ಮುಸ್ಲಿಮರು ಮತ್ತು ಮೋದಿ ಸುಳ್ಳು; ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಆಯೋಗಗಳು ಹೇಳಿದ್ದೇನು? ಡೀಟೇಲ್ಸ್‌

Date:

Advertisements

ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್‌ ಸರ್ಕಾರಗಳು ಮುಸ್ಲಿಮರಿಗೆ ಮೀಸಲಾತಿಯನ್ನ ನೀಡಿವೆ. ಅದಕ್ಕಾಗಿ, ಹಿಂದುಳಿದವರು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳ ಮೀಸಲಾತಿಯನ್ನು ಕಡಿತ ಮಾಡಿವೆ. ಕಸಿದುಕೊಂಡಿವೆ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಎಲ್ಲ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ವಾಸ್ತವ ಏನೆಂದರೆ, ಸರ್ಕಾರಗಳು ಯಾರ ಮೀಸಲಾತಿಯನ್ನೂ ಕಸಿದುಕೊಂಡಿಲ್ಲ. ಬದಲಾಗಿ, ಮುಸ್ಲಿಮರಗೆ ಮೀಸಲಾತಿ ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇಮಿಸಿದ್ದ ಹಲವಾರು ಆಯೋಗಗಳು, ‘ಮುಸ್ಲಿಮರು ತೀರಾ ಹಿಂದುಳಿದಿದ್ದಾರೆ. ಅವರಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ನೀಡಬೇಕು’ ಎಂದು ಹೇಳಿವೆ. ಶಿಫಾರಸ್ಸು ಮಾಡಿವೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿ ಏನು? ಅದರ ಇತಿಹಾಸವೇನು? ನೋಡೋಣ…..

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ತಾವು ‘ಮುಸ್ಲಿಂ ಸ್ನೇಹಿ’ ಎಂಬ ಇಮೇಜ್‌ಅನ್ನು ಹೆಚ್ಚಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದ್ದವು. ಅದರಲ್ಲಿ, ಹಿಂದಿನ ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದ ಮುಸ್ಲಿಂ ಮೀಸಲಾತಿಯನ್ನು ಮರು ಸ್ಥಾಪಿಸುವುದು ಒಂದಾದರೆ, ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ಕೀರ್ತಿಯನ್ನು ಯಾರು ಪಡೆದುಕೊಳ್ಳಬೇಕು ಎಂಬ ಕುರಿತು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಿಕ್ಕಾಟ ನಡೆಸಿದ್ದವು.

ಆದರೆ, ರಾಜಕೀಯ ತಿಕ್ಕಾಟಗಳ ನಡುವೆ ಎರಡು ಅಂಶಗಳು ಅಸ್ಪಷ್ಟವಾಗಿ ಉಳಿದಿದ್ದವು. ಮೊದಲನೆಯದಾಗಿ, ಮುಸ್ಲಿಮ್ ಮೀಸಲಾತಿಯು ಸ್ವಾತಂತ್ರ್ಯಪೂರ್ವದ ದಿನಗಳ ಸಮಯದಿಂದಲೂ ಚರ್ಚೆಯಲ್ಲಿತ್ತು. ಆದರೂ, ಈ ವಿಚಾರ ಅನೇಕ ಏರಿಳಿತಗಳನ್ನು ಕಂಡಿದೆ. ಎರಡನೆಯದಾಗಿ, ಮೀಸಲಾತಿಯನ್ನು ಯಾವಾಗಲೂ ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗಾಗಿ ನೀಡಲಾಗಿದೆಯೇ ಹೊರತು ಧಾರ್ಮಿಕ ನೆಲೆಯಲ್ಲಿ ಅಲ್ಲ ಎಂಬುದು. ಆದರೆ, ರಾಜಕೀಯ ಪ್ರಚಾರವು ಈ ಎರಡು ವಿಚಾರಗಳನ್ನೂ ತೆರೆಮರೆಗೆ ಸರಿಸಿ, ಈ ಎರಡೂ ನೆಲೆಗಳಿಗೆ ವಿರುದ್ಧವಾಗಿ ಪ್ರತಿಪಾದನೆಯನ್ನು ಮುಂದಿಡುತ್ತಿದೆ.

Advertisements

ಸ್ವಾತಂತ್ರ್ಯದ ಮೊದಲು

1918ರಲ್ಲಿ ಆಗಿನ ಮೈಸೂರು ಮಹಾರಾಜರು ನೇಮಿಸಿದ ಜಸ್ಟಿಸ್ ಮಿಲ್ಲರ್ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ 1921ರಲ್ಲಿ ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗದ ರೀತಿಯಲ್ಲಿ ಮೀಸಲಾತಿ ನೀಡಲಾಗಿತ್ತು. ಲೇಖಕ ಮತ್ತು ಪತ್ರಕರ್ತ ಮತ್ತು ಮಾಜಿ ಎಂಎಲ್‌ಸಿ ಕ್ವಾಜಿ ಅರ್ಶೆದ್ ಅಲಿ ಅವರು ತಮ್ಮ ‘ಕರ್ನಾಟಕ ಮುಸ್ಲಿಮರು ಮತ್ತು ಚುನಾವಣಾ ರಾಜಕೀಯ’ ಪುಸ್ತಕದಲ್ಲಿ ಈ ಬಗ್ಗೆ ಗಮನಸೆಳೆದಿದ್ದಾರೆ. ಈ ಮೀಸಲಾತಿಯು ಭಾರತ ಸ್ವತಂತ್ರಗೊಳ್ಳುವವರೆಗೂ ಮುಂದುವರೆದಿತ್ತು ಎಂದು ಅವರು ವಿವರಿಸಿದ್ದಾರೆ.

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ನಾವು ನೋಡುತ್ತಿರುವುದು ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳ ಮೂಲಕ ಹಿಂದುಳಿದ ವರ್ಗಗಳ ಕೋಟಾ ಅಡಿಯಲ್ಲಿ ಮುಸ್ಲಿಮರನ್ನು ಸೇರಿಸುವ ಪ್ರಯತ್ನಗಳು ಸರಿಣಿಯಾಗಿ ನಡೆದಿವೆ.

ಈ ಸರಣಿಯಲ್ಲಿ ಮೊದಲನೆಯದು ಆರ್ ನಾಗನಗೌಡ ಆಯೋಗದ ವರದಿ; ನಾಗನಗೌಡ ಆಯೋಗವು 1961ರಲ್ಲಿ ತನ್ನ ವರದಿಯನ್ನು ಸಲ್ಲಿಸಿ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ತರಲು ಶಿಫಾರಸು ಮಾಡಿತು. ಇದು ಮುಸ್ಲಿಮರೊಳಗಿನ 10ಕ್ಕೂ ಹೆಚ್ಚು ಜಾತಿಗಳು ಅತ್ಯಂತ ಹಿಂದುಳಿದಿವೆ ಎಂದು ಗುರುತಿಸಿತ್ತು. 1962ರಲ್ಲಿ ಶಿಫಾರಸುಗಳನ್ನು ಆಧರಿಸಿ ಹೊರಡಿಸಲಾದ ಸರ್ಕಾರಿ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು.

ಸರ್ಕಾರದ ಆದೇಶವು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದರಿಂದ ಆದೇಶವನ್ನು 1962ರಿಂದ 1973 ರವರೆಗೆ ಅಮಾನತು ಮಾಡಲಾಗಿತ್ತು. 1975ರಲ್ಲಿ ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಹಾವನೂರು ಆಯೋಗವನ್ನು ಸ್ಥಾಪಿಸಿದರು. ಈ ಆಯೋಗ ರಚನೆಯಿಂದಾಗಿ, ಸರ್ಕಾರದ ಆದೇಶಕ್ಕೆ ಮತ್ತೆ ಜೀವ ಬಂದಿತು.

ದೇವರಾಜ ಅರಸು ಸರ್ಕಾರವು 1977ರಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಆದೇಶ ಜಾರಿ ಮಾಡಿತು. ಇದನ್ನೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹೈಕೋರ್ಟ್‌ ಸರ್ಕಾರದ ಆದೇಶವನ್ನು ಎತ್ತಿಹಿಡಿಯಿತು. ಆದರೆ, ನಂತರ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಶೀಲಿಸಲು ಮತ್ತೊಂದು ಆಯೋಗವನ್ನು ರಚಿಸುವಂತೆ 1983ರಲ್ಲಿ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಕುತೂಹಲಕಾರಿಯಾಗಿ, 1984ರಲ್ಲಿ ಸ್ಥಾಪಿಸಲಾದ ವೆಂಕಟಸ್ವಾಮಿ ಆಯೋಗವು ಹಿಂದುಳಿದ ವರ್ಗಗಳ ಪಟ್ಟಿಯಿಂದ ಒಕ್ಕಲಿಗರು ಮತ್ತು ಕೆಲವು ಲಿಂಗಾಯತ ಪಂಗಡಗಳನ್ನು ಹೊರಗಿಡಲು ಶಿಫಾರಸು ಮಾಡಿತು. ಆದರೆ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೇ ಮುಸ್ಲಿಮರಿಗೆ ಮೀಸಲಾತಿಯನ್ನು ಮುಂದುವರೆಸಲು ಸಲಹೆ ನೀಡಿತು. ಆಯೋಗದ ವರದಿಯ ವಿರುದ್ಧ ಒಕ್ಕಲಿಗರು ಪ್ರತಿಭಟನೆ ನಡೆಸಿದ್ದರಿಂದ, ಆ ವರದಿಯನ್ನು ಸರ್ಕಾರ ಅಂಗೀಕರಿಸಲೇ ಇಲ್ಲ.

ಮುಂದುವರೆದು, 1990ರಲ್ಲಿ ಒ. ಚಿನ್ನಪ್ಪ ರೆಡ್ಡಿ ನೇತೃತ್ವದ ಮತ್ತೊಂದು ಆಯೋಗವನ್ನು ರಚಿಸಲಾಯಿತು. ಆ ಆಯೋಗವೂ ಕೂಡ, ಮುಸ್ಲಿಮರು ಹಿಂದುಳಿದ ಸಮುದಾಯಕ್ಕೆ ಸೇರುತ್ತಾರೆ ಎಂದು ಹೇಳಿತು. ಇದರ ಆಧಾರದ ಮೇಲೆ ಸರ್ಕಾರ 1994ರಲ್ಲಿ ಮುಸ್ಲಿಮರನ್ನು ಪ್ರವರ್ಗ 2ರ ಅಡಿಯಲ್ಲಿ ಸೇರಿಸಿ ಆದೇಶ ಹೊರಡಿಸಿತು. ಬೌದ್ಧರು ಮತ್ತು ಕ್ರಿಶ್ಚಿಯನ್ನರೊಂದಿಗೆ ವರ್ಗ II (B) ಅಡಿಯಲ್ಲಿ ಮುಸ್ಲಿಂ ಕೋಟಾವನ್ನು ಶೇ.6ಕ್ಕೆ ನಿಗದಿಪಡಿಸಿ ಮತ್ತೊಂದು ಆದೇಶವನ್ನು ಸರ್ಕಾರ ಹೊರಡಿಸಿತು.

ಮಂಡಲ್ ಪ್ರಕರಣ

ಇದೆಲ್ಲದರ ನಡುವೆ, ಅದೇ ವರ್ಷ (1994) ಮಂಡಲ್ ಪ್ರಕರಣವು ಎಲ್ಲ ಮೀಸಲಾತಿಗಳಿಗೆ ಗರಿಷ್ಠ ಮಿತಿಯನ್ನು 50%ಗೆ ನಿಗದಿಪಡಿಸಿತು. ಅಂದರೆ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.27 ಕ್ಕೆ ಮಿತಿಗೊಳಿಸಿತು. ಹೀಗಾಗಿ, ಎಲ್ಲ ಕೋಟಾಗಳನ್ನು ಕಡಿತ ಮಾಡುವ ಪ್ರಕ್ರಿಯೆಯಲ್ಲಿ, ಮುಸ್ಲಿಂ ಕೋಟಾವನ್ನು ಸಹ ವರ್ಗ II (B) ನಲ್ಲಿ 4%ಗೆ ಇಳಿಸಲಾಯಿತು. ಆ ಹೊಸ ತಿದ್ದುಪಡಿ ಆದೇಶವನ್ನು 1995ರಲ್ಲಿ ಸರ್ಕಾರ ಅಂಗೀಕರಿಸಿತು. ಅಂದಿನಿಂದ, ಇದೇ ಆದೇಶದಡಿ ಮೀಸಲಾತಿ ಹಂಚಿಕೆ ಚಾಲ್ತಿಯಲ್ಲಿದೆ.

ಈ ವರದಿ ಓದಿದ್ದೀರಾ?: Fact Check | ಸುಳ್ಳು ಹೇಳಿದ ಪ್ರಧಾನಿ ಮೋದಿ; ಆಂಧ್ರದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಟ್ಟಿಲ್ಲ

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಒದಗಿಸಿಲ್ಲ. ಹೀಗಾಗಿಯೇ, ಆಂಧ್ರಪ್ರದೇಶವು ಮುಸ್ಲಿಮರಿಗೆ ಧಾರ್ಮಿಕ ವರ್ಗವಾಗಿ ಮೀಸಲಾತಿ ನೀಡಲು ನಡೆಸಿದ ಪ್ರಯತ್ನಗಳು ವಿಫಲವಾದದ್ದನ್ನೂ ನಾವು ಸ್ಮರಿಸಬಹುದು. ಆದರೆ, ಕೇಂದ್ರ ಮತ್ತು ರಾಜ್ಯ ಮಟ್ಟದ ಆಯೋಗಗಳ ಸರಣಿ ವರದಿಗಳು ಮುಸ್ಲಿಂ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬುದನ್ನು ನಿಸ್ಸಂದಿಗ್ಧವಾಗಿ, ಸಿಸ್ಸಂಶಯವಾಗಿ ಒಪ್ಪಿಕೊಂಡಿವೆ ಎಂಬುದನ್ನು ನಾವು ಮರೆಯುವಂತಿಲ್ಲ ಮತ್ತು ಕಡೆಗಣಿಸುವಂತಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X