ಬಿಜೆಪಿ ಒತ್ತಡದಿಂದ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ತಿರಸ್ಕಾರ; ಹೈಕೋರ್ಟ್‌ಗೆ ಹೋಗುತ್ತೇವೆಂದ ಕಾಂಗ್ರೆಸ್‌

Date:

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರವನ್ನು ಬಿಜೆಪಿಯ ಒತ್ತಡದಿಂದ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಬಿಜೆಪಿ ಸೋಲುವ ಭಯದಲ್ಲಿ ಇಂತಹ ಕೃತ್ಯಕ್ಕೆ ಇಳಿದಿದೆ. ನಾವು ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುತ್ತೇವೆ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿಸಿನ್ಹ್ ಗೋಹಿಲ್ ಹೇಳಿದ್ದಾರೆ.

ರಾಜಕೀಯ ಒತ್ತಡದಿಂದ ನಾಮಪತ್ರ ತಿರಸ್ಕರಿಸಿರುವ ಬೆಳವಣಿಗೆಯನ್ನು ಗೋಹಿಲ್ ಅವರು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಕರೆದಿದ್ದಾರೆ. ಸೂರತ್‌ನಲ್ಲಿ ಬದಲಿ ಅಭ್ಯರ್ಥಿಯಾಗಿ ಸುರೇಶ್ ಪಡಸಾಲ ಅವರ ನಾಮಪತ್ರವೂ ಅಸಿಂಧುಗೊಂಡಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ ಚುನಾವಣಾ ಕಣದಿಂದ ಹೊರಬಿದ್ದಂತಾಗಿದೆ.

ನಾಮಪತ್ರವನ್ನು ತಿರಸ್ಕರಿಸಿರುವ ಚುನಾವಣಾಧಿಕಾರಿ ಸೌರಭ್ ಪಾರ್ಧಿ ಅವರು ತಮ್ಮ ಆದೇಶದಲ್ಲಿ, “ಕುಂಭಣಿ ಮತ್ತು ಪಡಸಾಲ ಅವರು ಸಲ್ಲಿಸಿದ ನಾಲ್ಕು ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಅವರ ಸಹಿಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಆ ಸಹಿಗಳು ನೈಜ ಸಹಿಗಳೆಂದು ತೋರುತ್ತಿಲ್ಲ” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈ ಬಾರಿ ಚುನಾವಣೆಯಲ್ಲಿ ಪರಿಸ್ಥಿತಿ ತಮ್ಮ ಗೆಲುವಿಗೆ ಅನುಕೂಲಕರವಾಗಿಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿ ಕಂಗಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರವನ್ನು ರದ್ದು ಮಾಡಲು ಸಂಚು ರೂಪಿಸಿದೆ. ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನು ಅನುಭವಿಸುವುದು ಖಚಿತವಾದ್ದರಿಂದ, ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಲಾಗಿದೆ” ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿಸಿನ್ಹ್ ಗೋಹಿಲ್ ಆರೋಪಿಸಿದ್ದಾರೆ.

“ನಾಮಪತ್ರದಲ್ಲಿ ಸಹಿಗಳು ವ್ಯತ್ಯಾಸ ಬಂದ ಮಾತ್ರಕ್ಕೆ, ಅವುಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಅಲ್ಲದೆ, ಕುಂಭಣಿ ಅವರಿಗೆ ಬೆದರಿಕೆಗಳೂ ಬಂದಿವೆ” ಎಂದು ಅವರು ದೂರಿದ್ದಾರೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಸೂರತ್-ಪೂರ್ವ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿ ಕೂಡ ನಾಮಪತ್ರದಲ್ಲಿ ಸಹಿ ಮಾಡಿರಲಿಲ್ಲವೆಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಆದರೂ, ಅವರ ನಾಮಪತ್ರವನ್ನು ತಿರಸ್ಕರಿಸಲು ಚುನಾವಣಾಧಿಕಾರಿ ನಿರಾಕರಿಸಿದ್ದರು. ಆ ಸಮಯದಲ್ಲಿ, ಎಎಪಿ ಅಭ್ಯರ್ಥಿಯು ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಆಗ ನಾಮಪತ್ರ ತಿರಸ್ಕರಿಸಿರಲಿಲ್ಲ. ಆದರೆ, ಈಗ ಅದೇ ಸಹಿಯ ನೆಪವೊಡ್ಡಿ, ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ” ಎಂದು ಆರೋಪಿಸಿದ್ದಾರೆ.

“ಈ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು. ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ. ಈ ಆದೇಶದ ವಿರುದ್ಧ ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ಗೂ ಹೋಗುತ್ತೇವೆ” ಎಂದು ಗೋಹಿಲ್ ಹೇಳಿದ್ದಾರೆ.

ಸೂರತ್‌ನ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರ ಚುನಾವಣಾ ಏಜೆಂಟ್ ದಿನೇಶ್ ಜೋಧಾನಿ ಅವರು ಕುಂಭಣಿ ಅವರ ನಾಮಪತ್ರದ ವಿರುದ್ಧ ಶನಿವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಚುನಾವಣಾಧಿಕಾರಿ ಭಾನುವಾರ ಬೆಳಿಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಹಾಜರಾಗಲು ಸಮಯ ನೀಡಿದ್ದರು. ಬಳಿಕ, ಅವರ ನಾಮಪತ್ರವನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.

‘ಬಿಜೆಪಿ ಅಭ್ಯರ್ಥಿಯನ್ನು ವಿಜಯಿ’ ಎಂದು ಘೋಷಿಸಿದ ಚುನಾವಣಾಧಿಕಾರಿ

ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕಾರಗೊಂಡರೆ, ಉಳಿದಿದ್ದ ಎಂಟು ಮಂದಿ ಅಭ್ಯರ್ಥಿಗಳು ಕೂಡ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರನ್ನು ಚುನಾವಣಾಧಿಕಾರಿ ವಿಜಯಿ ಎಂದು ಘೋಷಿಸಿದ್ದಾರೆ.

ಅಲ್ಲದೇ, ಪ್ರಮಾಣ ಪತ್ರವನ್ನೂ ಕೂಡ ನೀಡಿದ್ದಾರೆ. ಮುಂದಿನ ಮೇ 7ರಂದು ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುವುದಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೆಮಲ್ ಚಂಡಮಾರುತ| ಬಂಗಾಳದಲ್ಲಿ ಭೂಕುಸಿತ ಸಾಧ್ಯತೆ; ವಿಮಾನ, ರೈಲುಗಳು ರದ್ದು

ರೆಮಲ್ ಚಂಡಮಾರುತ ಇಂದು (ಮೇ 26) ರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದ್ದು,...

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ: ಮುಖ್ಯ ಚುನಾವಣಾ ಆಯುಕ್ತ

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್...

ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ

ಉತ್ತರ ಪ್ರದೇಶ ಶಹಜಹಾನ್‌ಪುರದಲ್ಲಿ ಬಸ್‌ ಹಾಗೂ ಟ್ರಕ್ ನಡುವೆ  ಸಂಭವಿಸಿದ ಭೀಕರ...

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...