ಲೋಕಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ ಬಂಗಲೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪ್ರಿಯಾಂಕಾ ಗಾಂಧಿ ಅವರು ಈ ಬಂಗಲೆಯನ್ನು ಕಾನೂನುಬಾಹಿರವಾಗಿ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಿಯಾಂಕಾ ಅವರ ಬಂಗಲೆಯ ಚಿತ್ರವನ್ನು ಹಂಚಿಕೊಂಡಿರುವ ಬಿಜೆಪಿ ಬೆಂಬಲಿಗ ಮಿ. ಸಿನ್ಹಾ (ಮೋದಿ ಫ್ಯಾಮಿಲಿ) ಎಂಬವರು, “ಶಿಮ್ಲಾದ ಈ ಬೃಹತ್ ಬಂಗಲೆ ಪ್ರಿಯಾಂಕಾ ವಾದ್ರಾ ಅವರಿಗೆ ಸೇರಿದ್ದು. ಈ ಕಣಿವೆಯಲ್ಲಿ ಯಾವುದೇ ಹೊರಗಿನವರಿಗೆ ಮನೆ ನಿರ್ಮಿಸಲು ಅವಕಾಶವಿಲ್ಲ. ಆದರೂ, ರಾಜಮನೆತನದ ನಿಯಮಗಳು ಯಾವಾಗಲೂ ವಿಭಿನ್ನವಾಗಿರುತ್ತವೆ. ಹೇಗಾದರೂ ಸರಿ, ಸಂಪತ್ತಿನ ಪುನರ್ ವಿತರಣೆ ಯೋಜನೆಯಡಿ ನನಗೆ ಈ ಬಂಗಲೆ ಬೇಕು. ಪ್ರಿಯಾಂಕಾಗಾಂಧಿ ತಪ್ಪು ತಿಳಿಯುವುದಿಲ್ಲವೆಂದು ಭಾವಿಸುತ್ತೇವೆ” ಎಂದಿದ್ದಾರೆ.
This huge bungalow in Shimla belongs to Priyanka Vadra.
Although no outsider is allowed to build a home in this valley, the rules have always been different for the royal family…Anyway, I want this bungalow under wealth redistribution plan. Hope @priyankagandhi won’t mind. pic.twitter.com/gXBcItPAxO
— Mr Sinha (Modi’s family) (@MrSinha_) April 24, 2024
ಸಿನ್ಹಾ ಮಾಡಿರುವ ಆರೋಪ ಸತ್ಯಾಸತ್ಯತೆಗಳೇನು ನೋಡೋಣ..
ಪ್ರತಿಪಾದನೆ: ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿ ಅಕ್ರಮವಾಗಿ ಪ್ರಿಯಾಂಕಾ ಗಾಂಧಿ ಬಂಗಲೆ ಖರೀದಿಸಿದ್ದಾರೆ.
ಸತ್ಯ: ಮನೆಯು ಅಕ್ರವಾಗಿದೆ ಎಂಬ ಆರೋಪ ಸುಳ್ಳು. ಅಲ್ಲಿ ಪ್ರಿಯಾಂಕಾ ಖರೀದಿಸಿದ ಭೂಮಿ ಕಾನೂನುಬಾಹಿರವಲ್ಲ…!
ಪ್ರಿಯಾಂಕಾ ಅವರ ಬಂಗಲೆಯು ಕಾನೂನುಬಾಹಿರವಾಗಿದೆ ಎಂಬ ಹೇಳಿಕೆಗಳು ಕಾಂಗ್ರೆಸ್ ಪ್ರಣಾಳಿಕೆಯನ್ನು ಅಪಹಾಸ್ಯ ಮಾಡುವ ಉದ್ದೇಶವನ್ನು ಹೊಂದಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ‘ಸಂಪತ್ತನ್ನು ಪುನರ್ ವಿತರಣೆ’ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ ಎಂದು ಭಾವಿಸಿ, ಕೆಲವರು ಇಂತಹ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ವಾಸ್ತವ ಏನೆಂದರೆ, ಕಾಂಗ್ರೆಸ್ ‘ಸಂಪತ್ತು ಪುನರ್ ವಿತರಣೆ’ಯ ಬಗ್ಗೆ ಯಾವುದೇ ಭರವಸೆಯನ್ನೂ ತನ್ನ ಪ್ರಣಾಳಿಕೆಯಲ್ಲಿ ನೀಡಿಲ್ಲ.
ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಖರೀದಿಸಿದ ಭೂಮಿ ಕಾನೂನುಬಾಹಿರವಲ್ಲ. ಈ ಬಗ್ಗೆ ನ್ಯೂಸ್‌ಚೆಕರ್ 2020ರ ಸೆಪ್ಟೆಂಬರ್ 14ರಲ್ಲಿಯೇ ಫ್ಯಾಕ್ಟ್‌ಚೆಕ್ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಭೂಮಿ ಖರೀದಿಯ ಕೆಲವು ನಿಮಯಗಳನ್ನು ಸಡಿಲಿಸಲಾಗಿದೆ. ಹೀಗಾಗಿ, ಕಾನೂನಾತ್ಮಕವಾಗಿಯೇ ಅಲ್ಲಿ ಪ್ರಿಯಾಂಕಾ ಬಂಗಲೆಯನ್ನು ಖರೀದಿಸಿದ್ದಾರೆ.