ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರು ಬೇಸಿಗೆಯಿಂದ ಜನರು ಬಸವಳಿದಿದ್ದರು. ಕಳೆದ ಕೆಲವು ದಿನಗಳಿಂದ ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ನಿಂದ 38 ಡಿಗ್ರಿ ಸೆಲ್ಸಿಯಸ್‌ಗೆ ದಾಖಲಾಗಿತ್ತು. ಯಾಗಾವ ಮಳೆಯಾಗುತ್ತದೋ ಎಂದು ಬೆಂಗಳೂರಿಗರು ಎದುರು ನೋಡುತ್ತಿದ್ದರು. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮೇ 2ರಂದು ಸಾಯಂಕಾಲ ಮಳೆಯ ದರ್ಶನವಾಗಿದೆ.
ಬೆಂಗಳೂರಿನ ಫ್ರೇಜರ್ ಟೌನ್, ರಿಚ್ಮಂಡ್ ಟೌನ್, ರಾಜಾಜಿನಗರ ಸೇರಿದಂತೆ ಹಲವೆಡೆ ದಿಢೀರ್ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ಬೆಂದಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ತಾಪಮಾನ ಹೆಚ್ಚಳದಿಂದ ರಾಜಧಾನಿಯಲ್ಲಿ ಜನರು ಮನೆಯಿಂದ ಹೊರಬರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಜನರು ಈ ಬಿಸಿಲಿನ ತಾಪಕ್ಕೆ ಬೇಸತ್ತು. ತಂಪಾದ ಪಾನೀಯಗಳಿಗೆ ಮೊರೆ ಹೋಗಿದ್ದರು.
And the Rain is Back in Bengaluru ..
Thunder, lightning and Rain..
Back to the familiar weather~ Nature to the rescue
~ Manifesting more of these
~ Bangalore Rains pic.twitter.com/IAJRAzihfT— Arif (@mdarifkhan87) May 2, 2024
ಈ ಸುದ್ದಿ ಓದಿದ್ದೀರಾ? ವಿಪ್ರೋಗೆ ಪ್ರತಿ ದಿನ 3 ಲಕ್ಷ ಲೀಟರ್ ಝೀರೋ ಬ್ಯಾಕ್ಟೀರಿಯಾ ಸಂಸ್ಕರಿಸಿದ ನೀರು ಸರಬರಾಜು
ಮೇ 2ರಂದು ಸಾಯಂಕಾಲ ಆಗಸದಲ್ಲಿ ಮೋಡದ ವಾತಾವರಣ ತುಂಬಿತ್ತು. ಇದೀಗ, ಜಿಟಿ ಜಿಟಿ ಮಳೆ ಆರಂಭವಾಗಿದೆ. ಏಕಾಏಕಿ ಮಳೆಯಾದ ಹಿನ್ನೆಲೆ, ವಾಹನ ಸವಾರರು ಪರದಾಡುವಂತಾಗಿದೆ.