ಬರ ಪರಿಹಾರ | ಕೇಳಿದ್ದು 18 ಸಾವಿರ ಕೋಟಿ – ಕೊಟ್ಟಿದ್ದು 3 ಸಾವಿರ ಕೋಟಿ; ಬಿಜೆಪಿ ವಿರುದ್ಧ ನೆಟ್ಟಿಗರ ಕಿಡಿ

Date:

Advertisements

ರಾಜ್ಯದಲ್ಲಿ ತೀವ್ರ ಬರ ಎದುರಾಗಿದ್ದರೂ, ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿರಲಿಲ್ಲ. ಇದೀಗ, ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬಳಿಕ, ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ನೀಡುವುದಾಗಿ ಕೇಂದ್ರ ಘೋಷಿಸಿದೆ.

ಕೇಳಿದ್ದು 18,174 ಕೋಟಿ ರೂ., ಆದರೆ, ಕೇಂದ್ರ ಕೊಟ್ಟಿರುವುದು ಕೇವಲ 3,454 ಕೋಟಿ ರೂ. ಈ ಬಗ್ಗೆ ಸುಪ್ರೀಂ ಗಮನಕ್ಕೆ ತರುತ್ತೇವೆಂದು ರಾಜ್ಯ ಸರ್ಕಾರ ಹೇಳಿದೆ. ಆದರೂ, ಕೊಟ್ಟ ಬಿಡಿಗಾಸನ್ನೇ ಇಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾದ ಬಿಜೆಪಿ, ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದು, ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿ, ಅಪಹಾಸ್ಯಕ್ಕೆ ಒಳಗಾಗಿದೆ.

ಕೇಂದ್ರ ಸರ್ಕಾರ ಬರ ಪರಿಹಾರ ಘೋಷಿಸುತ್ತಿದ್ದಂತೆ, ಪ್ರಧಾನಿ ಮೋದಿಗೆ ರಾಜ್ಯ ಬಿಜೆಪಿ ಅಭಿನಂದನೆ ಸಲ್ಲಿಸಿದೆ. “ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಸಮಯದಲ್ಲೇ ಕನ್ನಡಿಗರಿಗೆ ನೆರವಾದ ಪ್ರಧಾನಿ ನರೇಂದ್ರ ಮೋದಿ… 3,454 ಕೋಟಿ ರೂ. ಪರಿಹಾರ ನೀಡುವ ಮೂಲಕ ಕನ್ನಡಿಗರ ಹಿತ ಕಾಯ್ದಿದೆ ಮೋದಿ ಸರ್ಕಾರ” ಎಂದು ಹೊಗಳಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಹಂಚಿಕೊಂಡಿದೆ.

Advertisements

ಪೋಸ್ಟರ್‌ ಹಾಕಿದ ಬಿಜೆಪಿಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನೂ ಕೆಲವರು ಅಪಹಾಸ್ಯ ಮಾಡಿದ್ದಾರೆ. “ಬರ ಪರಿಹಾರ ಕೊಡಬೇಕಿದ್ದ ಸಮಯದಲ್ಲಿ ನೀವು ಕೊಡಲಿಲ್ಲ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರ ಪರಿಣಾಮ, ಕೇಂದ್ರ ಸರ್ಕಾರ ಅನಿವಾರ್ಯವಾಗಿ ಪರಿಹಾರ ಬಿಡುಗಡೆ ಮಾಡಿದೆ. ಧನ್ಯವಾದ ಸಲ್ಲಿಸಬೇಕಿರುವ ಕೇಂದ್ರಕ್ಕೆ – ಮೋದಿಗೆ ಅಲ್ಲ. ಸುಪ್ರೀಂ ಕೋರ್ಟಿಗೆ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ” ಎಂದು ನೆಟ್ಟಿಗರು ಬಿಜೆಪಿ ಕಾಲೆಳೆದಿದ್ದಾರೆ.

 

“ರಾಜ್ಯ ಸರ್ಕಾರ ಕೇಳಿದ್ದು, 18 ಸಾವಿರ ಕೋಟಿ ರೂ., ಕೇಂದ್ರ ಸರ್ಕಾರ ಕೊಟ್ಟಿರೋದು 3,454 ಕೋಟಿ ರೂ., ಆನೆ ಕೇಳಿದರೆ, ಇಲಿ ಕೊಟ್ಟಿದ್ದಾರೆ. ಅದನ್ನೂ ಅಭಿನಂದನೆಗೆ ಬಳಸಿಕೊಳ್ಳುತ್ತಿರುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ?” ಎಂದು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರುದ್ಧ ಕಿಡಿಕಾರಿರುವ ನೆಟ್ಟಿಗ ರಮೇಶ್ ಮದಕರಿ ಎಂಬವರು, “ಮೂರೂ ಬಿಟ್ಟೋರು ಊರಿಗೆ ದೊಡ್ಡೋರು ಅನ್ನೋ ಗಾದೆ ಬಿಜೆಪಿ ನೋಡೇ ಬರ್ದಿರಬೋದು” ಎಂದಿದ್ದಾರೆ.

“ಬರ ಪರಿಹಾರ ಕೊಟ್ಟಿಲ್ಲವೆಂದು ರಾಜ್ಯ ಸರ್ಕಾರ ದೂರು ಕೊಟ್ಟಿತ್ತು, ಸುಪ್ರೀಂ ಕೋರ್ಟ್ ಕ್ಯಾಕರಿಸಿ ಕೇಂದ್ರಕ್ಕೆ ಉಗಿದಿತ್ತು. ಹಾಗಾಗಿ ಇಂದು ನಮಗೆ ಬರ ಪರಿಹಾರ ಸಿಕ್ಕಿದೆ. ಯಾವನ್ನಾದ್ರೂ ಮೋದಿ ಕೊಟ್ರು, ಥ್ಯಾಂಕ್ಸ್ ಅಂದ್ರೆ ಕೆರ ಕಿತ್ತೋಗ್ತವೆ ಹುಷಾರ್” ಎಂದು ಮುತ್ತುರಾಜ್ ಎಂಬವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಸ್ವಾಮಿ ಕನ್ನಡಿಗರೇನೂ ದಡ್ಡರಲ್ಲ. ಕಳೆದ ತಿಂಗಳಿನಿಂದ ನೋಡಿದೀವಿ ನೀವೂ ಭಾರೀ ದನಿ ಎತ್ತಿದ್ದನ್ನ. ನೀವೆಲ್ಲಾ ನಾಯಕರು?” ಎಂದು ಉತ್ಸಾಹಿ ಎಂಬವರು ಕಿಡಿಕಾರಿದ್ದಾರೆ.

“ನಿಮ್ಮ ಯೋಗ್ಯತೆ ಜನರಿಗೆ ಗೊತ್ತಿದೆ ಸುಪ್ರೀಂ ಕೋರ್ಟ್ ಉಗಿದಮೇಲೆ ಬುದ್ಧಿ ಬಂದಿದೆ, ತಡವಾಗಿ ಅಂತ ಬೇರೆ ನಾಟಕ” ಎಂದು ಶ್ರವಣ್ ಎಂಬವರು ವ್ಯಂಗ್ಯವಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X