ಭಾರತದ ಮಾನವ ಹಕ್ಕುಗಳ ಮಾನ್ಯತೆಯ ಸ್ಥಿತಿ ಪರಿಶೀಲಿಸಲಿದೆ ಜಿನೀವಾ ಮೂಲದ ಜಿಎಎನ್‌ಎಚ್‌ಆರ್‌ಐ

Date:

Advertisements

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಜಿನೀವಾದಲ್ಲಿ ನಡೆಯುವ ಸಭೆಯಲ್ಲಿ ಸರ್ಕಾರದ ಮಾನವ ಹಕ್ಕುಗಳ ಪ್ರಕ್ರಿಯೆಗಳನ್ನು ಸಮರ್ಥಿಸಲು ತಯಾರಿ ನಡೆಸುತ್ತಿದೆ. ಜೀನಿವಾದಲ್ಲಿ ಎನ್‌ಎಚ್‌ಆರ್‌ಸಿ ಭಾರತದ ‘ಎ ಸ್ಥಾನಮಾನ’ವನ್ನು ಉಳಿಸಿಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.

ಈ ಹಿಂದೆ ಎನ್‌ಎಚ್‌ಆರ್‌ಸಿಯ ರೇಟಿಂಗ್‌ಗಳನ್ನು 2023ರಲ್ಲಿ ತಡೆಹಿಡಿಯಲಾಗಿದೆ. ಮಾನವ ಹಕ್ಕುಗಳ ತನಿಖೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಉಪಸ್ಥಿತಿ, ಲಿಂಗ ಮತ್ತು ಅಲ್ಪಸಂಖ್ಯಾತ ಪ್ರಾತಿನಿಧ್ಯದ ಕೊರತೆಯ ಕಾರಣದಿಂದಾಗಿ ಈ ರೇಟಿಂಗ್ಅನ್ನು ತಡೆಹಿಡಿಲಾಗಿದೆ. ಇನ್ನು ‘ಎ’ ಅಥವಾ ‘ಬಿ’ ರೇಟಿಂಗ್ ನೀಡುವುದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮತ್ತು ಕೆಲವು ಯುಎನ್‌ಜಿಎ ಸಂಸ್ಥೆಗಳಲ್ಲಿ ಎನ್‌ಎಚ್‌ಆರ್‌ಸಿ ಮತ ಚಲಾಯಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಇನ್ನು ವಿಶ್ವಸಂಸ್ಥೆ ಮಾನ್ಯತೆ ಪಡೆದ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟದ ( ಜಿಎಎನ್‌ಎಚ್‌ಆರ್‌ಐ) ಮಾನ್ಯತೆ ಕುರಿತಾದ ಉಪ ಸಮಿತಿಯ (ಎನ್‌ಸಿಎ) ಸಭೆಯು ಮೇ 1ರಂದು ನಡೆಯಲಿದೆ ಎಂದು ದಿ ಹಿಂದೂ ವರದಿ ಮಾಡಿದೆ.

Advertisements

ಇದನ್ನು ಓದಿದ್ದೀರಾ?  ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಮಾನವ ಹಕ್ಕುಗಳ ಉಳಿವಿಗಾಗಿ ಆಂದೋಲನಕ್ಕೆ ಕರೆ

ಎನ್‌ಎಚ್‌ಆರ್‌ಸಿ ಅಧ್ಯಕ್ಷ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರುಣ್ ಕುಮಾರ್ ಮಿಶ್ರಾ ಅವರು ಕಳೆದ ವರ್ಷ ಭಾರತದ ಕುರಿತಾಗಿ ನಡೆದ ಜಿಎಎಎನ್‌ಎಚ್‌ಆರ್‌ಐ ಎಸ್‌ಸಿಎ ಸಭೆಗಾಗಿ ಜೀವಾನಕ್ಕೆ ಪ್ರಯಾಣ ಮಾಡಿದ್ದರು. ಆದರೆ ಈ ವರ್ಷ ಆನ್‌ಲೈನ್ ಮೂಲಕ ಬುಧವಾರ ಪರಿಶೀಲನಾ ಸಭೆಯು ನಡೆಯಲಿದೆ ಎಂದು ವರದಿಯಾಗಿದೆ.

ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಈ ಸಭೆಯಲ್ಲಿ ತನ್ನ ವಾದವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾಡಲು ಈ ಹಿಂದೆ ಪರಿಶೀಲನೆ ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ದೇಶಗಳ ಸಂಪರ್ಕ ಮಾಡಿದೆ ಎಂದು ವರದಿ ಹೇಳಿದೆ.

ನರೇಂದ್ರ ಮೋದಿ ಆಡಳಿತ ಆರಂಭವಾದ ಬಳಿಕ ಭಾರತವು ಎರಡನೇ ಬಾರಿಗೆ ಈ ಸಭೆಯನ್ನು ಎದುರಿಸುವ ಸ್ಥಿತಿಗೆ ಬಂದು ತಲುಪಿದೆ. ಈ ಸಭೆಯ ಬಳಿಕ ಭಾರತವು ಮಾನವ ಹಕ್ಕುಗಳ ವಿಚಾರದಲ್ಲಿ ಬಿ ಗ್ರೇಡ್‌ಗೆ ಇಳಿಯುವ ಸಂಭಾವನೆಯೂ ಕೂಡಾ ಇದೆ. ಭಾರತವು 2006 ಮತ್ತು 2011 ರಲ್ಲಿ ತನ್ನ ಎ ಶ್ರೇಯಾಂಕವನ್ನು ಉಳಿಸಿಕೊಂಡಿದೆ. ಆದರೆ 2016ರಲ್ಲಿ ಶ್ರೇಯಾಂಕ ಕೆಳಕ್ಕಿಳಿದಿದ್ದು ಅದಾದ ಬಳಿಮ ಒಂದು ವರ್ಷದ ನಂತರ ಮತ್ತೆ ತನ್ನ ಶ್ರೇಯಾಂಕವನ್ನು ಭಾರತ ಮರಳಿ ಪಡೆದಿದೆ.

ಇದನ್ನು ಓದಿದ್ದೀರಾ?  ಜೈಲಿನಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

ಮಾರ್ಚ್ 2023 ರಲ್ಲಿ ಎಸ್‌ಸಿಎಯ ಆರು ಅಂಶಗಳ ಸಲ್ಲಿಕೆ ಪ್ರಕಾರ, ಎನ್‌ಎಚ್‌ಆರ್‌ಸಿ ‘ಸರ್ಕಾರದ ಹಸ್ತಕ್ಷೇಪದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು’ ಅಗತ್ಯವಿರುವ ಪರಿಸ್ಥಿತಿಗಳನ್ನು ರಚಿಸಲು ವಿಫಲವಾಗಿದೆ. ಸಲ್ಲಿಕೆಯಲ್ಲಿ, ಸಮಿತಿಯು ತನ್ನ ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸ್ ಅಧಿಕಾರಿಗಳ ಒಳಗೊಳ್ಳುವಿಕೆಗಾಗಿ ಭಾರತವನ್ನು ದೂಷಿಸಿದೆ ಮತ್ತು ಇದನ್ನು ‘ಹಿತಾಸಕ್ತಿ ಸಂಘರ್ಷ’ ಎಂದು ಕರೆದಿದೆ.

ಎನ್‌ಎಚ್‌ಆರ್‌ಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಿಇಒ ಗುಜರಾತ್-ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಭರತ್ ಲಾಲ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯು ಈ ಸಂಸ್ಥೆಯ ‘ಪರಿಣಾಮಕಾರಿತ್ವ’ವನ್ನು ಹೆಚ್ಚಿಸುತ್ತದೆ ಎಂದು ಎನ್‌ಎಚ್‌ಆರ್‌ಸಿ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ.

ಇನ್ನು ಪ್ರಸ್ತುತ, ಎನ್‌ಎಚ್‌ಆರ್‌ಸಿಯ ಇಬ್ಬರು ವೈಯಕ್ತಿಕ ಸದಸ್ಯರಲ್ಲಿ, ಒಬ್ಬ ಸದಸ್ಯ ರಾಜೀವ್ ಜೈನ್ ಅವರು ಐಪಿಎಸ್ ಅಧಿಕಾರಿಯಾಗಿದ್ದು, ಅವರು ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿದ್ದರೆ, ತನಿಖಾ ಮಹಾನಿರ್ದೇಶಕರು, ಸಿಬಿಐನ ಮಾಜಿ ವಿಶೇಷ ನಿರ್ದೇಶಕ ಅಜಯ್ ಭಟ್ನಾಗರ್ ಆಗಿದ್ದಾರೆ. ಆದರೆ ಎನ್‌ಎಚ್‌ಆರ್‌ಸಿಯಲ್ಲಿ ಒಬ್ಬ ಮಹಿಳೆ ಮಾತ್ರ ಇದ್ದರು. ಆದ್ದರಿಂದ ಇಲ್ಲಿ ಬಹುತ್ವ ಮತ್ತು “ಲಿಂಗ ಪ್ರಾತಿನಿಧ್ಯದ ಕೊರತೆಯನ್ನು ಎನ್‌ಸಿಎ ಉಲ್ಲೇಖಿಸಿದೆ. ಅದಾದ ಬಳಿಕ ಡಿಸೆಂಬರ್ 2023 ರಲ್ಲಿ, ಎನ್‌ಎಚ್‌ಆರ್‌ಸಿ ವಿಜಯ ಭಾರತಿ ಸಯಾನಿ ಎಂಬ ಇನ್ನೊಬ್ಬ ಮಹಿಳೆಯನ್ನು ನೇಮಿಸಿದೆ.

ಇದನ್ನು ಓದಿದ್ದೀರಾ?  ಮಣಿಪುರ ಹಿಂಸಾಚಾರ ಕೊನೆಗೊಳಿಸಲು ಭಾರತಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಒತ್ತಾಯ

ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಮತ್ತೊಬ್ಬ ಪದನಿಮಿತ್ತ ಸದಸ್ಯರಾಗಿದ್ದಾರೆ. ಆದರೆ ಭಾರತದ ಅತಿ ದೊಡ್ಡ ಅಲ್ಪಸಂಖ್ಯಾತ ಧರ್ಮಗಳ ಪ್ರತಿನಿಧಿಗಳನ್ನು ಸಮಿತಿ ಹೊಂದಿರದೆ ಇರುವುದನ್ನು ಎಸ್‌ಸಿಎ ಬೊಟ್ಟು ಮಾಡಿದೆ. ಸಮಿತಿಯು ‘ಸಮಾಜದ ವೈವಿಧ್ಯತೆಯನ್ನು’ ಪ್ರತಿನಿಧಿಸಬೇಕು ಎಂದು ಎಸ್‌ಸಿಎ ಸೂಚಿಸಿದೆ.

ಇನ್ನು ಈ ಎನ್‌ಎಚ್‌ಆರ್‌ಸಿಯಲ್ಲಿ ಹೆಚ್ಚಿನ ಸದಸ್ಯರು ರಾಜಕೀಯವಾಗಿ ಆಡಳಿತ ಪಕ್ಷಕ್ಕೆ ಸೇರಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಗುರುತಿಸಿದ್ದಾರೆ. 10 ಸದಸ್ಯರಲ್ಲಿ ಐವರು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಸೇರಿದವರು ಆಗಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಯ ವಕ್ತಾರರಾಗಿದ್ದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ (ಎನ್‌ಸಿಎಸ್‌ಸಿ) ಅಧ್ಯಕ್ಷ ಕಿಶೋರ್ ಮಕ್ವಾನಾ, ಮಧ್ಯಪ್ರದೇಶದ ಬಿಜೆಪಿ ಶಾಸಕರಾಗಿದ್ದ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಅಂತರ ಸಿಂಗ್ ಆರ್ಯ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷರು ಮತ್ತು ಮಾಜಿ ಬಿಜೆಪಿ ಸಂಸದ ಹಂಸರಾಜ್ ಅಹಿರ್, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸದಸ್ಯರಾಗಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಎನ್‌ಎಚ್‌ಆರ್‌ಸಿ ಸದಸ್ಯರಾಗಿದ್ದಾರೆ.

ಇದನ್ನು ಓದಿದ್ದೀರಾ?  ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಅರ್ನಬ್ ಗೋಸ್ವಾಮಿ, ಆರ್.‌ಕನ್ನಡ ಸಂಪಾದಕರ ವಿರುದ್ಧ ಎಫ್‌ಐಆರ್ 

ಆದರೆ ಸಂಸ್ಥೆಯ ಅಧಿಕಾರಿಗಳು ಆರೋಪವನ್ನು ತಿರಸ್ಕರಿಸಿದ್ದು, ರಾಜೀವ್ ಜೈನ್ ಅವರು ಜೈನ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ‘ಅಲ್ಪಸಂಖ್ಯಾತರಾಗಿ ಅರ್ಹತೆ ಹೊಂದಿದ್ದಾರೆ’ ಎಂದು ಹೇಳಿದ್ದಾರೆ. ಹಾಗೆಯೇ ಎಲ್ಲಾ ಸದಸ್ಯರನ್ನು ಭಾರತದ ಶಾಸಕಾಂಗ ಮತ್ತು ಸಾಂವಿಧಾನಿಕ ಪ್ರಕ್ರಿಯೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆಯೂ ಇರುತ್ತದೆ ಎಂದು ಹೇಳಿಕೊಂಡಿದೆ.

ಎಂಇಎ ಮತ್ತು ಎನ್‌ಎಚ್‌ಆರ್‌ಸಿ 120 ಸದಸ್ಯ ದೇಶಗಳ ಸಂಸ್ಥೆಯಾದ ಜಿಎಎನ್‌ಎಚ್‌ಆರ್‌ಐನಲ್ಲಿ ಭಾರತದ ಮಾನ್ಯತೆಯ ಸ್ಥಿತಿಯ ಬಗ್ಗೆ ಔಪಚಾರಿಕವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದೆ. 120 ಸದಸ್ಯ ದೇಶಗಳ ಪೈಕಿ 88 ‘ಎ’ ಸ್ಥಿತಿ ಮಾನ್ಯತೆಯನ್ನು ಹೊಂದಿದ್ದರೆ, 32 ‘ಬಿ’ ಸ್ಥಾನಮಾನವನ್ನು ಹೊಂದಿವೆ. ಅಫ್ಘಾನಿಸ್ತಾನ, ಮ್ಯಾನ್ಮಾರ್, ನೈಜರ್ ಮತ್ತು ರಷ್ಯಾ ದೇಶಗಳಲ್ಲಿನ ಬೆಳವಣಿಗೆಗಳ ಆಧಾರದ ಮೇಲೆ ಮಾನ್ಯತೆ ತೆಗೆದುಹಾಕಲು ಎಸ್‌ಸಿಎ ಶಿಫಾರಸು ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

Download Eedina App Android / iOS

X