ನೋಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ವಾತಾವರಣ ಇದೆ. ಚುನಾವಣೆ ನಂತರ ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರಲಿದ್ದಾರೆ” ಎಂದು ಭವಿಷ್ಯ ನುಡಿದರು.
