ಐಪಿಎಲ್ 16ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4ನೇ ಗೆಲುವು ದಾಖಲಿಸಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಲೋ ಸ್ಕೋರಿಂಗ್’ ಪಂದ್ಯದಲ್ಲಿ ಧೋನಿ ಪಡೆ, ಏಡನ್ ಮಾರ್ಕ್ರಾಮ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಎಸ್ಆರ್ಎಚ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 134 ರನ್‌ಗಳಿಸಲಷ್ಟೇ ಶಕ್ತವಾಯಿತು.
ಸುಲಭ ಮೊತ್ತ ಬೆನ್ನಟ್ಟುವ ವೇಳೆ ಚೆನ್ನೈ ತಂಡವೂ ಸಹ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಪರಿಣಾಮ 138 ರನ್‌ಗಳಿಸಲು 18.4 ಓವರ್‌ಗಳ ವರೆಗೂ ಕಾಯಬೇಕಾಯಿತು.
ಆರಂಭಿಕನಾಗಿ ಬಂದು ಅಜೇಯರಾಗುಳಿದ ಡೇವೊನ್ ಕಾನ್ವೆ 57 ಎಸೆತಗಳಲ್ಲಿ 77 ರನ್‌ಗಳಿಸಿದರು. ಋತುರಾಜ್ ಗಾಯಕ್ವಾಡ್ 35 ರನ್‌ಗಳಿಸಿದ್ದ ವೇಳೆ ರನೌಟ್’ಗೆ ಬಲಿಯಾದರು.
ಮೊದಲ ವಿಕೆಟ್‌ಗೆ ಈ ಜೋಡಿ 11 ಓವರ್‌ಗಳಲ್ಲಿ 87 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಚೆನ್ನೈ ಪರ ಉತ್ತಮ ಸ್ಪಿನ್ ದಾಳಿ ಸಂಘಟಿಸಿದ ರವೀಂದ್ರ ಜಡೇಜಾ 22 ರನ್ ನೀಡಿ 3 ವಿಕೆಟ್ ಪಡೆದರೆ, ಉಳಿದ ಮೂವರು ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಚೆನ್ನೈ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹೈದರಾಬಾದ್ ತಂಡ 9ನೇ ಸ್ಥಾನಕ್ಕೆ ಕುಸಿದಿದೆ.