ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲಿಸಿದ್ದು, ಪ್ಲೇ ಆಫ್ ಕನಸಿಗೆ ತಣ್ಣೀರೆರಚಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಕೆಕೆಆರ್ ತಂಡವು, ಮುಂಬೈ ಪರ ಜಸ್ಪ್ರೀತ್ ಬುಮ್ರಾ ಮತ್ತು ನುವಾನ್ ತುಷಾರ ಬೌಲಿಂಗ್ ದಾಳಿಯ ನಡುವೆಯೂ ನಿಗದಿತ 20 ಓವರ್ಗಳಲ್ಲಿ ವೆಂಕಟೇಶ್ ಅಯ್ಯರ್ ಗಳಿಸಿದ ಅರ್ಧಶತಕದ ನೆರವಿನಿಂದ ಕೆಕೆಆರ್ 169 ರನ್ ಗಳಿಸಲಷ್ಟೆ ಶಕ್ತವಾಗಿತ್ತು.
Mitchell Starc with the final wicket for @KKRiders 💪
Watch the recap on @StarSportsIndia and @JioCinema 💻📱#TATAIPL | #MIvKKR pic.twitter.com/aUz2emSPdV
— IndianPremierLeague (@IPL) May 3, 2024
ಈ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯಾ ನೇತೃತ್ವದ ಮುಂಬೈ ತಂಡ, ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ಗೆ 145 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಆ ಮೂಲಕ 24 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕೆಕೆಆರ್ ತಂಡದ ಕರಾರುವಕ್ಕಾದ ಬೌಲಿಂಗ್ಗೆ ರನ್ ಗಳಿಸಲು ಪರದಾಡಿದ ಮುಂಬೈ ಬ್ಯಾಟರ್ಗಳು, ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು.
Mumbai Indians' qualification chance for IPL 2024 Playoffs is 0.0006%. pic.twitter.com/jKPLc7T3lV
— Mufaddal Vohra (@mufaddal_vohra) May 3, 2024
ಮುಂಬೈ ಪರ ಆರಂಭಿಕರಾಗಿ ಕಣಕ್ಕೀಳಿದ ಇಶಾನ್ ಕಿಶಾನ್ ಮತ್ತು ರೋಹಿತ್ ಶರ್ಮಾ ಜೋಡಿ ಮತ್ತೆ ಉತ್ತಮ ರನ್ ಕಲೆ ಹಾಕುವುದಲ್ಲಿ ಎಡವಿತು. ಒಂದು ಸಿಕ್ಸರ್ ಹಾಗೂ ಬೌಂಡರಿಗಷ್ಟೆ ಸೀಮಿತವಾದ ಇಶಾನ್ (13) ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ರೋಹಿತ್ ಶರ್ಮಾ ಕೂಡ 11 ರನ್ಗೆ ಸುನಿಲ್ ನರೈನ್ ಅವರಿಗೆ ಔಟ್ ಆದರು.
ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ ಒಂದು ರನ್ಗೆ ಆಂಡ್ರೆ ರಸೆಲ್ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು.
ಮುಂಬೈನ ಸ್ಟಾರ್ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅರ್ಧಶತಕ ಗಳಿಸಿ(56 ರನ್) ತಂಡವನ್ನು ಗೆಲುವಿಮ ಕಡೆಗೆ ಕೊಂಡೊಯ್ಯಲು ಶ್ರಮಿಸಿದರು. ಆದರೆ ಅದಕ್ಕೆ ಆ್ಯಂಡ್ರೂ ರಸೆಲ್ ಅವಕಾಶ ನೀಡಲಿಲ್ಲ. ತನ್ನ ಬೌಲಿಂಗ್ನಲ್ಲಿ ಸೂರ್ಯ ಕುಮಾರ್ ಕುಮಾರ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಕೆಕೆಆರ್ ಕಡೆಗೆ ತಿರುಗಿಸಿದರು.
ಕೊನೆಯಲ್ಲಿ ಮುಂಬೈ ಗೆಲುವಿಗೆ ಹೋರಾಟ ನಡೆಸಿದ ಟಿಮ್ ಡೇವಿಡ್ 24 ರನ್ಗಳಿಸಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ನೀಡಿ ಹೊರ ನಡೆದರು. ಬಳಿಕ ಬಂದ ಪಿಯೂಷ್ ಚಾವ್ಲಾ ಹಾಗು ಕ್ರೀಸ್ನಲ್ಲಿದ್ದ ಜೆರಾಲ್ಡ್ ಕೋಟ್ಜಿ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಹೀಗಾಗಿ ಮುಂಬೈ 18.5 ಓವರ್ಗಳಲ್ಲಿ ಅಲೌಟ್ ಆಗುವ ಮೂಲಕ ಕೆಕೆಆರ್ ಎದುರು ಪಂದ್ಯವನ್ನು 24 ರನ್ಗಳಿಂದ ಸೋಲಬೇಕಾಯಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬರೋಬ್ಬರಿ 12 ವರ್ಷಗಳ ಬಳಿಕ ಕೆಕೆಆರ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.
KKR DEFEATS MUMBAI INDIANS FOR THE FIRST TIME IN 12 YEARS AT THE WANKHEDE STADIUM. 🤯🔥 pic.twitter.com/D7IMwpCAD1
— Mufaddal Vohra (@mufaddal_vohra) May 3, 2024
ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ, ಸುನಿಲ್ ನರೈನ್, ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ಗೆಲುವಿನಲ್ಲಿ ತಮ್ಮದೇ ಕೊಡುಗೆ ನೀಡಿದರು.