- ವಿವಿಧ ಗ್ರಾಮಗಳ ಕಾರ್ಯಕರ್ತರ ಸಭೆ
- ಎಸ್‌ಯುಸಿಐ ಗೆಲ್ಲಿಸುವಂತೆ ಮನವಿ
ಧಾರವಾಡ ಗ್ರಾಮೀಣ ಕ್ಷೇತ್ರದ ಎಸ್‌ಯುಸಿಐ(ಸಿ) ಅಭ್ಯರ್ಥಿ ಮಧುಲತಾ ಗೌಡರ್ ಪರವಾಗಿ ಕ್ಷೇತ್ರದ ಗರಗ, ಮುಗಳಿ, ತೇಗೂರು, ಗುಳೇದಕೊಪ್ಪ, ಗೊಂಗಡೆಕೊಪ್ಪ ಹಾಗೂ ವಿವಿಧ ಗ್ರಾಮಗಳಲ್ಲಿ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆ ನಡೆದಿದೆ. ಮಧುಲತಾ ಅವರಿಗೆ ಮತ ನೀಡುವಂತೆ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಧಾರವಾಡ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣನವರ ಮಾತನಾಡಿ, “ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ ಮಧುಲತಾ ಗೌಡರ್ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯ ಕಣದಲ್ಲಿದ್ದಾರೆ. ಇದುವರೆಗೂ ಆಳಿದ ಎಲ್ಲ ಪಕ್ಷಗಳು ಬಂಡವಾಳಶಾಹಿ ಪರವಾದ ಪಕ್ಷಗಳಾಗಿವೆ. ಎಸ್‌ಯುಸಿಐ ದೇಶದ ಬಡ ರೈತ ಕೃಷಿ ಕಾರ್ಮಿಕರ ಪಕ್ಷವಾಗಿದ್ದು, ಅವರ ಪರವಾದ ಹಲವಾರು ಹೋರಾಟಗಳನ್ನು ಕಟ್ಟುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? : ಕಲಬುರುಗಿ | ಜೆಡಿಎಸ್‌ಗೆ ಒಂದು ಬಾರಿ ಅವಕಾಶ ಕೊಡಿ, ‘ಸೇಡಂ’ಅನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ: ಬಾಲರಾಜ್ ಗುತ್ತೇದಾರ
“ರೈತ ಕೃಷಿ-ಕಾರ್ಮಿಕರ ಪರವಾದ ಧ್ವನಿಯನ್ನು ವಿಧಾನಸಭೆಯಲ್ಲಿ ಮೊಳಗಿಸಲು, ಕಾಮ್ರೇಡ ಮಧುಲತಾ ಗೌಡರ್ ಅವರನ್ನು ಗೆಲ್ಲಿಸುವ ಪಣ ತೊಡಬೇಕು” ಎಂದು ಕರೆ ನೀಡಿದರು.
ಸಭೆಗೆ ಆಗಮಿಸಿದ ಎಲ್ಲ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಚುನಾವಣಾ ಪ್ರಚಾರವನ್ನು ಕೈಗೊಳ್ಳುವುದಾಗಿ ದೃಢ ನಿರ್ಧಾರ ಕೈಗೊಂಡರು. ಈ ವೇಳೆ ಜಿಲ್ಲಾ ಸಮಿತಿ ಸದಸ್ಯ ದೀಪಾ ಧಾರವಾಡ, ಸಮಿತಿ ಸದಸ್ಯ ಹನುಮೇಶ ಹುಡೇದ, ಪಕ್ಷದ ಬೆಂಬಲಿಗರು ಬಾಗವಹಿಸಿದ್ದರು.