ಪ್ರಜ್ವಲ್ ಲೈಂಗಿಕ ಹಗರಣ | ಎಸ್‌ಐಟಿ ಮುಂದೆ ರೇವಣ್ಣ ಹಾಜರಾಗುವ ಸಾಧ್ಯತೆ

Date:

Advertisements

ಎಚ್‌.ಡಿ. ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ತನಿಖೆಗೆ ಹಾಜರಾಗುವಂತೆ ಆರೋಪಿಗಳಾದ ರೇವಣ್ಣ ಮತ್ತು ಪ್ರಜ್ವಲ್‌ಗೆ ನೋಟಿಸ್‌ ನೀಡಿತ್ತು. ಆದರೂ, ತನಿಖೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.

ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ‘ಎ1’ ಆರೋಪಿಯಾಗಿದ್ದು, ಗುರುವಾರ ಎಸ್‌ಐಟಿ ಮುಂದೆ ಹಾಜರಾಗುವ ಸಾಧ್ಯತೆಗಳಿವೆ. ತಮ್ಮ ನಿವಾಸದಲ್ಲಿ ಹೋಮ ಮಾಡಿಸಿರುವ ರೇವಣ್ಣ, ದೇವರ ಮೊರೆ ಹೋಗಿದ್ದು, ಬೆಂಗಳೂರಿಗೆ ಬಂದಿದ್ದಾರೆ.

“ಎಸ್‍ಐಟಿ ತಂಡ ಮನೆಗೆ ನೋಟಿಸ್ ಅಂಟಿಸಿದ್ದಾರೆ. ತನಿಖೆಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತೇವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲವನ್ನೂ ಎದುರಿಸುತ್ತೇನೆ” ಎಂದು ರೇವಣ್ಣ ಹೇಳಿದ್ದಾರೆ.

Advertisements

ಇನ್ನು, ಆರೋಪಿ ಪ್ರಜ್ವಲ್ ಜರ್ಮನಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಎಸ್‌ಐಟಿ ನೋಟಿಸ್‌ ನೀಡಿದರೂ, ವಿಚಾರಣೆ ಹಾಜರಾಗದ ಆರೋಪಿ, “ನಾನು​ ವಿದೇಶದಲ್ಲಿರುವುದರಿಂದ ನನ್ನ ವಕೀಲರ ಮೂಲಕ ಎಸ್​ಐಟಿ ಬಳಿ ಕಾಲಾವಕಾಶ ಕೇಳಿದ್ದೇನೆ. 7 ದಿನ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಎಸ್‌ಐಟಿ ತಂಡ ತನಿಖೆಯನ್ನು ತೀವ್ರಗೊಳಿಸಿದ್ದು, ಮಂಗಳವಾರ ಹಾಸನದಲ್ಲಿ ಸಂತ್ರಸ್ತೆಯರನ್ನು ಭೇಟಿ ಮಾಡಿದೆ. ವಿಚಾರಣೆಗೆ ಸಹಕರಿಸುವಂತೆ ಕೋರಿದೆ. ಆದರೆ, ತನಿಖೆಗೆ ಸಹಕರಿಸಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೆನ್‌ಡ್ರೈವ್ ವಿಚಾರವಾಗಿ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್‌ನ ಮಾಜಿ ಕಾರು ಡ್ರೈವರ್ ಕಾರ್ತಿಕ್, ತಾನು ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾತ್ರವೇ ವಿಡಿಯೋಗಳನ್ನು ನೀಡಿದ್ದೇನೆ. ಬೇರೆ ಯಾರಿಗೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಪೆನ್‌ಡ್ರೈವ್‌ಗಳು ಪತ್ತೆಯಾಗದೆ ಪ್ರಜ್ವಲ್‌ ರೇವಣ್ಣ ಒಬ್ಬರೇ ಆರೋಪಿ ಎಂದು ಹೇಳಲಾಗಿತ್ತು. ಆದರೆ, ಈ ಕೃತ್ಯಗಳಲ್ಲಿ ಮಾಜಿ ಸಚಿವ ರೇವಣ್ಣ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಓರ್ವ ಸಂತ್ರಸ್ತೆ ರೇವಣ್ಣ ಅವರನ್ನೇ ಎ1 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಯಾವುದೇ ವ್ಯಕ್ತಿ ಆರೋಪಿ ಅಂತ ಗೊತ್ತಾಗುತ್ತಿರುವಾಗಲೇ ಪೊಲೀಸ್ರು ಆರೋಪಿಗಳನ್ನು ಒದ್ದು ಒಳಗೆ ಹಾಕ್ತಾರೆ. ಅದ್ರೆ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಎ1 ಹಾಗು ಎ2 ಆರೋಪಿಗಳಾದ್ರೂ ಏಕೆ ಪೊಲೀಸ್ರು ಒದ್ದು ಒಳಗೆ ಹಾಕ್ತಿಲ್ಲ. ಬಡವರಿಗೆ ಒಂದು ಉಳ್ಳುವರಿಗೆ ಒಂದು ಕಾನೂನೇ… ಈ ತಾರತಮ್ಯ ಏಕೆ..

  2. ಯಾವುದೇ ವ್ಯಕ್ತಿ ಆರೋಪಿ ಅಂತ ಗೊತ್ತಾಗುತ್ತಿರುವಾಗಲೇ ಪೊಲೀಸ್ರು ಆರೋಪಿಗಳನ್ನು ಒದ್ದು ಒಳಗೆ ಹಾಕ್ತಾರೆ. ಅದ್ರೆ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಎ1 ಹಾಗು ಎ2 ಆರೋಪಿಗಳಾದ್ರೂ ಏಕೆ ಪೊಲೀಸ್ರು ಒದ್ದು ಒಳಗೆ ಹಾಕ್ತಿಲ್ಲ. ಬಡವರಿಗೆ ಒಂದು ಉಳ್ಳುವರಿಗೆ ಒಂದು ಕಾನೂನೇ… ಈ ತಾರತಮ್ಯ ಏಕೆ..ಬಡ ಹೆಣ್ಣುಮಕ್ಕಳು ಅಂದ್ರೆ ಈ ಬೋಳಿ ಮಕ್ಕಳಿಗೆ ತಮ್ಮ ಇಷ್ಟ ಪೂರೈಸಿಕೊಳ್ಳು ಅಗ್ಗದ ವಸ್ತುಗಳಾಗಿಬಿಟ್ಟಿವೆ….

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X