ಕಲಬುರಗಿ | ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ; ದಸಂಸ ಕರೆ

Date:

Advertisements

“ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್‌ರವರು ಬಹುಸಂಸ್ಕೃತಿಯ ಚಿಂತನೆಗಳನ್ನು ಕೆಲವರು ಓದಿರಬಹುದು, ಕೆಲವರು ತಿಳಿದುಕೊಂಡಿರಬಹುದು. ಚರಿತ್ರೆಯ ವಿದ್ಯಾರ್ಥಿಯೂ ಆಗಿರುವ ಬಾಬಾಸಾಹೇಬರು ಭಾರತದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನದ ಮಾಡಿದ ನಂತರ, ಭಾರತದ ಇತಿಹಾಸ ಬೇರೇನೂ ಅಲ್ಲ, ಇದು ಶ್ರಮಣ ಸಂಸ್ಕೃತಿ ಮತ್ತು ಬ್ರಾಹ್ಮಣ ಸಂಸ್ಕೃತಿಯ ಸಂಘರ್ಷವಾಗಿದೆ ಎಂದಿದ್ದಾರೆ” ಎಂದು ದಸಂಸ ಜಿಲ್ಲಾ ಸಂಚಾಲಕ ವಿನೋದಕುಮಾರ ಎಸ್. ಕಾಂಬಳೆ ಹೇಳಿದರು.

ಕಲಬುರಗಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, “ಬಹುಜನ ಹಿತಾಯ ಬಹುಜನ ಸುಖಾಯ, ಲೋಕಾನುಕಂಪಯಾ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವ ಬೌದ್ಧ ಧಮ್ಮದ ಮೇಲೆ ಚಾತುರ್ವಣ್ರ ಪದ್ಧತಿಯನ್ನು ಪ್ರತಿಪಾದನೆ ಮಾಡುವ ವೈದಿಕ ಧರ್ಮವು ಸೈದ್ದಾಂತಿಕವಾಗಿ ದೌರ್ಜನ್ಯ ಮಾಡಿರುವ ದುರಂತದ ಕತೆಯೇ ಭಾರತದ ಇತಿಹಾಸವಾಗಿದೆ. ವೈದಿಕರ ಅವೈಜ್ಞಾನಿಕ ದುರಾಕ್ರಮಣದಿಂದಾಗಿ ಸಮಾನತೆಯ ಸೌದದ ಶಿರದ ಮೇಲೆ ಅಸಮಾನತೆಯ ಆಕ್ರಮಣದ ಅರಮನೆಯನ್ನು ಕಟ್ಟಿ ಮೆರೆಯುತ್ತಲಿದ್ದರು” ಎಂದರು.

ತಥಾಗತ ಗೌತಮ ಬುದ್ಧರ ದೀಪದ ಬೆಳಕಿನಲ್ಲಿ ಬೆಳೆದ ಜ್ಯೋತಿಬಾ ಫುಲೆಯವರ ಅಕ್ಷರದ ಜ್ಯೋತಿಯೂ ಅಂಬೇಡ್ಕರ್ ಎಂಬ ಜ್ವಾಲೆಯಾಗಿ ಇಂದು ವಿಶ್ವಕ್ಕೆ ಬೆಳಕನ್ನು ನೀಡುವ ಜ್ಞಾನದ ಚಿಹ್ನೆಯಾಗಿದೆ. ಈ ಜ್ಞಾನವು ಅಟ್ಟಹಾಸದಿಂದ ಮೆರೆಯುತ್ತಲಿದ್ದ ಜಾತಿವಾದಿ ಅಧಮರನ್ನು ಅಧಃಪತನ ಮಾಡುವ ಮೂಲಕ ಮಗದೊಂದು ಹೊಸತಾದ ಸಮಾನತೆಯ ಚರಿತ್ರೆಯನ್ನು ಹುಟ್ಟು ಹಾಕಿದರು. ಅವರ ಈ ನವಚರಿತ್ರೆಗೆ ಪ್ರತಿಕ್ರಾಂತಿ ಎಂದು ಕರೆಯುತ್ತಾರೆ ಎಂದರು.

Advertisements

ಮನುವಾದದ ವಿರುದ್ಧ ಪ್ರತಿಕ್ರಾಂತಿ ಕೇವಲ ಬಾಬಾಸಾಹೇಬರಿಂದಲೇ ಆರಂಭವಾಗಲಿಲ್ಲ. ಅವರ ಪೂರ್ವದಲ್ಲಿ ದೇಶದಾದ್ಯಂತನ ಹಾಗೂ ಜ್ಞಾನದ ಭೂಮಿಯಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಶರಣರು, ಸಂತರು, ಸೂಫಿಗಳು, ದಾಸರು, ದಾರ್ಶನಿಕರು, ವಚನಕಾರರು, ಚಾರ್ವಾಕರು, ತತ್ವಪದಕಾರರು ಮುಂತಾದವರೂ ಕೂಡಾ ವೈದಿಕ ಅಂಧಾನುಕರಣೆಯ ವಿರುದ್ಧ ಪ್ರತಿಕ್ರಾಂತಿ ಆರಂಭ ಮಾಡಿದರು ಎಂದರು.

ಅವರ ವೈಚಾರಿಕ ದಾರಿಯಲ್ಲಿ ಸಾಗುತ್ತಾ ಬಂದ ಬಾಬಾಸಾಹೇಬರು ವೈದಿಕರ ಉದರ ಪೋಷಣೆಯ ಪರಿಕರಗಳಾಗಿದ್ದ ಅಂಧಶೃದ್ಧೆ, ಮೌಡ್ಯ, ಕಂದಾಚಾರ, ಸ್ವರ್ಗ-ನರಕ ಪಾಪ-ಪುಣ್ಯ ಎಂಬ ಅಮಾನವೀಯ ಹೇಯ ಕೃತ್ಯಗಳಿಗೆ ಶಾಸನ ಬದ್ಧವಾಗಿ ಸಂವಿಧಾನದ ಮೂಲಕ ಕಡಿವಾಣ ಹಾಕಿದರು. ಬಾಬಾಸಾಹೇಬರ ವೈಚಾರಿಕ, ಸಾಮಾಜಿಕ, ರಾಜಕೀಯ, ಮತ್ತು ಶೈಕ್ಷಣಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ದಲಿತ ಹೋರಾಟಗಾರರು 1975ರಿಂದ ಇಲ್ಲಿವರೆಗೂ ಚಳುವಳಿಯ ಮೂಲಕ ಸಮಾನತೆಯ ಸಾಮಾಜಿಕ ನ್ಯಾಯದ ಪಾಲನ್ನು ಭಾಗಶಃ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಅಸೂಯೆ ಪಡುತ್ತಿದ್ದ ಆಳುವ ವರ್ಗ, ಸಮಯ ಸವೆದಂತೆ ದಲಿತ ಸಮಾಜವನ್ನು ಒಡೆದು ಆಳುತ್ತಾ ದಲಿತರ ಭಾವಿ ಬದುಕಿಗೆ ಕೊಳ್ಳಿ ಇಡಲು ಆರಂಭಿಸಿದರು ಎಂದ ಅವರು,

ಬಾಬಾಸಾಹೇಬರ ಪರಿನಿಬ್ಬಾಣದ ನಂತರ ವೈದಿಕ ಪರಂಪರೆ ಮತ್ತೆ ಅಟ್ಟಹಾಸದಿಂದ ಮೆರೆಯುತ್ತಾ ರಾಜಕೀಯ ಸಂವಿಧಾನದ ಮೇಲೆ ಸಾಂಸ್ಕೃತಿಕ ವಸಾಹತುಶಾಹಿ ಸಂವಿಧಾನ, ದೌರ್ಜನ್ಯ ಪೂರ್ವಕವಾಗಿ ಆಡಳಿತ ಮಾಡುತ್ತಲಿದೆ. ಇದರಿಂದಾಗಿ ಸಂವಿಧಾನ ಧಕ್ಕೆಯುಂಟಾಗುತ್ತಲಿದೆ. ಪೀಠಿಕೆಯ ಮೂಲ ಆಶಯಗಳಿಗೆ ಹಾಗೂ ಉದ್ದೇಶ ಪೂರ್ವಕವಾಗಿ ಧಕ್ಕೆ ಮಾಡುತ್ತಲಿದ್ದಾರೆ ಎಂದರು.

ಸಂವಿಧಾನ ಬದಲಾಯಿಸುತ್ತೇವೆ, ಹೊಸ ಸಂವಿಧಾನ ಬರೆಯುತ್ತೇವೆ ಎಂಬ ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಲಿದ್ದಾರೆ. ಮನುವಾದಿಗಳು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಾ, ನಾವು 400 ಸೀಟ್ ಗೆದ್ದರೆ ಈ ಸಂವಿಧಾನ ತೆಗೆದು ಹಾಕಿ ಮನುವಾದದ ಹೊಸ ಸಂವಿಧಾನ ಬರೆಯುತ್ತೇವೆ ಎಂದು ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡುವ ಮೂಲಕ ಸರ್ವಾಧಿಕಾರದ ಧೋರಣೆಯನ್ನು ಹೊರ ಹಾಕುತ್ತಲಿದ್ದಾರೆ. ಮನುವಾದಿಗಳ ಈ ಧೋರಣೆಯನ್ನು ಖಂಡಿಸಬೇಕಾಗಿದ್ದ ಮಾಧ್ಯಮದ ಮಿತ್ರರು ಮಾತನಾಡದವರಾಗಿದ್ದಾರೆ. ಮಾತನ್ನಾಡುವ ಮಾಧ್ಯಮದ ಮಿತ್ರರನ್ನು ಆ ವೃತ್ತಿಯಿಂದಲೇ ನಿವೃತ್ತಿ ಮಾಡುತ್ತಲಿದ್ದಾರೆ. ಸಮಕಾಲೀನ ಸಂದರ್ಭದ ಸಂಧಿಗ್ಧ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ ಭಾರತದಲ್ಲಿ ‘ಅಘೋಷಿತ’ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂಬುದು ಕಂಡು ಬರುತ್ತಲಿದೆ ಎಂದು ಹೇಳಿದರು.

ಆಳುವ ಸರ್ಕಾರದ ವಿರುದ್ಧ ಯಾರಾದರೂ ಮಾತನ್ನಾಡಿದರೆ. ಅವರಿಗೆ ಐ.ಟಿ. ಈ.ಡಿ, ಸಿ.ಬಿ.ಐ, ಮುಂತಾದ ಸರ್ಕಾರಿ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿ ಜನರಲ್ಲಿ ಭಯದ ಭಾವನೆಯನ್ನು ಮೂಡಿಸುತ್ತಿದ್ದಾರೆ. ಅವರೇ ಹೇಳುವ ಹಾಗೆ 2025ರವರೆಗೆ ಭಾರತದಲ್ಲಿ ಮನುಶಾಸನವನ್ನು ಜಾರಿಗೆ ತಂದು ಚಾತುರ್ವಣ್ರ ಪದ್ಧತಿಯನ್ವಯ ಆಯಾ ಜಾತಿಯ ಜನಾಂಗ ಆಯಾ ಜಾತಿಯ ಕುಲ ಕಸಬುಗಳನ್ನು ಮಾಡುವಂತ ವಾತಾವರಣ ಸೃಷ್ಟಿಸುತ್ತಲಿದ್ದಾರೆ ಎಂದರು.

ಪಾರ್ಲಿಮೆಂಟ್ ಭವನ ಉದ್ಘಾಟನೆ ಮಾಡಬೇಕಾಗಿದ್ದದ್ದು ಭಾರತದ ಮೊದಲ ಪ್ರಜೆ ರಾಷ್ಟ್ರಾಧ್ಯಕ್ಷರಾಗಿರುವ ದೌಪದಿ ಮುರ್ಮರವರು. ಆದರೆ, ಸಂತರಿಂದ ಪಾರ್ಲಿಮೆಂಟ್ ಉದ್ಘಾಟನೆ ಮಾಡಿಸುತ್ತಾರೆ. ರಾಷ್ಟ್ರ ಲಾಂಛನ ಇಡಬೇಕಾಗಿದ್ದ ಸ್ಥಳದಲ್ಲಿ ಜಾತಿವಾದವನ್ನು ಸಾರುವ ʼಸಿಂಘೋಲ’ ಇಟ್ಟು ಪೂಜೆ ಮಾಡಿಸುತ್ತಾರೆ. ಆ ಮೂಲಕ ಸಂವಿಧಾನದ ಆಶಯಗಳಗೆ ಕೊಳ್ಳಿ ಇಡುತ್ತಲಿದ್ದಾರೆ. ಜಾತ್ಯತೀತ ಉದ್ದೇಶ ಹೊಂದಿರುವ ಭಾರತದಲ್ಲಿ, ಜಾತ್ಯಾತೀತ ಪ್ರತಿಪಾದನೆ ಮಾಡಬೇಕಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರವನ್ನು ಉದ್ಘಾಟನೆ ಮಾಡುವ ಮೂಲಕ ಜಾತಿವಾದವಕ್ಕೆ ಇಂಬು ನಡುತ್ತಲಿದ್ದಾರೆ ಎಂದರು.

ಇವರನ್ನು ಹೀಗೆ ಬಿಟ್ಟರೇ ಮುಂದಿನ ದಿನಗಳನ್ನು ಎಸ್.ಸಿ, ಎಸ್.ಟಿ, ಒಬಿಸಿ ಮತ್ತು ಮಹಿಳೆಯರು ಪುನಃ ಗುಲಾಮಗಿರಿಗೆ ಒಳಪಡುತ್ತಾರೆ. ಇದಕ್ಕೆ ಕಡಿವಾಣ ಹಾಕುವುದು ಅವಶ್ಯಕತೆ ಇದೆ. ಇಲ್ಲದಿದ್ದರೆ ಬ್ರಾಹ್ಮಣ ಶಾಹಿ ವರ್ಗ ಮತ್ತು ಬಂಡವಾಳ ಶಾಹಿ ವರ್ಗ ಈ ದೇಶವನ್ನು ಅಕ್ಟೋಪಾಸ್ ತರಹ ನುಂಗಿಹಾಕುತ್ತದೆ. ಅದಕ್ಕಾಗಿ ಮನುವಾದಿಗಳ ಈ ಹೇಯ ಕೃತ್ಯಕ್ಕೆ ಕಡಿವಾಣ ಹಾಕಲು ಈ ದೇಶದ ಎಲ್ಲಾ ಜನಾಂಗ ಪ್ರತಿರೋಧ ಒಡ್ಡುವ ಅನಿವಾರ್ಯತೆ ಇದೆ ಎಂದರು.

ಈ ನೆಲದ ಪ್ರತಿರೋಧದ ಪರಂಪರೆಯೂ ಬಲವಾಗಿದೆ. ಇಂದು ಇಡೀ ದೇಶದ ದುಡಿಯುವ ಜನರು, ದಮನಿತ ‌ ಸಮುದಾಯಗಳು, ಅಲ್ಪಸಂಖ್ಯಾತರು, ಪ್ರಜ್ಞಾವಂತ ಜನಾಂಗ ಒಂದಾಗಿ ಮನುವಾದಿ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸುವ ಮೂಲಕ ಸಂಘ ಪರಿವಾರದ ಷಡ್‌ಯಂತ್ರವನ್ನು ವಿಫಲಗೊಳಿಸಲು ಎಲ್ಲಾ ಜಾತಿಯ ಜನಾಂಗ ಒಗ್ಗೂಡಿ ಈ ಚುನವಣೆಯಲ್ಲಿ ಕೋಮುವಾದಿ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವನ್ನು ಸೋಲಿಸುವ ಮೂಲಕ ನಮ್ಮ ಅಸ್ತಿತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ನಮಗಿದೆ ಎಂದು ಹೇಳಿದರು.

1818ರಲ್ಲಿ ಪೇಕ್ಷೆಗಳ ಅಟ್ಟಹಾಸಕ್ಕೆ ಮಟ್ಟ ಹಾಕಿರುವ ಮಹಾರ್ ಯೋದ್ಧರಂತೆ ನಾವೂ ಕೂಡಾ ಮತ್ತೊಂದು ‘ಭೀಮಾ ಕೋರೆಗಾಂವ” ಯುದ್ಧಕ್ಕೆ ಸಜ್ಜಾಗಬೇಕಾಗಿದೆ. ʼಬನ್ನಿ ಯಾರೂ ಬಂದರೂ ಅಷ್ಟೇ ಅದು ಕಾಂಗ್ರೇಸ್ ಆಗಿರಬಹುದು, ಅಥವಾ ಭಾರತೀಯ ಜನತಾ ಪಕ್ಷವಾಗಿರಲಿ ಎಲ್ಲಾ ಒಂದೇʼ ಎಂಬ ಹತಾಸೆಯ ಮಾತುಗಳನ್ನು ಬಿಟ್ಟು ನನ್ನ ಓಟು ನನ್ನ ಹಕ್ಕು, ಎಂಬುವುದನ್ನು ಸ್ಮರಣೆ ಮಾಡಿಕೊಂಡು, ಈ ಬಾರಿ ಕೋಮುವಾದಿ ಭಾರತೀಯ ಜನತಾ ಪಕ್ಷಕ್ಕೆ ಸೋಲಿಸಿ, ಕಾಂಗ್ರೇಸ್‌ನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.

ಸಂವಿಧಾನ ಉಳಿಸಲು, ಸಮಾನತೆ ಕಾಪಾಡಲು, ಸ್ವಾತಂತ್ರ್ಯ ಪಡೆಯಲು ಪ್ರಾತಿನಿಧ್ಯತೆ ಜೇವಂತ ಇಡಲು, ಬಹುಸಂಸ್ಕೃತಿ ಭಾರತವನ್ನು ಜಾತ್ಯಾತೀತ ಭಾರತವನ್ನು ಜಾತುವಾದಿ ಭಾರತವನ್ನಾಗಿ ಮಾಡುವ ಹುನ್ನಾರಗಳಿಗೆ ಪ್ರತಿಬಂಧಿಸಲು ರಾಜ್ಯಾದಾದ್ಯಂತ ‘ದಲಿತ ಸಂಘರ್ಷ ಸಮಿತಿ -ಕರ್ನಾಟಕ(ರಿ), ಬೆಂಗಳೂರಿನ ಎಲ್ಲಾ ಜಿಲ್ಲೆಯ, ತಾಲ್ಲೂಕಿನ ಮತ್ತು ಗ್ರಾಮ ಶಾಖೆಗಳ ಪದಾಧಿಕಾರಿಗಳು ಮನೆ ಮನೆಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಮತವನ್ನು ಹಾಕುವ ಮೂಲಕ ಕೋಮುವಾದಿ ಜನತಾ ಪಕ್ಷವನ್ನು ಸೋಲಿಸುವ ಮೂಲಕ ಸಂವಿಧಾನವನ್ನು ಉಳಿಸಿಕೊಳ್ಳೋಣ ಎಂದರು.

ಈ ಕೆಲಸವು ಪ್ರತಿಯೊಬ್ಬ ನಮ್ಮ ಪದಾಧಿಕಾರಿಯ ಜವಾಬ್ದಾರಿಯಾಗಿದೆ. ಸಾಮಾಜಿಕ ಮನುವಾದವನ್ನು ಮೆಟ್ಟಿ ನಿಲ್ಲೋಣ, ಪ್ರತಿಕ್ರಾಂತಿಯನ್ನು ಮಾಡಿಕೊಳ್ಳೋಣ. ಜನ ಕ್ರಾಂತಿಯನ್ನು ಸಾಧಿಸಿ ತೋರಿಸೋಣ, ಸಂವಿಧಾನವನ್ನು ಸಂರಕ್ಷಣೆ ಮನುವಾದಿ ಬಿ.ಜೆ.ಪಿ ಸೋಲಿಸಿ, ಮಾನವತಾವಾದಿ ಕಾಂಗ್ರೆಸ್‌ ಗೆಲ್ಲಿಸಿ ಎಂದರು.

ಈ ಸಂದರ್ಭದಲ್ಲಿ ಸತೀಶ್ ಕುಮಾರ್ ಸಾಗರನೂರ, ಮೋಹನ್ ಜಿ. ದಿನಸಿ, ಅಂಕುಶ ಕಣಜಿಕರ್, ಪ್ರದೀಪ, ಆಜಾದಪುರ, ದಯಾನಂದ ಬಿ.ತಳಕೇರಿ, ಶರಣಬಸಪ್ಪ ಆರ್. ಕಾಂಬಳೆ, ಸೂರ್ಯಕಾಂತ ಬಿ ಜಾನೆ, ಇನ್ನಿತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

Download Eedina App Android / iOS

X