ಮಾಲ್ಡೀವ್ಸ್‌ನ ಸಂಸತ್ತಿನ ಮಜ್ಲಿಸ್‌ಗೆ ನಡೆದ ಚುನಾವಣೆಯಲ್ಲಿ ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ಆಡಳಿತಾರೂಢ ಪಕ್ಷವಾಗಿರುವ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮಾಲ್ಡೀವ್ಸ್‌ನ 93 ಸ್ಥಾನಗಳಲ್ಲಿ 90ರಲ್ಲಿ ಸ್ಪರ್ಧಿಸಿತ್ತು.
ރައްޔިތުންގެ މަޖިލީހުގެ އިންތިޚާބު 2024ގެ ވޯޓު ނެގުމުގެ ވަގުތު ހަމަވެ ކިއު ބަންދުކުރުމަށްފަހު ވޯޓުގުނުމުގެ މަސައްކަތް ކުރިއަށްދަނީ #vihi24 pic.twitter.com/vgZXpLzfiD
— Elections Commission (@ElectionsMv) April 21, 2024
ಮಾಲ್ಡೀವ್ಸ್ ಸಂಸತ್ತಿನಲ್ಲಿ ಪಿಎನ್‌ಸಿ ಬಹುಮತವನ್ನು ಪಡೆದುಕೊಂಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 60 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟವಾದ ಬಹುಮತ ಗಳಿಸಿಕೊಂಡಿದೆ. ಅಲ್ಲದೇ, ಕೆಲವು ಪಿಎನ್‌ಸಿ ಬೆಂಬಲ ಹೊಂದಿದ್ದ ಕೆಲವು ಸ್ವತಂತ್ರ ಅಭ್ಯರ್ಥಿಗಳು ಕೂಡ ಗೆಲುವು ಸಾಧಿಸಿದ್ದಾರೆ.
ಇನ್ನು ಪ್ರಮುಖ ವಿರೋಧ ಪಕ್ಷ ಹಾಗೂ ಭಾರತದ ಪರ ನಿಲುುವು ಹೊಂದಿದ್ದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಾಲ್ಡೀವ್ಸ್ ಡೆವಲಪ್‌ಮೆಂಟ್ ಅಲಯನ್ಸ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
#NDTVWorld | Landslide Win For Pro-China Leader's Party In Maldives Parliamentary Vote@ghazalimohammad reports pic.twitter.com/6aDdC0CBAh
— NDTV (@ndtv) April 21, 2024
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊಹಮ್ಮದ್ ಸೋಲಿಹ್ ಅವರನ್ನು ಸೋಲಿಸುವ ಮೂಲಕ ಮುಯಿಝ್ಝಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸೊಲಿಹ್ ಅವರ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಪ್ರಸ್ತುತ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿತ್ತು. ಇದು ಮುಯಿಝ್ಝಿ ಅವರಿಗೆ ಹೊಸ ಬಿಲ್‌ಗಳನ್ನು ಅಂಗೀಕರಿಸಲು ಕಷ್ಟಕರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಹೊಸ ಕಾನೂನುಗಳನ್ನು ಮಾಡಲು, ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷವು ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.
ಸಂಸತ್ತಿನ 93 ಸ್ಥಾನಗಳಿಗೆ ಆರು ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಗುಂಪುಗಳು 368 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜನಸಂಖ್ಯೆಯ ಹೆಚ್ಚಳದ ನಂತರ, ಹಿಂದಿನ ಸಂಸತ್ತಿಗಿಂತ ಆರು ಹೆಚ್ಚು ಸ್ಥಾನಗಳಿವೆ. ಚುನಾವಣೆಯಲ್ಲಿ ಸುಮಾರು 2,84,000 ಜನರು ಮತ ಚಲಾಯಿಸಿದ್ದಾರೆ.
ಮುಯಿಝ್ಜುವಿನ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಸ್ವತಂತ್ರರು ಕಣದಲ್ಲಿದ್ದರು.
ಕಳೆದ ಕೆಲವು ತಿಂಗಳಿನಿಂದ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿತ್ತು. ಇದರಿಂದಾಗಿ, ಮಾಲ್ಡೀವ್ಸ್ ನಲ್ಲಿದ್ದ ಭಾರತದ ಸೇನೆಯನ್ನು ಹಿಂದಕ್ಕೆ ಹೋಗುವಂತೆ ಅಧ್ಯಕ್ಷ ಮುಯಿಝ್ಝು ಆದೇಶ ನೀಡಿದ್ದರು.
