2018ರಲ್ಲಿ ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾದೆ. ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡಿದರೂ ನನಗೆ ಯಾವ ಗೌರವವು ಸಿಕ್ಕಿಲ್ಲ. ನಾನು ತತ್ವ, ಸಿದ್ಧಾಂತ, ಸಾಮಾಜಿಕ ನ್ಯಾಯದ ಬುನಾದಿಯಲ್ಲಿ ಬೆಳೆದು ಬಂದವನ್ನು. ಆದರೆ, ಬಿಜೆಪಿ ಪಕ್ಷದ ಕಾನೂನುಗಳಿಂದ ಬಿಜೆಪಿಯಲ್ಲಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗಿತ್ತು ಸೆಕ್ಯುಲರ್ ಪಾರ್ಟಿ, ದೇಶಕ್ಕೆ ಸ್ವಾತಂತ್ರ ಕೊಡಿಸಿದ ಪಾರ್ಟಿ ಕಾಂಗ್ರೆಸ್‌ಗೆ ಮರಳಿ ಸೇರಿಕೊಂಡಿರುವುದು ನನ್ನ ಮನೆಗೆ, ಮರಳಿ ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡಿದ್ದು ತುಂಬಾ ಖುಷಿಯಾಗಿದೆ ಎಂದು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮೊದಲ ಬಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಪ್ರಯುಕ್ತ, ಕಚೇರಿಯಲ್ಲಿ ಪತ್ರಿಕಾಗೋಷ್ಠಿನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಿಂದ ನನಗೆ ಯಾವ ನಿರೀಕ್ಷೆ ಇಲ್ಲ. ಎಲ್ಲರಂತೆ ನಾನು ಈ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ಬಂದಿರುವೆ. ಉಮೇಶ್ ಜಾದವ್‌ರನ್ನ ಖಂಡಿತ ಸೋಲಿಸುತ್ತೇವೆ ಅದರಲ್ಲಿ ಎರಡು ಮಾತಿಲ್ಲ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಬಿಜೆಪಿ ಒಳ ಜಗ, ಮಾಡಿರುವ ನೂನ್ಯತೆಗಳಿಂದ, ಅವರ ವಿಫಲತೆಯಿಂದ ಕಾಂಗ್ರೆಸ್ ಪಕ್ಷ 20-25 ಸ್ಥಳಗಳಲ್ಲಿ ಗೆಲ್ಲುವುದು ಖಚಿತ ಎಂದರು.
ಈ ವೇಳೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ನಾನು ಮತ್ತೆ ಮಾಲೀಕಯ್ಯ ಗುತ್ತೇದಾರ ರಾಜಕೀಯವಾಗಿ ಎದುರಾಳಿಗಳಾಗಿದ್ದೇವು. ಆದರೆ, ನಮ್ಮಲ್ಲಿ ವಯಕ್ತಿಕ ಭಿನ್ನಾಭಿಪ್ರಾಯಗಳು ಇರಲಿಲ್ಲ ಪರಸ್ಪರ ಸಹೋದರರಂತೆ ಇದ್ದೇವು. ಮುಂದೆ ಕೂಡ ಹಾಗೇ ಇರುತ್ತೇವೆ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಮತ್ತೆ ಮರಳಿ ಮನೆಗೆ ಬಂದಿದ್ದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಅವರು ನಮ್ಮ ಪಕ್ಷಕ್ಕೆ ಶಕ್ತಿ ತುಂಬಬೇಕು. ಅವರಿಗೆ ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದರು.
ಮಾಲೀಕಯ್ಯ ಗುತ್ತೇದಾರ ಅವರು ಕಾಂಗ್ರೆಸ್ ಸೇರಿದು ನಮಗೆ ಬಲಬಂದಂತಾಗಿದೆ. ಕಲಬುರಗಿಯಲ್ಲಿ ದೊಡ್ಡ ಶಕ್ತಿ ಜೊತೆಗೂಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೀಶ್ ಗುತ್ತೇದಾರ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಮಹಾಂತೇಶ್ ಕವಲಾಗಿ, ರೇಣುಕಾ ಸಿಂಧೆ, ಮಹಾಂತಪ್ಪ ಸಂಗಾವಿ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.