ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ ಮ್ಯಾನ್ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ. ಹಾಗೆಯೇ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಹೇಳಿದರು.
ಎಸ್ಟಿ-ಮೀಸಲಾತಿ ವಲ್ಸಾದ್ ಲೋಕಸಭಾ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಅನಂತ್ ಪಟೇಲ್ ಅವರನ್ನು ಬೆಂಬಲಿಸಿ ಬುಡಕಟ್ಟು ಪ್ರಾಬಲ್ಯದ ವಲ್ಸಾದ್ ಜಿಲ್ಲೆಯ ಧರಮ್ಪುರ ಗ್ರಾಮದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಿದರು.
मैंने देश के कई प्रधानमंत्री देखे…
इंदिरा जी देश के लिए शहीद हो गईं। राजीव जी को मैं टुकड़ों में घर लाई, वे देश के लिए शहीद हो गए।
मनमोहन सिंह जी इस देश में क्रांति लेकर लाए। विपक्ष में अटल बिहारी बाजपेयी जी भी थे, जो एक सभ्य व्यक्ति थे।
लेकिन मैं दावे से कह सकती हूं कि ये… pic.twitter.com/VITDGxbPBf
— Congress (@INCIndia) April 27, 2024
“ಬಿಜೆಪಿ ನಾಯಕರು ಮತ್ತು ಅಭ್ಯರ್ಥಿಗಳು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅದನ್ನು ನಿರಾಕರಿಸುತ್ತಿದ್ದಾರೆ. ಇದು ಅವರ ಚುನಾವಣಾ ತಂತ್ರವಲ್ಲದೇ ಮತ್ತೆ ಏನೂ ಅಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ನನ್ನ ತಾಯಿಯ ಮಂಗಳಸೂತ್ರ ದೇಶಕ್ಕಾಗಿ ಬಲಿದಾನವಾಗಿದೆ: ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
“ಮೊದಲನೆಯದಾಗಿ, ಅವರು ನಾವು ಯಾವುದನ್ನೂ ಮಾಡುವುದಿಲ್ಲ ಎಂದು ನಿರಂತರವಾಗಿ ನಿರಾಕರಿಸುತ್ತಾ ಇರುತ್ತಾರೋ ಅದನ್ನೇ ತಾವು ಅಧಿಕಾರಕ್ಕೆ ಬಂದ ಬಳಿಕ ಜಾರಿ ಮಾಡುತ್ತಾರೆ. ಸಾಮಾನ್ಯ ಜನರನ್ನು ದುರ್ಬಲಗೊಳಿಸಲು ಮತ್ತು ನಮ್ಮ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳಲು ಅವರು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಾರೆ” ಎಂದು ಕಾಂಗ್ರೆಸ್ ನಾಯಕಿ ಆರೋಪಿಸಿದರು.
BJP के कई नेता कह रहे हैं कि हम संविधान बदलना चाहते हैं, लेकिन मोदी जी कहते हैं ऐसी कोई बात नहीं है।
अगर पिछले 10 वर्षों का इतिहास देखें तो मोदी जी अपने नेताओं से जो भी बुलवाते हैं, सत्ता में आने के बाद वही करते हैं।
जिस संविधान ने आपको अधिकार दिया, उसे ये बदलना चाह रहे हैं… pic.twitter.com/HsTRYWTMi9
— Congress (@INCIndia) April 27, 2024
ಹಣದುಬ್ಬರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, “ಪಿಎಂ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಸೂಪರ್ ಮ್ಯಾನ್ ಆಗಿ ವೇದಿಕೆಗೆ ಆಗಮಿಸುತ್ತಾರೆ. ಆದರೆ ನೀವು ಪಿಎಂ ಮೋದಿ ಅವರು ದುಬಾರಿ ಮ್ಯಾನ್ ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಲೇವಡಿ ಮಾಡಿದರು.
“ಬಿಜೆಪಿ ನಾಯಕರು ಪ್ರಧಾನಿಯನ್ನು ಶಕ್ತಿಶಾಲಿ ಎಂದು ಬಿಂಬಿಸುತ್ತಾರೆ ಮತ್ತು ಅವರು ಚಿಟಿಕೆ ಹೊಡೆದು ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಬಹುದು ಎಂದು ಹೇಳುತ್ತಾರೆ. ಹಾಗಿರುವಾಗ ಬಡತನವನ್ನು ಹೋಗಲಾಡಿಸಲು ಮೋದಿ ಅವರಿಂದ ಏಕೆ ಸಾಧ್ಯವಾಗುತ್ತಿಲ್ಲ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? Fact Check | ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಬಂಗಲೆ ಖರೀದಿಸಿಲ್ಲ!
“ಮೋದಿಯವರ ತವರು ರಾಜ್ಯವಾದ ಗುಜರಾತ್ನಲ್ಲಿ ಮತ್ತು ದೇಶದಲ್ಲಿ ಬುಡಕಟ್ಟು ಜನರು ಹಣದುಬ್ಬರ, ನಿರುದ್ಯೋಗ ಏರುತ್ತಿದೆ. ಸಂಭಾವನೆ ಕಡಿಮೆಯಾಗುತ್ತಿದೆ, ಬುಡಕಟ್ಟು ಜನರ ಭೂಮಿ ನಷ್ಟವಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಇತರ ದೌರ್ಜನ್ಯಗಳಂತಹ ಸಮಸ್ಯೆಗಳಿಂದ ಬುಡಕಟ್ಟು ಜನರ ಬಳಲುತ್ತಿದೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಇನ್ನು ಕಾಂಗ್ರೆಸ್ನ ಪ್ರಣಾಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, “ಇದು ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಮ್ಮ ಪಕ್ಷವು ನಗರ ಪ್ರದೇಶಗಳಿಗೆ ಎಂಜಿಎನ್ಆರ್ಇಜಿಎ ತರಹದ ಯೋಜನೆಯನ್ನು ತರುತ್ತದೆ. ಕುಟುಂಬಸ್ಥರಿಗೆ 100 ದಿನಗಳ ಖಾತರಿಯ ಕೆಲಸ ಸಿಗುತ್ತದೆ” ಎಂದರು.
ವಲ್ಸಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಅನಂತ್ ಪಟೇಲ್ ವಿರುದ್ಧ ಬಿಜೆಪಿ ಧವಲ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಗುಜರಾತ್ನ ಎಲ್ಲಾ 26 ಲೋಕಸಭಾ ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 2014 ಮತ್ತು 2019 ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಗದ್ದುಗೆಯನ್ನು ಪಡೆದುಕೊಂಡಿದೆ.