‘ಮೋದಿಗೆ ಮತ ಹಾಕಲ್ಲ’ ಎನ್ನುತ್ತಿದ್ದಾರೆ ಮೋದಿ ಬೆಂಬಲಿಗರು

Date:

Advertisements

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ. ಮನುವಾದ, ಫ್ಯಾಸಿಸಂ ವರ್ಸಸ್‌ ಸಂವಿಧಾನ, ಪ್ರಜಾಪ್ರಭುತ್ವದ ಹೋರಾಟದಲ್ಲಿ ಪ್ರಜಾಪ್ರಭುತ್ವ ಗೆಲ್ಲಲಿದೆ ಎಂಬುದನ್ನು ಈ ಮತದಾನ ಸೂಚಿಸುತ್ತದೆ. ಭಾವನಾತ್ಮಕ ವಿಷಯಗಳು (ಹಿಂದುತ್ವ, ಧರ್ಮ) ಜೀವನೋಪಾಯದ ನೈಜ ಸಮಸ್ಯೆಗಳನ್ನು ಹಿಂದಾಕಲು ವಿಫಲವಾಗಿವೆ ಎಂದು ವಿಪಕ್ಷಗಳು ವಾದಿಸುತ್ತಿವೆ. ಇದು, ಆಡಳಿತಾರೂಢ ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ ಎಂಬುದನ್ನು ಒತ್ತಿ ಹೇಳುತ್ತಿವೆ.

ಮೊದಲ ಹಂತದ ಮತದಾನ ನಡೆದ 21 ರಾಜ್ಯಗಳ ನಾನಾ ಕ್ಷೇತ್ರಗಳಲ್ಲಿ ‘ಇಂಡಿಯಾ’ ಮೈತ್ರಿಕೂಟ ಪರವಾದ ಪ್ರತಿಕ್ರಿಯೆಗಳಿವೆ ಎಂದು ವಿಪಕ್ಷಗಳು ಹೇಳಿಕೊಂಡಿವೆ. ಆದರೂ, ಈ ಚುನಾವಣೆಯಲ್ಲಿ ಮೋದಿಯನ್ನು ಕೆಳಗಿಳಿಸಲು ಕೆಲವು ತೊಡಕುಗಳು ಎದುರಾಗಬಹುದು ಎಂಬ ಭಯವೂ ವಿಪಕ್ಷಗಳಲ್ಲಿದೆ. ಇದೆಲ್ಲದರ ನಡುವೆಯೂ, ಕಡಿಮೆ ಮತದಾನದ ಪ್ರಮಾಣವು ಮೋದಿ ಪರವಾದ ಯಾವುದೇ ಅಲೆ ಇಲ್ಲದಿರುವುದು ಮತ್ತು ಮತದಾರರು ಸರ್ಕಾರ ಮೇಲೆ ಅಸಮಾಧಾನಗೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇವಲ ನಾಲ್ಕು ತಿಂಗಳ ಹಿಂದೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ 74.62% ರಷ್ಟು ಮತದಾನ ದಾಖಲಾಗಿತ್ತು. ಆದರೆ ಈಗ, ಅದೇ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು 57.65% ಕ್ಕೆ ಕುಸಿದಿದೆ. ಅಂದರೆ, 17% ಮತಗಳ ಕುಸಿತವಾಗಿದ್ದು, ಲಕ್ಷಗಟ್ಟಲೆ ಮತದಾರರು ದೂರ ಉಳಿದಿದ್ದಾರೆ. ಇದು ಅಂತಿಮ ಫಲಿತಾಂಶದಲ್ಲಿ ಆಶ್ಚರ್ಯಕರ ಫಲಿತಾಂಶಕ್ಕೆ ಕಾರಣವಾಗಬಹುದು.

Advertisements

ಯಾವ ರೀತಿಯ ಮತದಾರರು ನಿರಾಸಕ್ತಿ ತೋರಿಸಿದ್ದಾರೆ ಎಂದು ಊಹಿಸುವುದು ಸದ್ಯಕ್ಕೆ ಕಷ್ಟ. ಮೋದಿಯೇ ಗೆಲ್ಲುತ್ತಾರೆಂದು ಭಾವಿಸಿ, ಮೋದಿ ವಿರೋಧಿಗಳು ಮತ ಚಲಾಯಿಸಿಲ್ಲವೆಂದು ಬಿಜೆಪಿಗರು ನಂಬಿದರೆ, ಪ್ರತಿಪಕ್ಷ ನಾಯಕರು ಜನರು ಮೋದಿ ಬ್ರಾಂಡ್ ರಾಜಕೀಯದಿಂದ ಬೇಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಮೊದಲ ಹಂತದ ಮತದಾನದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ವಿದರ್ಭದ ಮುಖಂಡರೊಬ್ಬರು, “ನಾವು ಈಗ ಮೋದಿ ವಿರೋಧಿ ಅಲೆಯನ್ನು ನೋಡುತ್ತಿದ್ದೇವೆ; ಹಲವು ಗ್ರಾಮಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಾಮಾನ್ಯ ನಾಗರಿಕರು ಮತದಾನ ಮಾಡುವಂತೆ ಪ್ರೇರೇಪಿಸುತ್ತಿರುವುದೂ ಕಂಡುಬರುತ್ತಿದೆ. ನಿತಿನ್ ಗಡ್ಕರಿ ಕೂಡ ನಾಗ್ಪುರದಲ್ಲಿ ಹೆಣಗಾಡುತ್ತಿದ್ದಾರೆ. ಐದು ಸ್ಥಾನಗಳ ಪೈಕಿ ನಾಲ್ಕರಲ್ಲಿ ಗೆಲ್ಲುವ ವಿಶ್ವಾಸವಿದೆ” ಎಂದಿದ್ದಾರೆ.

“ಈ ಬಾರಿಯ ಚುನಾವಣೆಯಲ್ಲಿ 2019ರಲ್ಲಿ ಪುಲ್ವಾಮಾ ನಂತರದಲ್ಲಿ ಸಂಭವಿಸಿದಂತೆ, ರಾಜಕೀಯವನ್ನು ನಾಟಕೀಯವಾಗಿ ಹೈಜಾಕ್ ಮಾಡಬಹುದೆಂಬ ಆತಂಕವಿದೆ. ಮುಂದಿನ ಹಂತಗಳಲ್ಲಿ ನಡೆಯುವ ಮತದಾನಗಳಲ್ಲಿಯೂ ಸಾಮಾನ್ಯ ಸ್ಥಿತಿ ಮುಂದುವರೆದರೆ, ಜನರು ಜೀವನೋಪಾಯದ ವಿಚಾರಗಳ ಮೇಲೆ ಮತ ಚಲಾಯಿಸಲು ಅವಕಾಶವಿದ್ದರೆ, ಮಹಾ ವಿಕಾಸ್ ಅಘಾಡಿ (ವಿಪಕ್ಷಗಳ ಮೈತ್ರಿ) ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವು ಸಾಧಿಸುತ್ತದೆ. ಅಗತ್ಯ ವಸ್ತುಗಳ ಹೆಚ್ಚಿನ ಬೆಲೆಗಳನ್ನು ನಿರ್ಲಕ್ಷಿಸುವಂತೆ ಮತದಾರರನ್ನು ಮನವೊಲಿಸಲು ಬಿಜೆಪಿ ಬೆಂಬಲಿಗರಿಗೆ ಸಾಧ್ಯವಾಗುತ್ತಿಲ್ಲ. ನಿರುದ್ಯೋಗದಿಂದಾಗಿ ಯುವಜನರ ಕೋಪಗೊಂಡಿದ್ದಾರೆ. ರೈತರು ಕಂಗಾಲಾಗಿದ್ದಾರೆ. ಇದು ಅಂತಿಮವಾಗಿ ಬದಲಾವಣೆಗೆ ಮುನ್ನುಡಿ ಬರೆಯುವ ಚುನಾವಣೆಯಂತೆ ಕಾಣುತ್ತದೆ” ಎಂದು ಅವರು ಹೇಳಿದ್ದಾರೆ.

ಬಿಹಾರದ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕರೊಬ್ಬರು, “ಚುನಾವಣೆಯು ಉದ್ಯೋಗ ಮತ್ತು ಬೆಲೆ ಏರಿಕೆಯಂತಹ ನೈಜ ವಿಷಯಗಳ ಮೇಲೆ ನಡೆಯುತ್ತಿದೆ. ಬಿಜೆಪಿ ತನ್ನ ಪರವಾಗಿ ಮತದಾರರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

“ಅಯೋಧ್ಯೆಯಲ್ಲಿ ರಾಮಮಂದಿರದ ಕಾರಣದಿಂದ ಅಸಹಜ ವಾತಾವರಣವನ್ನು ಸೃಷ್ಟಿಸಲು ಬಿಜೆಪಿ ಯತ್ನಸಿತು. ಅದರೆ, ಆ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಪಾಕಿಸ್ತಾನ ವಿರೋಧವನ್ನು ನೋಡಿ ಮತ ಹಾಕುವುದು ಕಡಿಮೆಯಾಗಿದೆ, ”ಎಂದು ಅವರು ಹೇಳಿದ್ದಾರೆ.

ಮತದಾನ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, “ಮೊದಲ ಹಂತ, ಉತ್ತಮ ಪ್ರತಿಕ್ರಿಯೆ. ಇಂದು ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ಇಂದಿನ ಮತದಾನದಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯಲಾಗುತ್ತಿದೆ. ಭಾರತದಾದ್ಯಂತ ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ”

ಈ ವರದಿ ಓದಿದ್ದೀರಾ?: ಮನಮೋಹನ್ v/s ಮೋದಿ | ಯಾರ ಸರ್ಕಾರ ಬೆಸ್ಟ್‌? ಆರೋಗ್ಯ ಅಂಕಿಅಂಶಗಳು ಹೇಳುವುದೇನು?

ಆದರೆ ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್, “ಬಿಜೆಪಿಯ ಗ್ರಾಫ್: ಸೌತ್ ಮೇ ಸಾಫ್, ನಾರ್ತ್ ಮೇ ಹಾಫ್! (ದಕ್ಷಿಣದಲ್ಲಿ ಸ್ಪಷ್ಟ, ಉತ್ತರದಲ್ಲಿ ಅರ್ಧ – ದಕ್ಷಿಣದಲ್ಲಿ ಬಿಜೆಪಿ ಸಂಪೂರ್ಣ ಸೋಲುತ್ತದೆ, ಉತ್ತರದಲ್ಲಿ ಅರ್ಧದಷ್ಟು ಕಳದುಕೊಳ್ಳುತ್ತದೆ)” ಎಂದಿದ್ದಾರೆ.

“ಮೊದಲ ಹಂತದ ಮತದಾನದ ನಂತರ ನಮಗೆ ತಿಳಿದಿರುವುದು ಏನೆಂದರೆ; 1. ಮೊದಲ ಹಂತದಲ್ಲಿ, 21 ರಾಜ್ಯಗಳಲ್ಲಿ 102 ಸ್ಥಾನಗಳಲ್ಲಿ ಮತದಾನ ನಡೆದಿದೆ. ‘ಇಂಡಿಯಾ’ ಒಕ್ಕೂಟವು ಬಿಜೆಪಿಗಿಂತ ಬಹಳ ಮುಂದಿದೆ ಎಂದು ಗ್ರೌಂಡ್ ರಿಪೋರ್ಟ್ ಸ್ಪಷ್ಟವಾಗಿ ತೋರಿಸುತ್ತದೆ. ನಾವು ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಮುನ್ನಡೆದಿದ್ದೇವೆ. ಬಿಹಾರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಪ್ರಬಲ ಪ್ರದರ್ಶನ ನೀಡಿದ್ದೇವೆ. 2. ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯ ಸಾಧನೆ ಗಮನಾರ್ಹವಾಗಿ ಕಳಪೆಯಾಗಿದೆ. ಈ ಪ್ರವೃತ್ತಿಗಳಿಂದಾಗಿ ಬಿಜೆಪಿ ನಾಯಕತ್ವವು ಭಯಭೀತವಾಗಿದೆ – ಪ್ರಧಾನಿಯ ಟ್ವೀಟ್ ಅವರ ಪಾಳೆಯದಲ್ಲಿನ ಹತಾಶೆಯ ಸೂಚನೆಯಾಗಿದೆ. 3. ಮೋದಿ ಹವಾ ಇಲ್ಲದ ಕಾರಣ ಈ ಬಾರಿ ಕಷ್ಟಪಡಬೇಕಾಗುತ್ತದೆ ಎಂಬುದನ್ನು ಬಿಜೆಪಿ ಅಭ್ಯರ್ಥಿಗಳೇ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. 4. ಪ್ರಧಾನಮಂತ್ರಿಯವರು ತಮ್ಮ ಪ್ರಚಾರ ಭಾಷಣಗಳು ಮತ್ತು ಸಂದರ್ಶನಗಳಲ್ಲಿ ಸ್ಪೂರ್ತಿರಹಿತರಾಗಿದ್ದಾರೆ. ‘ಇಂಡಿಯಾ’ ಮೇಲಿನ ಅವರ ದಾಳಿಗಳು ದಣಿದ ಮತ್ತು ಬೇಸರದಿಂದ ಕೂಡಿವೆ. ಚುನಾವಣೆಗೆ ಅಜೆಂಡಾ ಹೊಂದಿಸಲು ಪ್ರಧಾನಿಗೆ ಸಾಧ್ಯವಾಗುತ್ತಿಲ್ಲ. ‘400 ಪಾರ್’ ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡುವ ಹೇಳಿಕೆಗಳು ಚುನಾವಣಾ ಕಣದಲ್ಲಿ ಹಿನ್ನಡೆಯನ್ನುಂಟುಮಾಡಿದೆ. ಕಾಂಗ್ರೆಸ್ ಗ್ಯಾರಂಟಿಗಳು ದೇಶದಾದ್ಯಂತ ಮೆಚ್ಚುಗೆ ಪಡೆಯುತ್ತಿವೆ. ಹೊಸ ಅಲೆ ಬೀಸುತ್ತಿದೆ” ಎಂದು ಅವರು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಫಲಿತಾಂಶ ಪ್ರಕಟವಾಗುವವರೆಗೂ ಪಕ್ಷಗಳ ಸಮರ್ಥನೆಗಳು ಮುಂದುವರೆಯುತ್ತವೆ. ಇದೆಲ್ಲದರ ನಡುವೆಯೂ, ಮತದಾರರ ಬೇಸರ, ನಿರಾಸಕ್ತಿ ಎದ್ದು ಕಾಣುತ್ತಿದೆ. ದೆಹಲಿಯಲ್ಲಿ ಮಧ್ಯಮ ವರ್ಗ ಜನರು ಬಿಜೆಪಿ ನಾಯಕರ ಮಾತುಗಳನ್ನು ಕೇಳಲು ನಿರಾಕರಿಸಿದ್ದರು. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಭಾರೀ ರಾಜಕೀಯ-ಧಾರ್ಮಿಕ ಉನ್ಮಾದವಿತ್ತು. ಆದರೆ, ಅದು ಚುನಾವಣೆಯಲ್ಲಿ ಆಸಕ್ತಿದಾಯಕ ವಿಚಾರವಾಗಿ ಉಳಿದಿಲ್ಲ. ಮೋದಿ ಭಕ್ತರೂ ಅದರ ಬಗ್ಗೆ ಹೆಚ್ಚಿಗೆ ಮಾತನಾಡುತ್ತಿಲ್ಲ.

ಬಿಜೆಪಿ – ಹಿಂದುತ್ವವನ್ನೇ ಮೈಗೂಡಿಸಿಕೊಂಡಿರುವ ಕೆಲವರು ಕೂಡ, ’ಈ ಬಾರಿ ನೋಟಾ (ಮೇಲಿನ ಯಾವುದೂ ಅಲ್ಲ) ಅತ್ಯುತ್ತಮ ಆಯ್ಕೆ’ ಎಂಬ ಅಸಮಾಧಾನ ಸಂದೇಶಗಳನ್ನು ವಾಟ್ಸಾಪ್‌ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ ಬೆಂಬಲಿಗರೊಬ್ಬರು, “ಈ ಬಾರಿ ಯಾವುದೇ ಉತ್ಸಾಹವಿಲ್ಲ. ಬೆಲೆ ಏರಿಕೆಯು ಜನರಲ್ಲಿ ಕೋಪ ತರಿಸಿದೆ. ನಿರುದ್ಯೋಗ ಮತ್ತು ದುಡಿಮೆಯಲ್ಲಿ ಇಳಿಕೆಯು ಪ್ರತಿಯೊಬ್ಬರನ್ನು ತೊಂದರೆಗೀಡು ಮಾಡಿದೆ. ಸ್ಥಳೀಯ ಮೂಲಸೌಕರ್ಯ ಸಮಸ್ಯೆಗಳು ಸಹ ವರ್ಷಗಳಿಂದ ಪರಿಹಾರವಾಗುತ್ತಿಲ್ಲ. ಜನರ ಮೂಲ ಸಮಸ್ಯೆಯನ್ನು ಪರಿಹರಿಸದ ರಾಜಕೀಯದ ನಿರರ್ಥಕತೆಯನ್ನು ಅರ್ಥಮಾಡಿಕೊಳ್ಳಲು ಹತ್ತು ವರ್ಷಗಳು ಬೇಕಾಯಿತು. ಈ ಬಾರಿ ತಮ್ಮ ಬೆಂಬಲಿಗರನ್ನು ಮತಗಟ್ಟೆಗೆ ಕರೆತರುವುದು ಬಿಜೆಪಿಗೆ ಅತ್ಯಂತ ಕಷ್ಟಕರವಾಗಿದೆ. ಜನರು ಬಿಜೆಪಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿಲ್ಲ. ಆದರೆ, ಈ ಬಾರಿ ಮೋದಿಗಾಗಿ ಮತ ಹಾಕಲು ಯಾರೂ ಮುಂದಾಗುವುದಿಲ್ಲ” ಎಂದು ಹೇಳಿದ್ದಾರೆ.

ಅಂದಹಾಗೆ, ವಿರೋಧ ಪಕ್ಷದ ನಾಯಕರೂ ಇದನ್ನೇ ಹೇಳುತ್ತಿದ್ದಾರೆ. ಮೋದಿ ಪರವಾಗಿ ಮತ ಹಾಕಲು ಜನರು ಉತ್ಸುಕರಾಗಿಲ್ಲ. ಮೋದಿ ವಿರುದ್ಧ ಸಿಟ್ಟಾಗಿರುವ ಜನರು ಮತಗಟ್ಟೆಗಳಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X