ಹಾಂಕಾಂಗ್ ಹಾಗೂ ಸಿಂಗಾಪುರ ದೇಶಗಳ ನಂತರ ಭಾರತದ ಎಂಡಿಹೆಚ್ ಮಸಾಲ ಪದಾರ್ಥಗಳನ್ನು ಆಸ್ಟ್ರೇಲಿಯಾದಲ್ಲೂ ನಿಷೇಧಿಸುವ ಸಾಧ್ಯತೆಯಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ಆಹಾರ ಸುರಕ್ಷತಾ ಮಂಡಳಿ ‘ಎಂಡಿಹೆಚ್ ಹಾಗೂ ಎವೆರೆಸ್ಟ್ ಸಂಸ್ಥೆಗಳಿಂದ ಮಾರಾಟವಾಗುವ ಕೆಲವು ಮಸಾಲಾ ಪದಾರ್ಥಗಳಲ್ಲಿ ವಿಷಕಾರಿ ಅಂಶವಿರುವ ಆರೋಪಗಳಿವೆ. ಪದಾರ್ಥಗಳನ್ನು ನಿಷೇಧಕ್ಕೆ ಅಗತ್ಯವಿದ್ದರೆ ಸುರಕ್ಷತಾ ಮಂಡಳಿಯು ಪರಿಶೀಲನೆಗೊಳಪಡಿಸಿ ನಿರ್ಧರಿಸುತ್ತದೆ’ ಎಂದು ತಿಳಿಸಿದೆ.
ಹಾಂಕಾಂಗ್ ಎಂಡಿಹೆಚ್ನ ಮೂರು ಮಸಾಲಾ ಪದಾರ್ಥಗಳ ಮಿಶ್ರಣಗಳು ಹಾಗೂ ಒಂದು ಎವೆರೆಸ್ಟ್ ಸಂಸ್ಥೆಯ ಮೀನು ಪದಾರ್ಥ ಮಿಶ್ರಣದ ಮಾರಾಟವನ್ನು ಇದೇ ತಿಂಗಳು ಮಾರಾಟದಿಂದ ಅಮಾನತುಗೊಳಿಸಿತ್ತು. ಸಿಂಗಾಪುರವು ಎವೆರೆಸ್ಟ್ ಮಿಶ್ರಣ ಪದಾರ್ಥವನ್ನು ನಿಷೇಧಿಸಿತ್ತು.
ಮಾನವರು ದೀರ್ಘಕಾಲದ ಸೇವನೆಯಿಂದ ಕ್ಯಾನ್ಸರ್ಗೆ ಕಾರಣವಾಗುವ ಎಥಿಲೀನ್ ಆಕ್ಸೈಡ್ ಅಂಶಗಳು ಹೆಚ್ಚಿನ ಮಟ್ಟದಲ್ಲಿ ಕಂಡುಬಂದ ಕಾರಣ ನಿಷೇಧಿಸಲಾಗಿತ್ತು.
“ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಲು ಅಂತಾರಾಷ್ಟ್ರೀಯ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಕ್ರಮವಹಿಸಲು ಅಗತ್ಯಬಿದ್ದರೆ ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ಆಹಾರ ಜಾರಿ ಸಂಸ್ಥೆಗಳಿಂದ ನಿರ್ಧರಿಸುತ್ತೇವೆ” ಎಂದು ಆಸ್ಟ್ರೇಲಿಯಾ ನ್ಯೂಜಿಲೆಂಡ್ ಆಹಾರ ಗುಣಮಟ್ಟ ಸಂಸ್ಥೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಾಟ್ಸ್ಯಾಪ್ ಯೂನಿವರ್ಸಿಟಿಯ ಭಕ್ತರೂ ಮತ್ತು ಮಹಾಪ್ರಭು ಮೋದಿಯೂ
ಈ ಕ್ರಮಗಳು ನಿಷೇಧಗಳನ್ನು ಒಳಗೊಂಡಿರಲಿದೆ. ಆಸ್ಟ್ರೇಲಿಯಾದಲ್ಲಿ ಆಹಾರ ಪದಾರ್ಥಗಳ ಮಾರಾಟದಲ್ಲಿ ಎಥಿಲಿನ್ ಆಕ್ಸೈಡ್ ಬಳಸಲು ಅನುಮತಿಸಲಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸ್ಟ್ರೇಲಿಯಾದ ಹೇಳಿಕೆಯ ಬಗ್ಗೆ ಎಂಡಿಹೆಚ್ ಮಸಾಲಾ ತಕ್ಷಣಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹಿಂದೆ ನೀಡಿದ ಹೇಳಿಕೆಗಳಲ್ಲಿ ತಮ್ಮ ಪದಾರ್ಥಗಳು ಬಳಕೆಗೆ ಸುರಕ್ಷಿತ ಎಂದು ತಿಳಿಸಿತ್ತು.
ಎಂಡಿಹೆಚ್ ಮಸಾಲಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಯೂರೋಪ್, ಏಷ್ಯಾ ಹಾಗೂ ಉತ್ತರ ಅಮೆರಿಕಾದಲ್ಲೂ ಮಾರಾಟವಾಗುತ್ತಿದೆ.
ಭಾರತೀಯ ಅಧಿಕಾರಿಗಳು ಇತ್ತೀಚಿಗೆ ಎಂಡಿಹೆಚ್ ಹಾಗೂ ಎವೆರೆಸ್ಟ್ ಪದಾರ್ಥಗಳನ್ನು ಪರೀಕ್ಷಿಸುತ್ತಿರುವ ಸಂದರ್ಭದಲ್ಲಿಯೇ ಅಮೆರಿಕದ ಆಹಾರ ಗುಣಮಟ್ಟ ಸಂಸ್ಥೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ.
