ಈ ದಿನ ಸಮೀಕ್ಷೆ | ಲಕ್ಷ ರೂಪಾಯಿಯ ‘ಮಹಾಲಕ್ಷ್ಮೀ’ ಗ್ಯಾರಂಟಿಯ ಮುಳುಗಿಸಲಾಗಿದೆ ಮುಸ್ಲಿಮ್ ದ್ವೇಷದಲ್ಲಿ!

Date:

Advertisements

ಮನೆಯ ಯಜಮಾನಿಗೆ ವರ್ಷಕ್ಕೆ ಒಂದು ಲಕ್ಷ ಗ್ಯಾರಂಟಿ ಸೀಮಿತವಾಗಿಯಾದರೂ ಮಹಿಳೆಯರನ್ನು ಸಬಲೆಯರನ್ನಾಗಿಸುವ ಇಂತಹ ಒಳ್ಳೆಯ ಯೋಜನೆಯನ್ನು ಚರ್ಚೆಗೇ ಬಾರದಂತೆ ಮೋದಿಯವರ ಮುಸ್ಲಿಮ್ ದ್ವೇಷದಲ್ಲಿ ಮುಳುಗಿಸಲಾಗಿದೆ.

ಕರ್ನಾಟದಲ್ಲಿ ಮನೆಯ ಯಜಮಾನಿತಿಗೆ ತಿಂಗಳಿಗೆ 2000 ರೂ ಕೊಡುವ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಂತೆಯೇ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಲಕ್ಷ ರೂ. ಕೊಡುವ ‘ಮಹಾಲಕ್ಷ್ಮೀ’ ಗ್ಯಾರಂಟಿಯನ್ನು ಕಾಂಗ್ರೆಸ್‌ ಘೋಷಿಸಿದೆ. ವಿಪರ್ಯಾಸ ಎಂದರೆ ಈ ‘ಮಹಾಲಕ್ಷ್ಮಿ’ ಯೋಜನೆ ಕುರಿತು ಕರ್ನಾಟಕದ ಶೇ.48.59ರಷ್ಟು ಮತದಾರರಿಗೆ ಗೊತ್ತೇ ಇಲ್ಲ!

ದೇಶದ ಮಹಿಳೆಯರಿಗೆ ದೊಡ್ಡ ಗ್ಯಾರಂಟಿಯಂತಿರುವ ಮನೆಯ ಮುಖ್ಯಸ್ಥೆಗೆ ವಾರ್ಷಿಕವಾಗಿ 1 ಲಕ್ಷ ನೀಡುವ ‘ಮಹಾಲಕ್ಷ್ಮಿ’ ಯೋಜನೆಯು ಕರ್ನಾಟಕದಲ್ಲಿ ಗ್ಯಾರಂಟಿಗಳ ಮೇಲೆ ನಡೆಯುತ್ತಿರುವ ಪ್ರತಿ ಪಕ್ಷಗಳ ದಾಳಿ ನಡುವೆ ಗೌಣವಾದಂತೆ ಕಾಣುತ್ತಿದೆ. ಈ ಎಲ್ಲ ಅಪಪ್ರಚಾರದ ನಡುವೆ ‘ಮಹಾಲಕ್ಷ್ಮಿ’ ಯೋಜನೆ ಬಗ್ಗೆಯೇ ಕರ್ನಾಟಕದಲ್ಲಿ ಶೇ.51.41 ರಷ್ಟು ಮತದಾರರಿಗೆ ಮಾತ್ರ ತಿಳಿದಿದೆ ಎಂಬ ಆಶ್ಚರ್ಯಕರ ಸಂಗತಿ ಈ ದಿನ.ಕಾಮ್‌ ಸಮೀಕ್ಷೆಯಿಂದ ಬಹಿರಂಗವಾಗಿದೆ.

Advertisements

‘ನಾರಿ ನ್ಯಾಯ’ದ ಅಡಿಯಲ್ಲಿ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದರಲ್ಲಿ ‘ಮಹಾಲಕ್ಷ್ಮಿ’ ಗ್ಯಾರಂಟಿ ಯೋಜನೆ ಪ್ರಮುಖವಾದುದು. ಈ ಯೋಜನೆಯಡಿ ದೇಶದ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡುವ ಸ್ಕೀಮ್ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ನಿರುದ್ಯೋಗ ನಿರಾಶೆಗಳೇ ತುಂಬಿಕೊಂಡಿರುವ ಈ ಹೊತ್ತಿನಲ್ಲಿ 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದೇಶ ಸಾಕ್ಷಿಯಾಗುತ್ತಿದೆ.

2024ರ ಲೋಕಸಭಾ ಹಣಾಹಣಿಯ ಕಾವು ದೇಶದಲ್ಲಿ ರಂಗೇರಿದ್ದು, ಮೊದಲ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ದೇಶದಲ್ಲಿ ಇನ್ನೂ ಆರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏ.26 ರಂದು ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ.

ಮಹಾಲಕ್ಷ್ಮೀ

ಪ್ರಧಾನಿ ಮೋದಿ ಅವರ ಆಡಳಿತದಿಂದ ಬಸವಳಿದ ಜನರ ಬದುಕಿಗೆ ಆಧಾರ ಕೊಡಬಲ್ಲ ಗ್ಯಾರಂಟಿಗಳನ್ನು ದೇಶದಲ್ಲಿ ಕಾಂಗ್ರೆಸ್‌ ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ದೇಶ ಹಿಂದೆಂದೂ ಕಂಡರಿಯದ ದೊಡ್ಡ ಗ್ಯಾರಂಟಿಗಳನ್ನೇ ಮಹಿಳೆಯರಿಗೆ ಘೋಷಿಸಿದೆ.

ಕಾಂಗ್ರೆಸ್‌ ಗ್ಯಾರಂಟಿಗಳ ಶಕ್ತಿ ಏನೆಂಬುದು ಈಗಾಗಲೇ ಕರ್ನಾಟಕದ ಮೂಲಕ ದೇಶಕ್ಕೆ ತಿಳಿದ ಸಂಗತಿ. ಐದು ಗ್ಯಾರಂಟಿಗಳಾದ ಗೃಹ ಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಹಾಗೂ ಅನ್ನಭಾಗ್ಯ ಗ್ಯಾರಂಟಿ ಘೋಷಣೆಗಳ ಬಲದಿಂದಲೇ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿದೆ. ಒಂದೇ ವರ್ಷದ ಅವಧಿಯಲ್ಲಿ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಂಡಿವೆ.

ಇತ್ತೀಚೆಗೆ ತೆಲಂಗಾಣದಲ್ಲೂ ಕೂಡ ಗ್ಯಾರಂಟಿಗಳು ಕಾಂಗ್ರೆಸ್‌ಅನ್ನು ಅಧಿಕಾರ ಗದ್ದುಗೆಯಲ್ಲಿ ಕುಳ್ಳಿರಿಸಿದೆ. ಈ ಬಾರಿಯ ಲೋಕಸಭಾ ಚುನಾವಣಾ ಸಮರದಲ್ಲಿ ಬಿಜೆಪಿಯನ್ನು ಸೋಲಿಸಲು ದೇಶದಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಈ ಗ್ಯಾರಂಟಿಗಳು ಹಸ್ತದ ಪಕ್ಷಕ್ಕೆ ಹೇಗೆ ವರವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ನಡೆಯುವ ಎಲ್ಲ ಹೊಸ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ.50ರ ಮೀಸಲಾತಿ. ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ಗೌರವಧನ ದುಪ್ಪಟ್ಟು ಹೆಚ್ಚಳ, ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ತಿಳಿಸಿಕೊಡಲು ಪ್ರತಿ ಪಂಚಾಯತ್‌ ಮಟ್ಟದಲ್ಲಿ ಕಾನೂನು ಸಹಾಯಕರ ನೇಮಕ, ಉದ್ಯೋಗಸ್ಥ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌ ನಿರ್ಮಾಣ ಮತ್ತು ಇಂತಹ ಹಾಸ್ಟೆಲ್‌ಗಳ ಸಂಖ್ಯೆ ದ್ವಿಗುಣಗೊಳಿಸುವಿಕೆ ಮಹಿಳೆಯರಿಗೆ ಕಾಂಗ್ರೆಸ್ಸಿನ ಇತರೆ ಗ್ಯಾರಂಟಿಗಳು.

ಮೋದಿ ಕೋಮುವಾದಿ ಪ್ರಚಾರದ ಪರದೆಯ ಹರಿದು ಇಂತಹ ಪ್ರಮುಖ ಗ್ಯಾರಂಟಿಗಳನ್ನು ಮತದಾರರಿಗೆ ಮುಟ್ಟಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿರುವ ಅನುಮಾನ ಮೂಡಿದೆ. ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಸದಾ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಹಂಗಿಸುವುದುಂಟು. ಇತ್ತೀಚೆಗೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರಂತೂ ಕಾಂಗ್ರೆಸ್‌ ಗ್ಯಾರಂಟಿಗಳಿಂದ ಮಹಿಳೆಯರು ದಾರಿತಪ್ಪುತ್ತಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು.

ಕಾಂಗ್ರೆಸ್‌ ಸರ್ಕಾರ ಪತನವಾಗಿ ಗ್ಯಾರಂಟಿಗಳು ನಿಲ್ಲಲಿ ಎಂದು ಬಿಜೆಪಿ ನಾಯಕರು ಬಯಸಿದ್ದಾರೆ. ಆಪರೇಷನ್‌ ಕಮಲ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಗ್ಯಾರಂಟಿಗಳಿಗೆ ಕೊಳ್ಳಿ ಇಡುವುದು ಬಿಜೆಪಿಯ ಉದ್ದೇಶ ಎಂಬ ಅಭಿಪ್ರಾಯವಿದೆ. ಬಿಜೆಪಿ ನಾಯಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಸೊಪ್ಪು ಹಾಕದೇ ಗ್ಯಾರಂಟಿ ಯೋಜನೆಗಳು ಐದು ವರ್ಷ ಮುಂದುವರೆಯಲಿವೆ ಎಂದು ಭರಸವೆ ನೀಡಿದ್ದಾರೆ.

ಗೃಹಲಕ್ಷ್ಮಿ

2023ರ ವಿಧಾನಸಭಾ ಚುನಾವಣೆಯಲ್ಲಿ ಕರಾರುವಕ್ಕಾದ ಸಮೀಕ್ಷೆಯನ್ನು ರಾಜ್ಯದ ಮುಂದಿಟ್ಟು ಯಶಸ್ವಿಯಾಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರ ನಾಡಿಮಿಡಿತ ಹೇಗಿದೆ ಎಂಬುದರ ಅಂತಿಮ ಸಮೀಕ್ಷೆಯನ್ನು ಈಗಾಗಲೇ ಈ ದಿನ.ಕಾಮ್‌ ರಾಜ್ಯದ ಮುಂದಿಟ್ಟಿದೆ.

ಈ ಸಮೀಕ್ಷೆಯ ಭಾಗವಾಗಿ ಈ ದಿನ.ಕಾಮ್‌ ಗ್ಯಾರಂಟಿ ಕುರಿತು ಎರಡು ಪ್ರಶ್ನೆಗಳನ್ನು ರಾಜ್ಯದ ಮತದಾರರ ಮುಂದಿಟ್ಟಿತ್ತು. ಅದರಲ್ಲಿ ಮೊದಲನಯದಾಗಿ ‘ಕರ್ನಾಟಕ ಸರ್ಕಾರವು 2023 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಐದು ಖಾತರಿ ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಈ ಖಾತರಿ ಯೋಜನೆಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತೀರಾ?” ಎಂದು ಕೇಳಿದಾಗ, ಶೇ.52.28ರಷ್ಟು ಮತದಾರರು ಸಹಮತ ವ್ಯಕ್ತಪಡಿಸಿದ್ದಾರೆ. ಶೇ.35.26ರಷ್ಟು ಮತದಾರರು ಕಾಂಗ್ರೆಸ್‌ ಗ್ಯಾರಂಟಿಗಳನ್ನು ಬೆಂಬಲಿಸಿ ಮತಹಾಕುವುದಿಲ್ಲ ಎಂದಿದ್ದಾರೆ. ಇನ್ನು, 12.46ರಷ್ಟು ಮತದಾರರು ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸಿಲ್ಲ.

ವಿದ್ಯಾಭ್ಯಾಸ ಮಾಡದೇ ಮತದಾರರ ಪೈಕಿ ಶೇ. 60.29 ರಷ್ಟು ಮತದಾರರು ಕಾಂಗ್ರೆಸ್‌ ಗ್ಯಾರಂಟಿ ಬೆಂಬಲಿಸಿ ಮತಹಾಕುವುದಾಗಿ ಹೇಳಿದ್ದರೆ, ಶೇ.26.29ರಷ್ಟು ಮತದಾರರು ಇಲ್ಲ ಎಂದ್ದಾರೆ. ಶೇ.13.42ರಷ್ಟು ಅನಕ್ಷರಸ್ಥ ಮತದಾರರು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಮತದಾರರ ಪೈಕಿ ಶೇ.40.66ರಷ್ಟು ಮತದಾರರು ಕಾಂಗ್ರೆಸ್‌ ಗ್ಯಾರಂಟಿ ನೋಡಿ ಮತ ಹಾಕುತ್ತೇವೆ ಎಂದಿದ್ದರೆ, ಶೇ.47.21 ರಷ್ಟು ಮತದಾರರು ಮತಹಾಕಲು ಆಸಕ್ತಿ ತೋರಿಲ್ಲ. ಶೇ.12.13 ರಷ್ಟು ಮತದಾರರು ಈ ಬಗ್ಗೆ ತುಟಿಬಿಚ್ಚಿಲ್ಲ.

ವಯಸ್ಸಿನ ಆಧಾರದ ಮೇಲೆ ನೋಡುವುದಾದರೆ 18-25 ವರ್ಷದೊಳಗಿನ ಮತದಾರರ ಪೈಕಿ ಶೇ.49318ರಷ್ಟು ಯುವ ಮತದಾರರು ಕಾಂಗ್ರೆಸ್‌ ಗ್ಯಾರಂಟಿಗೆ ಮತ ಚಲಾಯಿಸುತ್ತೇವೆ ಎಂದಿದ್ದಾರೆ. ಶೇ.37.74ರಷ್ಟು ಮತದಾರರು ಇಲ್ಲ ಎಂದಿದ್ದು, ಶೇ.13.08ರಷ್ಟು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

35-55 ವರ್ಷದೊಳಗಿನ ಮತದಾರರ ಒಲವು ಹೇಗಿದೆ ಎಂದರೆ ಶೇ.52.49ರಷ್ಟು ಮತದಾರರು ಕಾಂಗ್ರೆಸ್‌ ಗ್ಯಾರಂಟಿಗಳಿಗಾಗಿ ಮತಹಾಕುತ್ತೇವೆ ಎಂದಿದ್ದರೆ, ಶೇ.35.48ರಷ್ಟು ಮತದಾರರು ಇಲ್ಲ ಎಂದಿದ್ದಾರೆ. ಶೇ.12.03ರಷ್ಟು ಮತದಾರರು ಏನೂ ಹೇಳೀಲ್ಲ.

ಇದೇ ಪ್ರಶ್ನೆ ಜೊತೆಗೆ ಮನೆ ಯಜಮಾನಿತಿ ಮಹಿಳೆಗೆ 2000 ರೂ ಕೊಡುವ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಂತೆಯೇ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಲಕ್ಷ ರೂ. ಕೊಡುವ ಕಾಂಗ್ರೆಸ್‌ ಭರವಸೆಯ ಕುರಿತು ನಿಮಗೆ ತಿಳಿದಿದೆಯೇ? ಎಂದು ಕೇಳಿದಾಗ ಶೇ.51.41 ರಷ್ಟು ಮತದಾರರು ಹೌದು ಎಂದಿದ್ದರೆ, ಶೇ.48.59ರಷ್ಟು ಮತದಾರರಿಗೆ ಇನ್ನೂ ಈ ಯೋಜನೆ ಬಗ್ಗೆ ತಿಳಿದೇ ಇಲ್ಲ ಎಂದಿದ್ದಾರೆ. ಅದರಲ್ಲೂ ಮಹಿಳಾ ಮತದಾರನ್ನೇ ಕೇಳಿದಾಗ ಶೇ.50 ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆ ಗೊತ್ತಿದ್ದರೆ, ಉಳಿದ ಶೇ.50 ಮತದಾರರಿಗೆ ಗೊತ್ತಿಲ್ಲ.

ಕರ್ನಾಟಕ, ತೆಲಂಗಾಣಗಳಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದು ಬಿಜೆಪಿಯೂ ಗ್ಯಾರಂಟಿ ಘೋಷಿಸುವ ಹಾಗೆ ಮಾಡಿದ ಕಾಂಗ್ರೆಸ್ ಈಗ ಇಡೀ ದೇಶದಲ್ಲಿ ಗ್ಯಾರಂಟಿ ಮೂಲಕ ಬದಲಾವಣೆ ತರಲು ಮುಂದಾಗಿದೆ. ಅಂತಹ ಮಹತ್ವದ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್‌ ಇನ್ನಷ್ಟು ಪ್ರಚಾರ ಗಟ್ಟಿಯಾಗಿ ನಡೆದು, ಪ್ರತಿ ಮನೆಯನ್ನು ತಲುಪಿದ್ದೇ ಆದಲ್ಲಿ ಮಹಿಳೆಯರಿಗೆ ₹1 ಲಕ್ಷ ಸಹಾಯಹಸ್ತದ ಕಾಂಗ್ರೆಸ್‌ ‘ಮಹಾಲಕ್ಷ್ಮಿ’ ಗ್ಯಾರಂಟಿ ಯೋಜನೆ ಮೋದಿ ಅವರನ್ನು ಮಣಿಸಿದರೂ ಆಶ್ಚರ್ಯವಿಲ್ಲ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

1 COMMENT

  1. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳೇ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹೀಗಿರುವಾಗ ಮಹಿಳೆಯರಿಗೆ 1 ಲಕ್ಷ ರೂ. ಗ್ಯಾರಂಟಿ ನೀಡೋ ಕಾಂಗ್ರೆಸ್ ಗ್ಯಾರಂಟಿ ಹೇಗೆ ನಂಬೋದು..ದೇಶವನ್ನು 70 ವರ್ಷ ಕಾಲ ಅಳಿದ್ರೂ ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಈಗ ಜನರನ್ನು ಉದ್ದಾರ ಮಾಡಲಿದೆಯೇ.. ಚುನಾವಣೆ ಕಾಲದಲ್ಲಿ ಮಾತ್ರವೇ ಸಿಸನಲ್ ಹಿಂದೂಗಳಾಗುವ ಗೋಮುಖವಾಘ್ರನಂತಿರುವ ಕಾಂಗ್ರೆಸ್ಸಿಗರನ್ನು ಜನ್ರು ನಂಬುತ್ತಾರೆಯೇ…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X