ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಮೈತ್ರಿ ಪಕ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿಲುವಿನ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಹಗರಣದಲ್ಲಿ ಭಾಗಿಯಾಗಿರುವ ನಾಯಕನ ಜೊತೆ ಪ್ರಧಾನಿ ಭುಜದ ಮೇಲೆ ಕೈಹಾಕಿ ಫೋಟೋ ತೆಗೆದುಕೊಳ್ಳುತ್ತಾರೆ. 10 ದಿನಗಳ ಹಿಂದೆ ಆತನ ಪರವಾಗಿ ಪ್ರಧಾನಿ ಪ್ರಚಾರ ನಡೆಸುತ್ತಾರೆ. ವೇದಿಕೆಯಲ್ಲಿ ಆತನನ್ನು ಹೊಗಳುತ್ತಾರೆ.ಇಂದು ಆ ನಾಯಕ ದೇಶದಿಂದ ಪರಾರಿಯಾಗಿದ್ದಾನೆ. ಆತನ ಅಮಾನವೀಯ ಅಪರಾಧಗಳನ್ನು ಕೇಳಿದರೆ ಹೃದಯಕ್ಕೆ ಆಘಾತವಾಗುತ್ತದೆ. ಈತ ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ್ದಾನೆ. ಮೋದಿಯವರೆ ಇನ್ನೂ ಏಕೆ ಮೌನವಾಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪವನ್ ಖೇರಾ, “ಬಿಜೆಪಿ ಇನ್ನೂ ಏಕೆ ಮೈತ್ರಿಯನ್ನು ಮುಂದುವರೆಸುತ್ತಿದೆ? ಪೆನ್ ಡ್ರೈವ್‌ನಲ್ಲಿ ಇರುವಂತೆ ದಾಖಲಾಗಿರುವ ವಿಡಿಯೋದಲ್ಲಿ ಸರಣಿ ಅತ್ಯಾಚಾರಗಳು ನಡೆದರೂ ಏಕೆ ಕ್ರಮ ತೆಗೆದುಕೊಂಡಿಲ್ಲ?ವಿಶ್ವದ ಅತ್ಯಂತ ದೊಡ್ಡದಾದ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ರೇವಣ್ಣ ಬಗ್ಗೆ ವಿಷಯ ತಿಳಿದಿದ್ದರೂ ಪ್ರಧಾನಿ ಆತನ ಪರವಾಗಿ ಏಕೆ ಪ್ರಚಾರ ಕೈಗೊಂಡರು? ಪ್ರಜ್ವಲ್ ರೇವಣ್ಣ ಅವರು ಜರ್ಮನಿ ಹೋಗಲು ಸಹಾಯ ಮಾಡಿದ್ದಾರೆಯೆ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿದೆ.
जिस नेता के कंधे पर हाथ रखकर PM फोटो खिंचवाते हैं। जिस नेता का चुनाव प्रचार करने 10 दिन पहले PM स्वयं जाते हैं। मंच पर उसकी प्रशंसा करते हैं। आज कर्नाटका का वह नेता देश से फरार है। उसके जघन्य अपराधों के बारे में सुनकर ही दिल दहल जाता है। सैकड़ों महिलाओं का जीवन जिसने तहस-नहस कर…
— Priyanka Gandhi Vadra (@priyankagandhi) April 29, 2024
