ನ್ಯೂಸ್‌ಕ್ಲಿಕ್‌ ಸಂಪಾದಕರ ಬಂಧನಕ್ಕೆ ಅಷ್ಟು ಆತುರವೇನಿತ್ತು: ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ

Date:

Advertisements

ನ್ಯೂಸ್‌ಕ್ಲಿಕ್‌ ಸಂಪಾದಕರಾದ ಪ್ರಭೀರ್ ಪುರ್‌ಕಾಯಸ್ಥ ಅವರನ್ನು ಬಂಧಿಸಿ ಅವರ ವಕೀಲರಿಗೂ ಮಾಹಿತಿ ನೀಡದೆ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲು ಅಷ್ಟು ಆತುರವೇನಿತ್ತು ಎಂದು ದೆಹಲಿ ಪೊಲೀಸ್ ವಿಶೇಷ ಘಟಕವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಹಾಗೂ ಸಂದೀಪ್ ಮೆಹ್ತಾ ಒಳಗೊಂಡ ಪೀಠ ದೆಹಲಿ ಪೊಲೀಸರನ್ನು ಪ್ರಶ್ನಿಸಿತು. “ ನೀವು ಏಕೆ ಸಂಪಾದಕರ ವಕೀಲರಿಗೆ ಮುಂಚಿತವಾಗಿ ತಿಳಿಸಲಿಲ್ಲ? ನೀವು ಹಿಂದಿನ ದಿನದ ಸಂಜೆ ಬಂಧಿಸಿದ್ದೀರಿ. ನೀವು ಒಂದು ದಿನ ಪೂರ್ತಿ ವಕೀಲರಿಗೆ ಮಾಹಿತಿ ನೀಡಿಲ್ಲ. ಮರುದಿನ ಬೆಳಿಗ್ಗೆ 6 ಗಂಟೆಗೆ ಕೋರ್ಟಿಗೆ ಹಾಜರುಪಡಿಸಲು ಅಷ್ಟು ಆತುರವೇನಿತ್ತು” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

“ನೀವು ಬೆಳಿಗ್ಗೆ 10 ಗಂಟೆಗೆ ಹಾಜರುಪಡಿಸಬಹುದಿತ್ತು. ನ್ಯಾಯದ ಸಾಮಾನ್ಯ ತತ್ವದ ಅಗತ್ಯತೆಗಳ ಅನುಸಾರ ಬೆಳಿಗ್ಗೆ 10 ರಿಂದ 11 ಗಂಟೆಯೊಳಗೆ ಹಾಜರುಪಡಿಸಿ, ಅವರ ವಕೀಲರಿಗೂ ಮುಂಚಿತವಾಗಿ ತಿಳಿಸಬಹುದಾಗಿತ್ತು” ಎಂದು ಪೀಠವು ಹೇಳಿತು.

Advertisements

ಪ್ರಭೀರ್ ಪುರ್‌ಕಾಯಸ್ಥ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಮುನ್ನ ಅವರ ವಕೀಲರಿಗೆ ತಿಳಿಸದಿರುವುದಕ್ಕೆ ಸುಪ್ರೀಂ ಕೋರ್ಟ್ ಪೀಠ ಆಶ್ಚರ್ಯ ವ್ಯಕ್ತಪಡಿಸಿತು.

ಬಂಧನದ ಸಮಯದಲ್ಲಿ ತನಿಖಾ ಸಂಸ್ಥೆಯ ನಡವಳಿಕೆಯನ್ನು ಕೋರ್ಟ್ ಪ್ರಶ್ನೆ ಮಾಡಿತು.” ಅನ್ಯಾಯ ಮಾತ್ರ ಆಗಬಾರದು, ಆದರೆ ಇಲ್ಲಿ ಅದು ತೋರುತ್ತದೆ” ಎಂದು ನ್ಯಾಯಾಧೀಶರು ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕಕ್ಷಿದಾರ ನ್ಯೂಸ್‌ಕ್ಲಿಕ್‌ ಸಂಪಾದಕ ಪ್ರಭೀರ್ ಪುರ್‌ಕಾಯಸ್ಥ ಅವರನ್ನು ಬಂಧಿಸಿರುವುದು ಅಕ್ರಮ. ಅವರಿಗೆ ಬಂಧನದ ಯಾವುದೇ ಮಾನದಂಡಗಳನ್ನು ಅನುಸರಿಸಲಾಗಿಲ್ಲ ಎಂದು ಹಿರಿಯ ವಕೀಲ ಕಪಿಲ್ ಸಿಬಾಲ್ ಕೋರ್ಟ್‌ಗೆ ಮನವರಿಕೆ ಮಾಡಿದರು.

“ಕಳೆದ 180 ದಿನಗಳಿಂದ ಸರಿಯಾದ ಅನುಮೋದನೆಗಳೊಂದಿಗೆ ನೀವು ಸಮರ್ಪಕವಾದ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ” ಎಂದು ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಚೀನಾ ನೆರವಿನೊಂದಿಗೆ ನ್ಯೂಸ್‌ ಕ್ಲಿಕ್ ವೇದಿಕೆಯ ಮೂಲಕ ದೇಶ ವಿರೋಧಿ ಪ್ರಚಾರ ನಡೆಸುತ್ತಿರುವ ಆರೋಪದಲ್ಲಿ ಕಳೆದ ವರ್ಷ 2023ರ ಅಕ್ಟೋಬರ್‌ 3 ರಂದು ಪುರ್‌ಕಾಯಸ್ಥ ಅವರನ್ನು ಬಂಧಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬಿಜೆಪಿ ವಿರೋಧಿಗಳನ್ನು ದೇಶ ವಿರೋಧಿಗಳೆಂದು ಆರೋಪಿಸುವುದು , ಬಳಿಕ ಅವರನ್ನು ಬಂಧಿಸಿ ಜೈಲಿನಲ್ಲಿ ಹಾಕುವುದು ತೀರಾ ಖಂಡನೀಯ !

    ಬಿಜೆಪಿ ವಿರೋಧಿಗಳು ಬಿಜೆಪಿ ಸೇರಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವುದು , ಬಳಿಕ ಅವರ ಮೇಲಿದ್ದ ಎಲ್ಲ ಮೊಕದ್ದಮೆಗಳನ್ನು ರದ್ದುಗೊಳಿಸುವುದೂ ಅಷ್ಟೇ ಖಂಡನೀಯ !

    ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಭಾರತ ಕಂಗಾಲಾಗಿದೆ. ಕೊನೆಯದೊಂದು ಅವಕಾಶ ಮತದಾರರ ಮುಂದಿದೆ. ಮತದಾರರು ಎಚ್ಚೆತ್ತುಕೊಂಡು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಮತದಾನ ಮಾಡಬೇಕಾಗಿದೆ‌.

    ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮಾಡೋಣ. ಯಾರು ಸೋತರೂ ಪರವಾಗಿಲ್ಲ ; ದೇಶವನ್ನು ಗೆಲ್ಲಿಸೋಣ. 🇮🇳🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X