“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ ಹೋಗ್ತಿದ್ದಾರೆ ಅಂತ ಗೊತ್ತಾಗ್ತಿಲ್ಲ” ಎಂಬ ವಿವಾದಾದ್ಮಕ ಹೇಳಿಕೆಯನ್ನು ಬಿಜೆಪಿ ಸ್ಟಾರ್ ಪ್ರಚಾರಕಿ, ನಟಿ ಶೃತಿ ನೀಡಿದ್ದರು. ಈ ಹೇಳಿಕೆ ಮೂಲಕ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿದ್ದರು. ಇದೀಗ, ನಟಿ ಶ್ರುತಿ ವಿರುದ್ಧ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿ ಏಳು ದಿನದಲ್ಲಿ ಸ್ಪಷ್ಟಿಕರಣ ನೀಡಬೇಕು ಎಂದು ಕೇಳಿದೆ.
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಶಕ್ತಿ ಸಿಂಧು ಮಹಿಳಾ ಸಮಾವೇಶದಲ್ಲಿ ನಟಿ ಶೃತಿ ಅವರು, “ದಿನ ನಿತ್ಯ ಗಂಡಸರು ಅಳತಾ ಇದ್ದಾರೆ. ನನ್ನ ಹೆಂಡತಿ ಎಲ್ಲಿ ಹೋದ್ಲು ಅಂತ, ಮಕ್ಕಳು ಮನೇಲಿ ಉಪವಾಸ ಬಿದ್ದಿದ್ದಾರೆ ಅಂತ ಗೋಳಾಡುತ್ತಿದ್ದಾರೆ. ಫ್ರೀ ಬಸ್ ಕೊಟ್ಟ ತಕ್ಷಣ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ. ತೀರ್ಥಯಾತ್ರೆ ಹೋಗಬೇಕು ಅನ್ನುವ ನೆಪದಲ್ಲಿ ಎಲ್ಲಿಗೆ ಹೋಗಬೇಕು ಅನ್ನೋದು ಗೊತ್ತಿಲ್ಲ. ಗೊತ್ತು ಗುರಿಯಿಲ್ಲದೆ ಇರುವ ಹಾಗೇ ಮಾಡಿದ್ದಾರೆ” ಎಂಬ ಹೇಳಿಕೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ನಟಿ ಶೃತಿ ಅವರಿಗೆ ನೋಟಿಸ್ ನೀಡಿದೆ.
“ಶೃತಿ ಅವರು ಒಂದು ಹೆಣ್ಣುಮಗಳಾಗಿ, ಒಂದು ರಾಜಕೀಯದ ಸಭೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಈ ರೀತಿ ಮಾತಾಡಿರೋದು ಖಂಡನೀಯ. ಸರ್ಕಾರದ ಯೋಜನೆಗಳು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಇರುತ್ತವೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ಶೃತಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಏಳು ದಿನದಲ್ಲಿ ಅವರು ಮಹಿಳಾ ಚುನಾವಣಾ ಆಯೋಗಕ್ಕೆ ಬಂದು ಸ್ಪಷ್ಟೀಕರಣ ನೀಡಬೇಕು” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ
“ಮಹಿಳಾ ಸಬಲೀಕರಣದ ಯೋಜನೆಗಳ ಬಗ್ಗೆ ಇಷ್ಟು ದಿನ ಪುರುಷರು ಮಾತನಾಡುತ್ತಿದ್ದರು. ಈ ಬಗ್ಗೆ ನಾವು ಹೋರಾಟ ಮಾಡತಾ ಇದ್ದೇವು. ಆದರೆ, ಈಗ ಹೆಣ್ಣೇ ಹೆಣ್ಣಿನ ಬಗ್ಗೆ ಕೇವಲವಾಗಿ ಮಾತಾನಾಡುತ್ತಾ ಇರುವುದು ದುರದುಷ್ಟಕರ. ಯಾರು ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡಬಾರದು” ಎಂದರು.