ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

Date:

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ, ರಾಜ್ಯದಲ್ಲಿರುವ ವಿಕಲಚೇತನ ಮತ್ತು ಹಿರಿಯ ನಾಗರಿಕರ ಮತದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಮತಗಟ್ಟೆಗಳಿಗೆ ಬಂದು ಸುಗಮವಾಗಿ ಮತದಾನ ಮಾಡಲು ಅಗತ್ಯವಿರುವ ನಾನಾ ಸೇವೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.

ರಾಂಪ್ (ಇಳಿಜಾರು) ರೈಲಿಂಗ್, ಗಾಲಿ ಕುರ್ಚಿಗಳು, ಅಂಧ ಮತದಾರರಿಗೆ ಅಗತ್ಯವಿರುವಂತೆ ಮತಯಂತ್ರದಲ್ಲಿ ಬೈಲ್ ಲಿಪಿ ಸಂಖ್ಯೆಗಳು, ಬೈಲ್ ಲಿಪಿಯ ಡಮ್ಮಿ ಮತಪತ್ರ, ಬೂತಕನ್ನಡಿ, ಶ್ರವಣದೋಷವುಳ್ಳ ಮತದಾರರಿಗೆ ಅಗತ್ಯವಿರುವಂತ ಸಂಜ್ಞಾ ಭಾಷಾ ತಜ್ಞರ ನೆರವು, ಸೂಚನಾ ಫಲಕಗಳು, ಶೌಚಾಲಯದ ವ್ಯವಸ್ಥೆ, ಮತದಾನ ಮಾಡಲು ಪ್ರತ್ಯೇಕ ಸರಥಿ ಸಾಲು, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಆರೋಗ್ಯ ಸಹಾಯಕರ ನೆರವು, ಅಗತ್ಯವಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಲ್ಲ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ರಾಜ್ಯ ಚುನಾವಣಾ ಸಂಯೋಜಕರಾದ ಎಸ್.ನಟರಾಜ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಶೇಷ ಚೇತನ ಮತದಾರರು ಸಕ್ಷಮ್ ಆಪ್ ಮೂಲಕ ಅಗತ್ಯ ನೆರವು ಬುಕ್ ಮಾಡಿ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಒಟ್ಟು 5,47,25,675 ಮತದಾರರು ಮತ ಚಲಾಯಿಸುತ್ತಿದ್ದು, ಅದರಲ್ಲಿ 2,73,66,508 ಪುರುಷ ಹಾಗೂ 2,73,54,155 ಮತ್ತು ತೃತೀಯ ಲಿಂಗಿಗಳು 5,012 ಮತದಾರರಿದ್ದಾರೆ. ಇದರಲ್ಲಿ ರಾಜ್ಯದಲ್ಲಿ ಒಟ್ಟು 6,20,008 ಮತದಾರರು ವಿಶೇಷ ಚೇತನ ಮತದಾರರಿದ್ದಾರೆ.

ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯನ್ನು ಒಳಗೊಳ್ಳುವ, ಸುಗಮ, ನೈತಿಕ, ಮಾಹಿತಿಯುಕ್ತ ಹಾಗೂ ಭಾಗವಹಿಸುವ ಚುನಾವಣೆಗಳನ್ನಾಗಿ ನಡೆಸುವ ನಿಟ್ಟಿನಲ್ಲಿ ಸುಮಾರು 6.2 ಲಕ್ಷ ವಿಶೇಷ ಚೇತನ ಮತದಾರ ಕರ್ನಾಟಕದ ಮೊದಲನೇ ಹಂತದ ನಾಳೆ ನಡೆಯುವ ಚುನಾವಣೆಯಲ್ಲಿ 2,76,042 ವಿಶೇಷ ಚೇತನ ಮತದಾರರು ಭಾಗವಹಿಸುತ್ತಿದ್ದಾರೆ.

ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗವು ಸಕ್ಷಮ್ ಆಪ್‌ನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ವಿಶೇಷ ಚೇತನರಿಗೆ ಅಗತ್ಯವಿರುವ ಮಾಹಿತಿ ಮತ್ತು ಅವರಿಗೆ ದೊರೆಯುವ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದರಿಂದ ವಿಶೇಷ ಚೇತನ ಮತದಾರರು ಭೌತಿಕವಾಗಿ ಅಲೆದಾಡುವುದನ್ನು ತಪ್ಪಿಸಿ, ತಮ್ಮ ಸ್ಥಳದಿಂದಲೇ ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ತಮಗೆ ಬೇಕಾದ ಮಾಹಿತಿ ಹಾಗೂ ವಿಶೇಷ ಚೇತನರಿಗೆ ದೊರೆಯುವ ಸೌಲಭ್ಯಗಳಾದ ಗಾಲಿಕುರ್ಚಿ, ಸಾರಿಗೆ, ಸಹಾಯಕರು, ಪ್ರತ್ಯೇಕ ಸಾಲು, ಸಂಜ್ಞಾ ಭಾಷೆ ಪರಿಣಿತರು, ಬೂತಗನ್ನಡಿ, ಬೈಲ್ ಲಿಪಿ, ನೀರು ಇತ್ಯಾದಿ ಮಾಹಿತಿಯನ್ನು ಒಳಗೊಂಡಿರುತ್ತದೆ.

ಮೊದಲ ಹಂತದ ಮತದಾನದಕ್ಕಾಗಿ ಈವರೆಗೆ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವೀಲ್ ಚೇರ್‌ಗಾಗಿ 756, ಟ್ರಾನ್ಸಪೋರ್ಟೇಷನ್ 489 ಹಾಗೂ ಸಹಾಯಕರನ್ನು ಕೋರಿ 31 ವಿಶೇಷ ಚೇತನ ಮತದಾರರು ಈಗಾಗಲೇ ಸಕ್ಷಮ್ ಆಪ್‌ನಲ್ಲಿ ಬುಕ್ ಮಾಡಿದ್ದಾರೆ. ಮತದಾನದ ದಿನದಂದು ಸಂಜೆ 5:00 ಗಂಟೆಯವರೆಗೆ ಸಹ ಬುಕ್ ಮಾಡಲು ಅವಕಾಶ ನೀಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲೋಕಸಭಾ ಚುನಾವಣೆ : ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ

ಇದನ್ನು ತಮ್ಮ ಮೊಬೈಲ್ ಆಂಡ್ರಾಯ್ಡ್‌ ಆಗಿದ್ದರೇ, ಗೂಗಲ್ ಪ್ಲೇ ಸ್ಟೋರ್‌ನಿಂದ ಹಾಗೂ ಐಫೋನ್ ಆಗಿದ್ದರೇ, ಮೊಬೈಲ್ ಆಪ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಾಯಿಸಿಕೊಂಡು ಲಾಗಿನ್ ಮಾಡಬಹುದು. ನಂತರ ಮತ ಚಲಾಯಿಸಲು ಮತಗಟ್ಟೆಗೆ ತೆರಳಲು ಪಿಕ್‌ ಅಪ್ ಮತ್ತು ಡ್ರಾಪ್‌ಗೆ ಸಾರಿಗೆ ವ್ಯವಸ್ಥೆಯನ್ನು ಕಾಯ್ದಿರಿಸಬಹುದು ಹಾಗೂ ಮತಗಟ್ಟೆಯಲ್ಲಿ ದೊರೆಯುವ ವಿಶೇಷ ಚೇತನರ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು.

ಭಾರತ ಚುನಾವಣಾ ಆಯೋಗವು ಹೊರ ತಂದಿರುವ ಈ ಸಕ್ಷಮ್ ಆಪ್‌ನ್ನು ಅವಶ್ಯವಿರುವ ಎಲ್ಲ ವಿಶೇಷ ಚೇತನರು ಬಳಸಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮತವನ್ನು ಚಲಾಯಿಸಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮನವಿ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ ತಂಡ

ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಸಂತ್ರಸ್ತೆಯೋರ್ವರನ್ನು ಅಪಹರಣಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಬೀದರ್ | ಮೇ 7ರಂದು ಲೋಕಸಭಾ ಚುನಾವಣೆ; ನಾಳೆ ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯ

ಮೇ 7ರಂದು ನಡೆಯಲಿರುವ ಬೀದರ ಲೋಕಸಭಾ ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು...

ಪ್ರಜ್ವಲ್ ಪೆನ್‌ಡ್ರೈವ್ ವಿಚಾರದಲ್ಲಿ ಕುಮಾರಸ್ವಾಮಿ ಆಗಾಗ್ಗೆ ನಿಲುವು ಬದಲಿಸುತ್ತಿರುವುದೇಕೆ? ಡಿ ಕೆ ಶಿವಕುಮಾರ್

"ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ವಿಚಾರದಲ್ಲಿ ಕುಮಾರಸ್ವಾಮಿ ಆಗಾಗ್ಗೆ ನಿಲುವು ಬದಲಿಸುತ್ತಿರುವುದು...