ಕೋವಿಶೀಲ್ಡ್ ಅಡ್ಡಪರಿಣಾಮದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಜನರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರಮಾಣಪತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಈಗ ಮಾಯವಾಗಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಪ್ರಮಾಣಪತ್ರದಿಂದ ಪ್ರಧಾನಿ ಚಿತ್ರ ತೆಗೆದಿರುವುದಕ್ಕೆ ನೆಟ್ಟಿಗರು ಇದು ಕೋವಿಶೀಲ್ಡ್ ಎಫೆಕ್ಟ್ ಎಂದು ಗೇಲಿ ಮಾಡಿದ್ದಾರೆ. ಇನ್ನೂ ಕೆಲವರು ಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮೋದಿ ಚಿತ್ರ ತೆಗೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ.
Why @narendramodi picture is now missing in COVID VACCINATION CERTIFICATE? pic.twitter.com/Q529t1uNkR
— Sathivel Arumugam (@mallaisakthi) May 2, 2024
ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ ಕೊರೊನಾ ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಅಸ್ಟ್ರಾಜೆನೆಕಾವು ಯುಕೆ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದೆಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ
ಈ ಬೆನ್ನಲ್ಲೆ ತಾವು ಪಡೆದ ಲಸಿಕೆ ಯಾವುದೆಂದು ಪರಿಶೀಲಿಸುವ ನಿಟ್ಟಿನಲ್ಲಿ ಜನರು ಲಸಿಕೆ ಪ್ರಮಾಣಪತ್ರವನ್ನು ಪರಿಶೀಲಿಸಿದ್ದು, ಪ್ರಧಾನಿ ಮೋದಿ ಚಿತ್ರದಲ್ಲಿ ಪ್ರಮಾಣಪತ್ರದಲ್ಲಿ ಮಾಯವಾಗಿರುವುದು ಕಂಡು ಬಂದಿದೆ.
ಕೋವಿಶೀಲ್ಡ್ ಲಸಿಕೆಯಿಂದಾಗಿ ಅಪರೂಪದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗಬಹುದು. ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗಕ್ಕೆ ಲಸಿಕೆ ಕಾರಣವಾಗಬಹುದು ಎಂದು ಯುಕೆ ನ್ಯಾಯಾಲಯದಲ್ಲಿ ಅಸ್ಟ್ರಾಜೆನೆಕಾವು ಒಪ್ಪಿಕೊಂಡಿದೆ.
I have Covid vaccination Certificate.During Vaccination time and this election time. I downloaded latest one and share the same. I found photo disappeared of Pm sir ? I shocked why it happened?@Covishield @NoMorePhoto@Storiesofinjury pic.twitter.com/vwlSStb9Kr
— Rahul Kumar Gupta🇮🇳 (@rahulprudent) May 2, 2024
ಇದಾದ ಬೆನ್ನಲ್ಲೇ ಪ್ರಧಾನಿ ಮೋದಿ ಚಿತ್ರ ಲಸಿಕೆ ಪ್ರಮಾಣಪತ್ರದಲ್ಲಿ ಮಾಯವಾಗಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ತೆಗೆದುಹಾಕಲಾಗಿದೆ, ಯಾಕೆ” ಎಂದು ನೆಟ್ಟಿಗರು ಕೇಳಿದ್ದಾರೆ. ಇದನ್ನು ಕೆಲವು ನೆಟ್ಟಿಗರು ಕೋವಿಶೀಲ್ಡ್ ಎಫೆಕ್ಟ್ ಎಂದರೆ ಇನ್ನೂ ಕೆಲವರು ಚುನಾವಣಾ ನೀತಿ ಸಂಹಿತೆ ಎಂದು ಹೇಳಿದ್ದಾರೆ.
ಚುನಾವಣಾ ನೀತಿ ಸಂಹಿತೆಯೇ?
ಲೋಕಸಭೆ ಚುನಾವಣೆ 2024ರ ಮಾದರಿ ನೀತಿ ಸಂಹಿತೆ ಕಾರಣದಿಂದಾಗಿ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
भारत कर रहा मजबूत प्रदर्शन,
भारत की हर पारी धुआंधार!#ModiKiGuarantee#PhirEkBaarModiSarkar pic.twitter.com/66nLCnwZ7r— BJP Bihar (@BJP4Bihar) May 1, 2024
ಆದರೆ ನೆಟ್ಟಿಗರು ಹೇಳುವುದು ಏನು?
ಕೋವಿಶೀಲ್ಡ್‌ನಿಂದಾಗಿ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಸುದ್ದಿಯಾದ ಮರುದಿನವೇ ಬಿಜೆಪಿ ಬಿಹಾರ ಎಕ್ಸ್ ಪೇಜ್‌ನಲ್ಲಿ ಕೋವಿಡ್ ಲಸಿಕೆಯ ಬಗ್ಗೆ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. “ಭಾರತ ಬಲಿಷ್ಠವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಪ್ರತಿ ತಿರುವು ಅದ್ಭುತವಾಗಿತ್ತು” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಈ ಪೋಸ್ಟ್‌ನ ಕಾಮೆಂಟ್‌ನಲ್ಲಿ ಮೀಮ್ಸ್‌ಗಳ ಸುರಿಮಳೆಯಾಗಿದೆ. “ಉಚಿತ ಲಸಿಕೆ ಎಂದು ಹೇಳಿಕೊಂಡು ನಮಗೆ ವಿಷದ ಇಂಜೆಕ್ಷನ್ ನೀಡಿದ್ದಾರೆ” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿ ಚಿತ್ರವನ್ನು ತೆಗೆದಿರುವುದನ್ನು ಕಾಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ಇದಕ್ಕೆ ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದ ಸುದ್ದಿ ಕಾರಣ ಎಂದು ಹೇಳಿದ್ದಾರೆ. ಆದರೆ ಈ ನಡುವೆ ಏನೇ ಆದರೂ ನಾವು ಮೋದಿ ಪರ ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ!