ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ನ 52ನೇ ಪಂದ್ಯದಲ್ಲಿ ಆತಿಥೇಯ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್ಗಳ ಜಯ ದಾಖಲಿಸಿದೆ. ಆದರೆ, ಈ ಪಂದ್ಯವು ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗುವ ಮೂಲಕ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದ ಪ್ರಸಂಗವೂ ನಡೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡವು ಆರ್ಸಿಬಿ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 19.3 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಗುವ ಮೂಲಕ, 148 ರನ್ಗಳ ಗುರಿ ನೀಡಿತ್ತು.
..And breathe @RCBTweets fans 😃
Swapnil Singh hits the winning runs 😎
Recap the match on @StarSportsIndia and @JioCinema 💻📱#TATAIPL | #RCBvGT pic.twitter.com/PHU2CIMP3n
— IndianPremierLeague (@IPL) May 4, 2024
ಈ ಗುರಿಯನ್ನು ಬೆನ್ನಟ್ಟಿದ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಉತ್ತಮ ಆರಂಭ ಪಡೆದಿತ್ತು. ಮೊದಲ ಓವರ್ನಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ 5.4 ಓವರ್ಗಳಲ್ಲಿ 92 ರನ್ ದಾಖಲಿಸಿದ್ದರು. ಆದರೆ ಫಾಫ್ ಡು ಪ್ಲೆಸಿಸ್ ಔಟಾದ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 92 ರನ್ ವೇಳೆ ಯಾವುದೇ ವಿಕೆಟ್ ನೀಡದಿದ್ದ ಆರ್ಸಿಬಿ, 117 ರನ್ ಗಳಿಸುವಷ್ಟರಲ್ಲಿ ಜೋಶ್ ಲಿಟ್ಟಲ್ ಅವರ ಮಾರಕ ದಾಳಿಗೆ ಸಿಲುಕಿ 6 ವಿಕೆಟ್ ಕಳೆದುಕೊಂಡಿತು.
Three wins in a row for @RCBTweets ❤️
They jump to number 7⃣ on the Points Table 👌👌
Scorecard ▶️ https://t.co/WEifqA9Cj1#TATAIPL | #RCBvGT pic.twitter.com/Ww9SIkivq0
— IndianPremierLeague (@IPL) May 4, 2024
ಕೊನೆಯಲ್ಲಿ ಆಧಾರವಾಗಿ ನಿಂತ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ತಾಳ್ಮೆಯ ಆಟವಾಡಿ 13.4 ಓವರ್ಗಳಲ್ಲಿ 152 ರನ್ ಗಳಿಸಿ, ಇನ್ನೂ 38 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿತು.
ಕಳೆದ ಮೂರೂ ಪಂದ್ಯಗಳಲ್ಲಿ ಮೂರನ್ನೂ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್ಸಿಬಿ, 7ನೇ ಸ್ಥಾನಕ್ಕೆ ಬಂದು ನಿಂತಿದೆ. ಆ ಮೂಲಕ ಪ್ಲೇ-ಆಫ್ ಆಸೆಯನ್ನೂ ಇನ್ನೂ ಕೂಡ ಅಭಿಮಾನಿಗಳಲ್ಲಿ ಜೀವಂತವಾಗಿರಿಸಿದೆ.
92ಕ್ಕೆ ಶೂನ್ಯ ವಿಕೆಟ್; 117ಕ್ಕೆ ಆರು ವಿಕೆಟ್!
ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ 5.4 ಓವರ್ಗಳಲ್ಲಿ 92 ರನ್ಗಳ ಜೊತೆಯಾಟ ನಡೆಸುವ ಮೂಲಕ ಸುಲಭ ಜಯ ನಿರೀಕ್ಷೆ ಹುಟ್ಟಿಸಿದ್ದರು.
Who would’ve thought RCB will need prayers after scoring 92/0 after 5.4 overs in a 148 run chase. pic.twitter.com/UphfWU0usk
— Mufaddal Vohra (@mufaddal_vohra) May 4, 2024
ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿ, ವಲ 23 ಬಾಲ್ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದರು. ಬರೋಬ್ಬರಿ 3 ಸಿಕ್ಸರ್, 10 ಬೌಂಡರಿ ಸಮೇತ 64 ರನ್ ಸಿಡಿಸಿದರು. ಬಳಿಕ ಬಂದ ಬ್ಯಾಟರ್ಗಳಾದ ವಿಲ್ ಜಾಕ್ಸ್(1 ರನ್), ರಜತ್ ಪಾಟೀದಾರ್(2 ರನ್), ಗ್ಲೆನ್ ಮ್ಯಾಕ್ಸ್ವೆಲ್ (4), ಕ್ಯಾಮರೂನ್ ಗ್ರೀನ್(1 ರನ್) ಪೆವಿಲಿಯನ್ ಪರೇಡ್ ನಡೆಸಿದರು. 42 ರನ್( ಗಳಿಸಿ ಆಸರೆಯಾಗುತ್ತಿದ್ದ ವಿರಾಟ್ ಕೊಹ್ಲಿ ಕೂಡ ಕ್ಯಾಚಿತ್ತು ನಿರ್ಗಮಿಸಿದರು.
Our highest PP total. Our best power play ever! 🔥🔥🔥#PlayBold #ನಮ್ಮRCB #IPL2024 #RCBvGT pic.twitter.com/mISBcP8GUQ
— Royal Challengers Bengaluru (@RCBTweets) May 4, 2024
ಜೋಶ್ ಲಿಟ್ಟಲ್ ಹಾಗೂ ನೂರ್ ಅಹ್ಮದ್ ಅವರ ಕರಾರುವಾಕ್ಕಾದ ಮಾರಕ ದಾಳಿಗೆ ಸಿಲುಕಿದ ಆರ್ಸಿಬಿ, 117ಕ್ಕೆ ಆರು ವಿಕೆಟ್ ಕಳೆದುಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಸೋಲಿನ ಆತಂಕ ಮೂಡಿಸುವ ಮೂಲಕ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.
ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ತಾಳ್ಮೆಯ ಆಟವಾಡಿದ್ದರಿಂದ 13.4 ಓವರ್ಗಳಲ್ಲಿ ಗೆಲುವಿನ ದಡ ತಲುಪಿಸಿದರು. ಮೊದಲು ಅಭಿಮಾನಿಗಳೆಲ್ಲರಿಗೂ ಖುಷಿ ನೀಡಿ, ಆ ಬಳಿಕ ಭಾರೀ ಭಯ ಹುಟ್ಟಿಸಿ, ಕೊನೆಯಲ್ಲಿ ಬಳಿಕ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ದಿನೇಶ್ ಕಾರ್ತಿಕ್ 12 ಎಸೆತಗಳಲ್ಲಿ 3 ಬೌಂಡರಿಯ ನೆರವಿನಿಂದ 21 ರನ್ ಗಳಿಸಿದರೆ, ಸ್ವಪ್ನಿಲ್ ಸಿಂಗ್ 9 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿಯ ನೆರವಿನಿಂದ 15 ರನ್ ಬಾರಿಸಿದರು.
An early storm, a few hiccups in the middle, but a solid comeback to conjure a barnstorming finish. 🙌
3 wins on the trot and a leap in the points table to finish the week on a high. 🫶#PlayBold #ನಮ್ಮRCB #IPL2024 #RCBvGT pic.twitter.com/lWfaudtnpo
— Royal Challengers Bengaluru (@RCBTweets) May 4, 2024
ಗುಜರಾತ್ ಪರ ಉತ್ತಮ ಬೌಲಿಂಗ್ ನಡೆಸಿದ ಐರ್ಲೆಂಡ್ನ ಯುವ ಬೌಲರ್ ಜೋಶ್ ಲಿಟ್ಟಲ್ 4 ಓವರ್ಗಳಲ್ಲಿ 45 ರನ್ ನೀಡಿದರೂ 4 ವಿಕೆಟ್ ಕಬಳಿಸಿ ಮಿಂಚಿದರೆ, ಅಫ್ಘಾನಿಸ್ತಾನ ಮೂಲದ ಸ್ಪಿನ್ನರ್ ನೂರ್ ಅಹ್ಮದ್ 23ಕ್ಕೆ 2 ವಿಕೆಟ್ ಪಡೆದುಕೊಂಡರು.
