ವು(ಕೆಎಂಎಫ್) ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಮಾರಾಟದಲ್ಲಿ ತನ್ನದೇ ದಾಖಲೆಯನ್ನು ಮುರಿದಿದೆ. ದಿನವೊಂದರಲ್ಲಿ 16.5 ಲಕ್ಷ ಲೀಟರ್ ಮೊಸರು ಮತ್ತು 51 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುವ ಮೂಲಕ ವಿನೂತನ ದಾಖಲೆ ಸೃಷ್ಟಿಸಿದೆ. ಹಾಲಿನ ಉತ್ಪನ್ನಗಳಷ್ಟೇ ಅಲ್ಲದೆ, ಕೆಎಂಎಫ್ನ ಐಸ್‌ಕ್ರೀಮ್‌ಗಳೂ ಕೂಡ ಕಳೆದ ವರ್ಷಕ್ಕಿಂತ ಶೇ.40ರಷ್ಟು ಹೆಚ್ಚು ಮಾರಾಟವಾಗಿವೆ. ಈ ಬಾರಿ ಈವರೆಗಿನ ಅತ್ಯಧಿಕ ಐಸ್ಕ್ರೀಮ್ ಮಾರಾಟವಾಗಿರುವುದಾಗಿ ವರದಿಯಾಗಿದೆ.
“ಏಪ್ರಿಲ್ ಸಮಯದಲ್ಲಿ, ವಿಶೇಷವಾಗಿ ಏಪ್ರಿಲ್ 9 ಮತ್ತು 15ರ ನಡುವೆ ಯುಗಾದಿ, ರಾಮನವಮಿ ಮತ್ತು ಈದ್-ಉಲ್-ಫಿತರ್‌ನಂತಹ ಹಬ್ಬಗಳು ಒಂದರ ನಂತರ ಒಂದರಂತೆ ಬಂದಿದ್ದರಿಂದ ಕೂಡಾ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. ಹಾಲು ಮತ್ತು ಮೊಸರು ಪ್ಯಾಕೆಟ್‌ಗಳು ಬೇಗನೆ ಬಿಕರಿಯಾಗುವುದನ್ನು ಈ ವರ್ಷ ಕಾಣಬಹುದು. ಸಾಮಾನ್ಯವಾಗಿ, ಸಂಸ್ಥೆಯು ದಿನಕ್ಕೆ ಎರಡು ಬಾರಿ ಉತ್ಪನ್ನಗಳನ್ನು ಪೂರೈಸುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಬಾರಿ ಉತ್ಪನ್ನಗಳನ್ನು ಪೂರೈಸಲಾಗಿದೆ. ಹೆಚ್ಚುತ್ತಿರುವ ತಾಪಮಾನ ಕೂಡ ಮಾರಾಟದಲ್ಲಿ ಏರಿಕೆಗೆ ಕಾರಣ” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಐಸ್‌ಕ್ರೀಂ ಮಾರಾಟದಲ್ಲಿ ಶೇ 40ರಷ್ಟು ಏರಿಕೆ
“ಈ ಹಿಂದೆ ದಿನಕ್ಕೆ ನಂದಿನಿ ಹಾಲು ಮಾರಾಟ 44 ಲಕ್ಷ ಲೀಟರ್ ದಾಟಿರಲಿಲ್ಲ. ಆದರೆ ಈ ವರ್ಷ ಒಂದೇ ದಿನದಲ್ಲಿ 48 ಲಕ್ಷ ಲೀಟರ್ ಮಾರಾಟವಾಗಿದೆ. ಮೊಸರು ಮತ್ತು ಮಜ್ಜಿಗೆ ಕೂಡ ಗಮನಾರ್ಹ ಮಾರಾಟ ದಾಖಲಿಸಿವೆ. ಈ ತಿಂಗಳು, ನಾವು ಮೊಸರು ಮಾರಾಟದಲ್ಲಿ ಎರಡು ಮೈಲಿಗಲ್ಲುಗಳನ್ನು ದಾಟಿದ್ದೇವೆ. ಮೊದಲ ವಾರದಲ್ಲಿ, ನಾವು 11.5 ಲಕ್ಷ ಲೀಟರ್ ಮಾರಾಟ ದಾಖಲಿಸಿದ್ದೇವೆ ಮತ್ತು ಐದು ದಿನಗಳಲ್ಲಿ 16.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಇದರಿಂದ ನಂದಿನಿ ಆದ್ಯತೆಯ ಬ್ರ್ಯಾಂಡ್ ಆಗಿರುವುದು ತಿಳಿದುಬರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅನುಭವಿ ಆಲಗೂರರ ಜಯದಿಂದ ಜಿಲ್ಲೆ ಅಭಿವೃದ್ಧಿ: ಶಾಸಕ ಯಶವಂತರಾಯಗೌಡ
“ಕೆಎಎಂಎಫ್ ಐಸ್ ಕ್ರೀಮ್ ಮಾರಾಟವು ಶೇ.40ರಷ್ಟು ಹೆಚ್ಚಾಗಿದ್ದು, ನಿರಂತರವಾಗಿ ಸುಧಾರಿಸುತ್ತಿದೆ. ಐಸ್ ಕ್ರೀಂಗಳು ಒಂದು ವರ್ಷಕ್ಕೂ ಹೆಚ್ಚು ಶೆಲ್ಫ್-ಲೈಫ್ ಹೊಂದಿರುತ್ತವೆ. ಹೀಗಾಗಿ ನಾವು ಬೇಗನೆ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
