ನರೇಂದ್ರ ಮೋದಿಗೆ ಅಧಿಕಾರದ ಅಮಲೇರಿದ್ದು, ಅವರ ಸುತ್ತಲಿನ ಜನರು ಅವರನ್ನು ಕಂಡರೆ ಭಯಬೀಳುತ್ತಾರೆ. ಏನಾಗಬೇಕು ಎಂಬುದನ್ನು ಯಾರೊಬ್ಬರು ಅವರಿಗೆ ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್‌ನ ಬನಸ್ಕತಾದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಅವರೊಬ್ಬ ಅರಮನೆಯಲ್ಲಿ ವಾಸಿಸುವ ಮಹಾರಾಜ. ಯಾರಾದರೂ ಮಾತನಾಡಿದರೆ ಅವರ ಧ್ವನಿಯನ್ನು ಅಡಗಿಸಿಬಿಡುತ್ತಾರೆ ಎಂದು ಹೇಳಿದರು.
“ಪ್ರಧಾನಿ ಮೋದಿ ನನ್ನ ಸಹೋದರನನ್ನು ರಾಜ ಎಂದು ಕರೆದಿದ್ದಾರೆ. ನಾನು ನಿಮಗೆ ಹೇಳ ಬಯಸುತ್ತೇನೆ, ನನ್ನ ಸಹೋದರ 4 ಸಾವಿರ ಕಿ.ಮೀ ನಡೆದು ದೇಶದ ಜನರನ್ನು ಭೇಟಿ ಮಾಡಿ ಅವರ ಜೀವನದ ಸಮಸ್ಯೆಗಳೇನು ಕೇಳಿದ್ದಾರೆ. ಮತ್ತೊಂದು ಕಡೆ ಅರಮನೆಗಳಲ್ಲಿ ವಾಸಿಸುವ ಮಹಾರಾಜ ನರೇಂದ್ರ ಮೋದಿ ಅಸಹಾಯಕ ರೈತರು ಹಾಗೂ ಮಹಿಳೆಯರನ್ನು ಸ್ಥಿತಿಗಳನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಇತ್ತೀಚಿಗೆ ಜಾರ್ಖಂಡ್‌ನ ಪಲಾಮುವಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಲು ಬಯಸುತ್ತಾರೆ. ಆದರೆ ಈಗ ಬಲಿಷ್ಠ ಭಾರತಕ್ಕೆ ಬಲಿಷ್ಠ ಸರ್ಕಾರ ಅಗತ್ಯವಿದೆ ಎಂದು ಹೆಳಿದ್ದರು.
“ ಈ ಮೊದಲು ಭಯೋತ್ಪಾದಕರು ಅಮಾಯಕರನ್ನು ಸುಲಭವಾಗಿ ಹತ್ಯೆ ಮಾಡುತ್ತಿದ್ದರು. ಆಗ ಸರ್ಕಾರವು ಪಾಕಿಸ್ತಾನಕ್ಕೆ ಪ್ರೇಮ ಪತ್ರಗಳನ್ನು ಬರೆಯುತ್ತಿತ್ತು. ಪತ್ರಗಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಹೆಚ್ಚು ಉಗ್ರಗಾಮಿಗಳನ್ನು ಕಳಿಸುತ್ತಿತ್ತು. ನಿಮ್ಮ ಒಂದು ಮತದಿಂದ ನಾನು ಅದನ್ನು ನಿಲ್ಲಿಸಿದ್ದೇನೆ” ಎಂದು ಹೇಳಿದ್ದರು.

ಹೋಗಮ್ಮ ಸುಮ್ನನೆ ಕತೆ ಹೇಳಬೇಡ ಮೋದಿಯವರಿಗೆ ಅಧಿಕಾರ ಮದ ಇಲ್ಲಾ ಬದಲಾಗಿ ನಿನಗೇ ಇದೇ ನಿನ್ನ ಕುಟುಂಬ ನಿನ್ನ ಪಕ್ಷಕ್ಕೆ ಇದೇ ಅದನ್ನು ಮೋದಿಯವರು ಇಳಿಸಿದ್ದಾರೆ ನಿಮ್ಮಗಳ ನೈಜ ರೂಪ ದೇಶದ ಜನರಿಗೆ ತೋರಿಸಿದ್ದಾರೆ