ಬೀದರ್‌ ಲೋಕಸಭಾ | ಮುಗಿದ ನಾಮಪತ್ರ ಭರಾಟೆ, ಶುರುವಾಗಿ ಮತಬೇಟೆ

Date:

Advertisements

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಮುಕ್ತಾಯವಾಗಿದೆ. ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಸಿಗುತ್ತದೆ. ಯಾರು ಯಾವಾಗ ನಾಮಪತ್ರ ಸಲ್ಲಿಸುತ್ತಾರೆ. ಯಾವ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆಯುತ್ತಾರೆ ಎಂಬ ಎಲ್ಲ ಲೆಕ್ಕಚಾರಗಳು ಈಗ ಮುಗಿದ ಅಧ್ಯಾಯ. ಈಗ ಏನಿದ್ದರೂ ಮೇ 7 ರಂದು ನಡೆಯಲಿರುವ ಮತದಾನದತ್ತ ಎಲ್ಲ ಚಿತ್ತ ನೆಟ್ಟಿದೆ.

ಎರಡು ಅವಧಿಗೆ ಗೆದ್ದು ಕೇಂದ್ರದಲ್ಲಿ ಹಾಲಿ ಸಚಿವರೂ ಆದ ಭಗವಂತ ಖೂಬಾ ಅವರಿಗೆ ಸ್ವಪಕ್ಷೀಯ ಶಾಸಕರು, ಮುಖಂಡರೇ ವಿರೋಧಿಸಿ ಟಿಕೆಟ್‌ ಕೈತಪ್ಪಿಸಲು ಹರಸಾಹಸಪಟ್ಟಿದ್ದರು. ಆದರೆ ಹೈಕಮಾಂಡ್‌ ಯಾರ ಮಾತಿಗೂ ಕ್ಯಾರೇ ಎನ್ನದೇ ಮತ್ತೆ ಬಿಜೆಪಿ ಟಿಕೆಟ್‌ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಕಣಕ್ಕಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ ಅವರಿಗೆ ರಾಜ್ಯದ ಅತಿ ಕಿರಿಯ ವಯಸ್ಸಿನ ಕಾಂಗ್ರೆಸ್ ಅಭ್ಯರ್ಥಿಯಾಗಿ‌ ಘೋಷಿಸಿ ಮಣೆ ಹಾಕಿದೆ.

ಬೀದರ್‌ ಲೋಕಸಭಾ‌ ಕ್ಷೇತ್ರದಲ್ಲಿ ನಡೆದ ಒಟ್ಟು ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಬಿಟ್ಟರೆ ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲಿಸಿದ ಉದಾಹರಣೆಯಿಲ್ಲ. ಈ ಬಾರಿಯೂ 10 ಜನ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಇತರೆ ಪಕ್ಷಗಳ ಒಟ್ಟು 18 ಅಂತಿಮ ಅಖಾಡದಲ್ಲಿದ್ದರೂ ಅಂತಿಮವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಎನ್ನುವುದಂತೂ ಪಕ್ಕಾ ಆಗಿದೆ. ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳು ಯಾರಿಗೆ ಕನ್ನ ಹಾಕುತ್ತಾರೆ. ಇದರಿಂದ ಯಾವ ಅಭ್ಯರ್ಥಿಯ ಮತ ಗಳಿಕೆಗೆ ಹಿನ್ನಡೆಯಾಗಬಹುದು ಎಂಬುದು ಸದ್ಯಕ್ಕೆ ಕುತೂಹಲ.

Advertisements

ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಒಟ್ಟು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಏ.20 ರಂದು ನಾಮಪತ್ರಗಳ ಪರಿಶೀಲನಾ ದಿನವಾಗಿತ್ತು. ಒಟ್ಟು 34 ಅಭ್ಯರ್ಥಿಗಳಲ್ಲಿ 20 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿದ್ದು 14 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಏ.22 ರಂದು ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಬಳಿಕ ಈಗ 18 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ರಾಷ್ಟ್ರೀಯ ಅಭಿವೃದ್ಧಿ ಪಕ್ಷದ ಬಾಬು ಪಾಷಾ  ಹಾಗೂ ಸ್ವತಂತ್ರ ಅಭ್ಯರ್ಥಿ ಅಬ್ದುಲ ರಜಾಕ್‌ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಹಿಂಪಡೆದ ಹಿನ್ನಲೆ ಈ ಬಾರಿ ಅಂತಿಮವಾಗಿ 18 ಜನ ಸ್ಪರ್ಧಾ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 2014 ಹಾಗೂ 2019ರಲ್ಲಿ ನಡೆದ ಚುನಾವಣಾ ಕಣದಲ್ಲಿ ಕ್ರಮವಾಗಿ ಒಟ್ಟು 24 ಹಾಗೂ 22 ಜನ ಅಭ್ಯರ್ಥಿಗಳು ಸ್ಫರ್ಧಿಸಿದ್ದರು.

ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ನೋಂದಾಯಿತ ಪಕ್ಷದ 8 ಜನ ಅಭ್ಯರ್ಥಿಗಳಾದ ಪುಟರಾಜ್ ಹಣಮಂತ (ಬಿಎಸ್‌ಪಿ) ಭಗವಂತ ಖೂಬಾ (ಬಿಜೆಪಿ), ಸಾಗರ ಈಶ್ವರ ಖಂಡ್ರೆ (ಕಾಂಗ್ರೆಸ್), ಅಂಬಾದಾಸ್ ಸೋಪಾನವರ ಹುಲಸೂರ (ಬಹುಜನ ಭಾರತ ಪಾರ್ಟಿ), ಮಹೇಶ ಗೋರನಾಳಕರ್ (ಆರ್‌ಪಿಐ(ಎ), ಮಹಮ್ಮದ್ ಶಫೀಕ್ ಆರ್ (ಆಲ್ ಇಂಡಿಯಾ ಉಲಮ ಕಾಂಗ್ರೆಸ್), ರಮೇಶ ಜೆ. ಚವ್ಹಾಣ, (ಕೆಆರ್‌ಎಸ್) ರಾಮಚಂದ್ರ ನಾರಾಯಣ (ಕಚೇವು ಕ್ರಾಂತಿಕಾರಿ ಜೈ ಹಿಂದ್ ಸೇನಾ)

10 ಜನ ಪಕ್ಷೇತರ ಅಭ್ಯರ್ಥಿಗಳು :

ಗೋಪಾಲ ಎಂಪಿ ಗಾರಂಪಳ್ಳಿ, ಜೈರಾಮ ಕಾಶಪ್ಪ ಬುಕ್ಕ ವಕೀಲರು, ಡಾ.ಮೋರೆ ದೀನಕರ್, ದಿಲಿಪ್ ಕಾಡವಾದ, ಬಲಭೀಮ ಉಣ್ಣೆ, ರಾಮವಿಲಾಸ ರಾಮುಲಾಲಜಿ ನಾವಂದರ, ರಿಯಾಜ ಅಹ್ಮದ, ರೋಫ ಅಬ್ದುಲ ಗನಿ, ವಸೀಮಮೊದ್ದಿನ್, ಶಿವರಾಜ ಅಡಿವೆಪ್ಪ ಸತವಾರ ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಲೋಕ-ಕಣದಲ್ಲಿಇಲ್ಲ ಒಬ್ಬರೂ ಮಹಿಳಾ ಅಭ್ಯರ್ಥಿ:

ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ನೀಡುವುದೇ ಅಪರೂಪ, ಅದರಲ್ಲೂ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಯಾವುದೇ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿದ ಉದಾಹರಣೆ ಇಲ್ಲ. ಆದರೆ, ಕ್ಷೇತ್ರದಲ್ಲಿ ಮಹಿಳೆಯರು ಪಕ್ಷೇತರವಾಗಿ ಸ್ಪರ್ಧಿಸಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ.

1989ರಲ್ಲಿ ನಡೆದ ಲೋಕಸಭಾ ಚುನಾವಣಾ ಅಖಾಡದಲ್ಲಿ ಮೊದ ಬಾರಿಗೆ ಮಹಿಳೆಯರು ಸ್ಪರ್ಧಿಸಿ ರಾಜಕೀಯ ಭವಿಷ್ಯ ಪರೀಕ್ಷಿಸಿದರು. ಅದಾದ ಬಳಿಕವೂ 1991, 1996 ಹಾಗೂ 2014 ರಲ್ಲಿ ಮಹಿಳೆಯರು ಪಕ್ಷೇತರವಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಚುನಾವಣೆಯಂತೆ 2024ರ ಲೋಕ ಅಖಾಡದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿ ಇಲ್ಲದ ಚುನಾವಣೆ ನಡೆಯಲು ರಣಕಣ ಸಿದ್ಧವಾಗಿದೆ.

ಬಿಜೆಪಿ-ಕಾಂಗ್ರೆಸ್‌ ಎರಡೂ ಪಕ್ಷದ ಅಭ್ಯರ್ಥಿಗಳು ಮೊದಲು ಸಾಂಕೇತಿಕವಾಗಿ ಬಳಿಕ ತಮ್ಮ ಪಕ್ಷದ ರಾಜ್ಯ ಮಟ್ಟದ ನಾಯಕರನ್ನು ಕರೆಯಿಸಿ ಬೃಹತ್‌ ಶಕ್ತಿ ಪ್ರದರ್ಶನ ಮಾಡಿ ಮತ್ತೊಂದು ಸಲ ಉಮೇದುವಾರಿಕೆ ಸಲ್ಲಿಸಿದರು. ಮತದಾನಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು, ಕಳೆದ ಬಾರಿಗಿಂತ ಈ ಬಾರಿ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಎರಡೂ ಪಕ್ಷಗಳ ನಾಯಕರ ಮಾತಿನ ಭರಾಟೆ, ಟೀಕೆ, ಸವಾಲು ಜೋರಾಗಿವೆ.

ಇಷ್ಟು ದಿನಗಳ ಕಾಲ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್‌ ಪಡೆಯುವಿಕೆ ಈ ಪ್ರಮುಖ ಪ್ರಕ್ರಿಯೆಗಳು ಜರುಗಿದವು. ಕೆಂಡದಂತಹ ಬಿಸಿಲಿನಲ್ಲಿಯೂ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಬಿರುಸಿನ ಪ್ರಚಾರ ನಡೆಸಿದ ನೇರ ಸ್ಫರ್ಧೆಯಲ್ಲಿರುವ ಎರಡು ಪಕ್ಷಗಳ ನಾಯಕರಿಗೆ ಇನ್ನುಳಿದ ಮುಂದಿನ ದಿನ ಕಾಲ ಪ್ರಚಾರದ ರಂಗು ಮತ್ತಷ್ಟು ಹೆಚ್ಚಾಗುವಂತೆ ಮಾಡಲು ರಾಜ್ಯ ಮಟ್ಟದ ನಾಯಕರಿಂದ ಪ್ರಚಾರ ನಡೆಸಲು ಕಸರತ್ತು ನಡೆಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಎದೆಯ ಮೇಲೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷದ ನಾಯಕರ ಮೂಲಕ ಮತದಾರರ ಮನ ಗೆಲ್ಲಲು ಎರಡೂ ಪಕ್ಷಗಳು ಕಸರತ್ತು ಮುಂದುವರೆಸಿವೆ. ನಾಳೆ ಬೀದರ್‌ ನಗರದಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ʼಪ್ರಜಾಧ್ವನಿʼ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಭಾಗಿಯಾಗಿ ಕಾಂಗ್ರೆಸ್ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ಸಿಗೆ ಸವಾಲು ಒಡ್ಡಲು ಬಿಜೆಪಿ ಕೂಡ ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷದ ನಾಯಕರನ್ನು ಕರೆಯಿಸುವ ಯೋಜನೆ ರೂಪಿಸುತ್ತದೆ. ಬಿಸಿಲಿನ ಕಾವಿನೊಂದಿದೆ ದಿನದಿಂದ ದಿನಕ್ಕೆ ಚುನಾವಣಾ ಅಖಾಡ ರಂಗೇರುವುದು ಅಂತೂ ನಿಶ್ಚಿತ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

Download Eedina App Android / iOS

X