ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ ನಡೆದ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಶೇ.61 ರಷ್ಟು ಮತದಾನವಾಗಿದೆ.
ಕೇರಳ, ತ್ರಿಪುರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೆಚ್ಚು ಮತದಾನವಾಗಿದೆ. ಮಧ್ಯ ಪ್ರದೇಶದ ಬೇತುಲ್ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಮರಣ ಹೊಂದಿದ ಕಾರಣ ಚುನಾವಣೆಯನ್ನು ಮೇ 7 ರಂದು ಮೂರನೇ ಹಂತದ ಮತದಾನದ ದಿನಕ್ಕೆ ಮುಂದೂಡಲಾಗಿದೆ.
ಅಸ್ಸಾಂ – 70.66 %, ಬಿಹಾರ – 53.03%, ಛತ್ತೀಸ್ಗಢ – 72.13%, ಜಮ್ಮು ಮತ್ತು ಕಾಶ್ಮೀರ – 67.22% ಕರ್ನಾಟಕ: 63.90%, ಕೇರಳ: 63.97%, ಮಧ್ಯಪ್ರದೇಶ: 54.83%, ಮಹಾರಾಷ್ಟ್ರ : 53.51%, ಮಣಿಪುರ: 76.06%, ರಾಜಸ್ಥಾನ: 59.19%, ತ್ರಿಪುರ: 76.23%, ಉತ್ತರ ಪ್ರದೇಶ: 52.64%, ಪಶ್ಚಿಮ ಬಂಗಾಳ: 71.84% ಮತದಾನವಾಗಿದೆ
2ನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್, ಭೂಪೇಶ್ ಬಘೇಲ್, ಶಶಿ ತರೂರ್, ರಾಜೀವ್ ಚಂದ್ರಶೇಖರ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹಾಗೂ ನಟಿ ಹೇಮಾ ಮಾಲಿನಿ ಅವರ ಭವಿಷ್ಯ ನಿರ್ಧಾರವಾಗಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
88 ಲೋಕಸಭಾ ಕ್ಷೇತ್ರಗಳಲ್ಲಿ ಕೇರಳದ ಎಲ್ಲ 20, ಕರ್ನಾಟಕದ 14 ಸೇರಿದಂತೆ ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್ಘಡ, ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.
ಇಂದಿನ ಹಂತದಲ್ಲಿ ಒಟ್ಟು 1,210 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎಸ್ಪಿ 74, ಬಿಜೆಪಿ 69 ಹಾಗೂ ಕಾಂಗ್ರೆಸ್ 68 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಷ್ಟು ಲೋಕಸಭಾ ಕ್ಷೇತ್ರಗಳಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಎನ್ಡಿಎ 65 ಹಾಗೂ ಇಂಡಿಯಾ ಒಕ್ಕೂಡ 23 ಕ್ಷೇತ್ರಗಳನ್ನು ಜಯಿಸಿತ್ತು.
