ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ

Date:

ಹರದನಹಳ್ಳಿಯ ಕಡು ಬಡತನದ ಕೃಷಿ ಕುಟುಂಬದಿಂದ ಬಂದ ಎಚ್.ಡಿ. ದೇವೇಗೌಡರನ್ನು, ಹಾಸನ ಜಿಲ್ಲೆಯ ಜನ ಆರಾಧಿಸಿದ್ದರು. ಆರು ಬಾರಿ ಶಾಸಕರನ್ನಾಗಿ, ಐದು ಬಾರಿ ಸಂಸದರನ್ನಾಗಿ ಆರಿಸಿ ಮೆರೆಸಿದ್ದರು. ರಾಷ್ಟ್ರದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯಲ್ಲಿ ಕೂರಿಸಿ, ಜಿಲ್ಲೆಯ ಹೆಮ್ಮೆ ಎಂದು ಭಾವಿಸಿದ್ದರು. ಇಂತಹ ಹಾಸನ ಜಿಲ್ಲೆಗೆ ಗೌಡರು ಕೊಟ್ಟ ಕೊಡುಗೆ ಏನು?

ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ಲೈಂಗಿಕ ಹಗರಣ, ದಿನ ಕಳೆದಂತೆ ದಾರಿ ತಪ್ಪುತ್ತಿದೆ. ರಾಜಕೀಯ ಪಕ್ಷಗಳು ಈ ಗಂಭೀರ ಪ್ರಕರಣವನ್ನು ಕೂಡ ಚುನಾವಣೆಯ ವಸ್ತುವನ್ನಾಗಿಸಿಕೊಂಡು, ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ. ಕೊಚ್ಚೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿವೆ.

- Advertisement -

ಲೈಂಗಿಕ ಪ್ರಕರಣದ ಮುಖ್ಯ ಆರೋಪಿ ಪ್ರಜ್ವಲ್ ರೇವಣ್ಣ ದೇಶದಿಂದ ಪಲಾಯನ ಮಾಡಿದ್ದಾರೆ. ಇದಕ್ಕೆ ಉತ್ತರಿಸಬೇಕಾದ ಹೊಳೆನರಸೀಪುರದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಕೈಗೆ ಸಿಗುತ್ತಿಲ್ಲ. ಪ್ರಜ್ವಲ್ ಪ್ರಕರಣ ಕುರಿತು ಮಾತನಾಡಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಯಾರೊಬ್ಬರೂ ಮುಂದೆ ಬರುತ್ತಿಲ್ಲ, ತುಟಿಬಿಚ್ಚುತ್ತಿಲ್ಲ. ಚುನಾವಣಾ ಸಮಯವಾದ್ದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಬಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಸಲ ಸಿಟ್ಟಿನಿಂದ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಯಾರೂ ಒಪ್ಪದ, ಸಹಿಸದ, ಪರ ವಹಿಸಿ ಮಾತನಾಡಲಾಗದ ಕೊಳಕು ಕೃತ್ಯ. ಈ ಕೃತ್ಯ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಪ್ರೀತಿಯ ಫಲವಲ್ಲವೇ?

ಹರದನಹಳ್ಳಿಯ ಕಡು ಬಡತನದ ಕೃಷಿ ಕುಟುಂಬದಿಂದ ಬಂದ ಎಚ್.ಡಿ. ದೇವೇಗೌಡರನ್ನು, ಹಾಸನ ಜಿಲ್ಲೆಯ ಜನ ಆರಾಧಿಸಿದ್ದರು. ಆರು ಬಾರಿ ಶಾಸಕರನ್ನಾಗಿ, ಐದು ಬಾರಿ ಸಂಸದರನ್ನಾಗಿ ಆರಿಸಿ ಮೆರೆಸಿದ್ದರು. ರಾಷ್ಟ್ರದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯಲ್ಲಿ ಕೂರಿಸಿ, ಜಿಲ್ಲೆಯ ಹೆಮ್ಮೆ ಎಂದು ಭಾವಿಸಿದ್ದರು.

ಇಂತಹ ಹಾಸನ ಜಿಲ್ಲೆಗೆ ಗೌಡರು ಕೊಟ್ಟ ಕೊಡುಗೆ ಏನು?

1962ರಿಂದ 1985ರವರೆಗೆ, 6 ಸಲ ಶಾಸಕರಾಗಿ ಗೆದ್ದು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದ ಗೌಡರು, ತಮ್ಮನ್ನು ನಿರಂತರವಾಗಿ ಗೆಲ್ಲಿಸಿದ ಕಾರ್ಯಕರ್ತರನ್ನು ಕಡೆಗಣಿಸಿದರು. ವಂಶಪಾರಂಪರ್ಯ ರಾಜಕಾರಣಕ್ಕೆ ಮಣೆ ಹಾಕಿ, ಎಸ್ಎಸ್ಎಲ್‌ಸಿ ಫೇಲಾದ ಪುತ್ರ ರೇವಣ್ಣನವರಿಗೆ ಹೊಳೆನರಸೀಪುರ ಕ್ಷೇತ್ರವನ್ನು 1994ರಲ್ಲಿ ಬಳುವಳಿಯಾಗಿ ಕೊಟ್ಟರು. ರೇವಣ್ಣ ಗೆದ್ದು ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತುತ್ತಿದ್ದಂತೆಯೇ, ಗೌಡರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದರು. ರಾಜ್ಯದ ನೀತಿ ನಿರೂಪಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐಎಎಸ್, ಐಪಿಎಸ್‌ಗಳಂಥ ಉನ್ನತ ಅಧಿಕಾರಿಗಳು ರೇವಣ್ಣರಿಗೆ ಎದ್ದು ನಿಂತು ನಮಸ್ಕರಿಸತೊಡಗಿದರು.

1996ರಲ್ಲಿ ದೇವೇಗೌಡರು ಪ್ರಧಾನಿಗಳಾಗುತ್ತಿದ್ದಂತೆ, ಅಧಿಕಾರ ತರುವ ಅವಕಾಶಗಳನ್ನು ಕಂಡ ರೇವಣ್ಣ, ನಾವು ಜನರನ್ನು ಆಳಲಿಕ್ಕೆ ಹುಟ್ಟಿರುವವರು ಎಂಬ ಅಹಂಕಾರಕ್ಕೆ ಒಳಗಾದರು. ಮೂರನೇ ಬಾರಿಗೆ ಶಾಸಕರಾಗಿ ಗೆಲ್ಲುತ್ತಿದ್ದಂತೆ, 2004ರಲ್ಲಿ ಲೋಕೋಪಯೋಗಿ ಸಚಿವರಾದರು. 2006ರಲ್ಲಿ ಸಹೋದರ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ, ರೇವಣ್ಣನವರೇ ಅನಧಿಕೃತ ಸಿಎಂ ಆದರು. ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಹಾಸನಕ್ಕೆ ಹರಿಸಿ, ಅಭಿವೃದ್ಧಿಯ ಹರಿಕಾರ ಎನಿಸಿಕೊಂಡರು. 1994ರಿಂದ 2024ರವರೆಗೆ, ಕೇವಲ 30 ವರ್ಷಗಳ ಅಂತರದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದರು, ಭಾರೀ ಶ್ರೀಮಂತರ ಪಟ್ಟಿಗೆ ಸೇರಿಹೋದರು.

ಪ್ರಜೆಗಳು, ಪ್ರಜಾಪ್ರಭುತ್ವ, ಸಂವಿಧಾನ, ನೆಲದ ಕಾನೂನು, ಉತ್ತರದಾಯಿತ್ವದ ಬಗ್ಗೆ ಪುತ್ರ ರೇವಣ್ಣರಿಗೆ ತಿಳಿ ಹೇಳಬೇಕಾದ ದೇವೇಗೌಡರು, ಪುತ್ರನ ಬೆಳವಣಿಗೆ ಕಂಡು ಬೆರಗಾದರು. ರೇವಣ್ಣನವರ ಮಡದಿ ಭವಾನಿ, ಪುತ್ರ ಪ್ರಜ್ವಲ್ ಮತ್ತು ಸೂರಜ್ ರಾಜಕಾರಣಕ್ಕಿಳಿದು, ಹಾಸನ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಂಡಾಗ, ಸರಿ ಎಂದರು. ವಿರೋಧ ಪಕ್ಷವಿಲ್ಲದಂತೆ ಮಾಡಿ, ವಿರುದ್ಧ ಮಾತನಾಡಿದವರನ್ನು ಮಟ್ಟಹಾಕಿ, ಕುಟುಂಬದವರಿಗೇ ಕುರ್ಚಿ ಕಲ್ಪಿಸಿಕೊಟ್ಟಾಗ, ಕಣ್ಮುಚ್ಚಿ ಕೂತರು.

ಇದನ್ನು ಓದಿದ್ದೀರಾ?: ಗುಜರಾತಿನ ವ್ಯಾಪಾರಿಗಳ ಕೈಗೆ ಕೋಲು: ಇದಲ್ಲವೇ ದೇವೇಗೌಡರ ದುರಂತ?

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಹಾಸನ ಸಾಮ್ರಾಜ್ಯಕ್ಕೆ ರೇವಣ್ಣರೇ ಸಾಮಂತರಾದರು. ಅಪ್ಪ ಮತ್ತು ತಾತ ಕಟ್ಟಿದ್ದ ಹಾಸನವೆಂಬ ಭದ್ರಕೋಟೆಗೆ 2019ರಲ್ಲಿ, ಕೇವಲ 29ರ ಹರೆಯದ ಪ್ರಜ್ವಲ್ ಸಂಸದನಾಗಿ ಆಯ್ಕೆಯಾಗುವ ಮೂಲಕ ಮರಿ ಮಹಾರಾಜನಾದ.

ಹುಟ್ಟುತ್ತಲೇ ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡ ಬಂದ ಪ್ರಜ್ವಲ್‌ಗೆ ಹಸಿವು, ಅವಮಾನ, ಬಡತನದ ಬದುಕೇ ಗೊತ್ತಿಲ್ಲ. ಜೊತೆಗೆ ದೇಶದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಬಗ್ಗೆ ಭಯವಿಲ್ಲ. ಪತ್ರಿಕಾಂಗವೂ ಪ್ರಶ್ನಿಸುತ್ತಿಲ್ಲ. ಅಧಿಕಾರ, ಹಣ ಮತ್ತು ಜಾತಿ ಮದವೇರಿ, ಅಸಹಾಯಕ ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಂಡರೂ, ಯಾರೂ ಕೇಳಲಿಲ್ಲ.

ಇದೆಲ್ಲವೂ ಗೊತ್ತಿದ್ದ ದೇವೇಗೌಡರು ಪ್ರಜ್ವಲ್ ಕರೆದು ಕಿವಿಹಿಂಡಲಿಲ್ಲ. ಅಭ್ಯರ್ಥಿಯಾಗಬೇಡ ಎಂದು ಹೇಳಲಿಲ್ಲ.

ರಾಷ್ಟ್ರಪಿತ ಮಹಾತ್ಮಾ ಗಾಂಧಿ, ‘ನಾನು ಹತಾಶನಾದಾಗಲೆಲ್ಲ ಒಂದನ್ನು ಜ್ಞಾಪಿಸಿಕೊಳ್ಳುತ್ತೇನೆ- ಈ ಜಗತ್ತಿನಲ್ಲಿ ಸತ್ಯ ಮತ್ತು ಪ್ರೀತಿ ಎರಡೇ ಗೆಲ್ಲುವುದು. ಕೊಲೆಗಡುಕರು, ಪಾಪಿಗಳು ಅಜೇಯರಂತೆ ಕಾಣಬಹುದು. ಕೊನೆಗೊಂದು ದಿನ ನಾಶವಾಗುತ್ತಾರೆ. ಈ ಬಗ್ಗೆ ಚಿಂತಿಸು’ ಎಂದಿದ್ದಾರೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?

ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್‌, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...

ಈ ದಿನ ಸಂಪಾದಕೀಯ | ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ

ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ....

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಕೊಲೆಗಾರ, ‘ಮೋಶಾ’ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ವಜಾಗೊಳ್ಳಬೇಕು!

ಮೋದಿ-ಅಮಿತ್ ಶಾರ 'ಅಧಿಕಾರದಾಹ'ಕ್ಕೆ ಇಡೀ ಚುನಾವಣಾ ಆಯೋಗವನ್ನೇ ಬಲಿಪಶು ಮಾಡಿ, ದೇಶದ...